logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tactic
ನಾಮವಾಚಕ
  • ಯುದ್ಧತಂತ್ರ; ಸಮರೋಪಾಯ.
  • ಕಾರ್ಯಸಾಧನೋಪಾಯ; ಯುಕ್ತಿ; ತಂತ್ರ.
  • = tactics.

  • tactical
    ಗುಣವಾಚಕ
  • ಯುದ್ಧತಂತ್ರದ; ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸಿ ಸಂಚಾಲಿಸುವ, ವ್ಯೂಹವಾಗಿ ನಿಲ್ಲಿಸುವ ಕಲೆಯ ಯಾ ಅದಕ್ಕೆ ಸಂಬಂಧಿಸಿದ.
  • ಯುಕ್ತಿಯಿಂದ ನಿಯೋಜಿಸಿದ; ತಂತ್ರೋಪಾಯದ; ತಂತ್ರದ.
  • (ಬಾಂಬಉದಾಳಿ ಯಾ ಆಯುಧಗಳ ವಿಷಯದಲ್ಲಿ) ತಕ್ಷಣದ; ಸೈನ್ಯದ ಯಾ ನೌಕಾಸೈನ್ಯದ ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಕೂಡಲೇ ಮಾಡುವ ಯಾ ಈ ಕಾರ್ಯಾಚರಣೆಗಳಲ್ಲಿ ಬಳಸುವ.
  • (ಮತದಾನದ ಯಾ ವೋಟಿನ ವಿಷಯದಲ್ಲಿ) ಅಡ್ಡಿಹೂಟದ; ತಡೆಹಂಚಿಕೆಯ; ಪ್ರತಿರೋಧ, ಪ್ರತಿಬಂಧಕ–ತಂತ್ರದ; ಅತ್ಯಂತ ಪ್ರಬಲ ಅಭ್ಯರ್ಥಿಯನ್ನು ಗೆಲ್ಲದಂತೆ ತಡೆಯಲು ನಂತರದ ಪ್ರಬಲ ಅಭ್ಯರ್ಥಿಯನ್ನು ಬೆಂಬಲಿಸುವ ಉದ್ದೇಶ ವುಳ್ಳ.

  • tactically
    ಕ್ರಿಯಾವಿಶೇಷಣ
  • ಯುದ್ಧತಂತ್ರಕ್ಕೆ ಅನುಗುಣವಾಗಿ ನಿಯೋಜಿಸಿ.
  • ತಂತ್ರೋಪಾಯದಿಂದ; ತಂತ್ರದಿಂದ.

  • tactician
    ನಾಮವಾಚಕ
  • ಯುದ್ಧ ತಂತ್ರನಿಪುಣ.
  • ಕಾರ್ಯತಂತ್ರಜ್ಞ; ಉಪಾಯಜ್ಞ.

  • tactics
    ನಾಮವಾಚಕ
    (ಬಹುವಚನ)
  • (ಏಕವಚನವಾಗಿ ಪ್ರಯೋಗ) ಯುದ್ಧತಂತ್ರ; ವ್ಯೂಹರಚನೆಯ ವಿದ್ಯೆ; ಸಮರೋಪಾಯ; ಯುದ್ಧದಲ್ಲಿ ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸುವ, ಸಂಚಾಲಿಸುವ ಮತ್ತು ವ್ಯೂಹವಾಗಿ ನಿಲ್ಲಿಸುವ ಕಲೆ.
    1. ಯೋಜನಾ ತಂತ್ರ; ಸಾಧನೋಪಾಯ; ಕಾರ್ಯತಂತ್ರ; ಸಮಯೋಪಾಯ: cannot approve of these tactics ಈ ಕಾರ್ಯತಂತ್ರವನ್ನು ಒಪ್ಪಲಾರೆ.
    2. ಚತುರೋಪಾಯ; ಜಾಣತಂತ್ರ; ಕುಶಲಯುಕ್ತಿ.

  • tactile
    ಗುಣವಾಚಕ
  • ಸ್ಪಾರ್ಶ:
    1. ಸ್ಪರ್ಶದ; ಸ್ಪರ್ಶೇಂದ್ರಿಯದ; ಸ್ಪರ್ಶೇಂದ್ರಿಯಕ್ಕೆ ಸಂಬಂಧಿಸಿದ: tactile impression ಸ್ಪರ್ಶದಿಂದ ಗ್ರಹಿಸಿದ ಭಾವನೆ.
    2. ಸ್ಪರ್ಶ–ಗ್ರಾಹ್ಯ, ವೇದ್ಯ; ಸ್ಪರ್ಶದಿಂದ ಗ್ರಹಿಸಿದ; ಮುಟ್ಟಿತಿಳಿಯುವ.
    3. ಸ್ಪಶ್ಯ; ಮುಟ್ಟಲಾಗುವ; ಸ್ಪರ್ಶನೀಯ: tactile qualities ಸ್ಪಶ್ಯ ಗುಣಗಳು.
  • (ಕಲೆ) (ವರ್ಣಚಿತ್ರಣದಲ್ಲಿ) ಘನರೂಪದ; ಘನಾಕಾರದ ಪರಿಣಾಮವುಂಟು ಮಾಡುವ, ಅದಕ್ಕೆ ಸಂಬಂಧಿಸಿದ; ತ್ರಿವಿಮಿತೀಯ; ಮೂರು ಆಯಾಮದ: tactile values ಘನರೂಪದ ಗುಣಗಳು.

  • tactility
    ನಾಮವಾಚಕ
    ಸ್ಪಾರ್ಶ್ಯತೆ; ಮುಟ್ಟಬಹುದಾಗಿರುವಿಕೆ ಯಾ ಮುಟ್ಟಿ ತಿಳಿಯಬಲ್ಲದಾಗಿರುವಿಕೆ.

    tactless
    ಗುಣವಾಚಕ
    ಸಮಯೋಪಾಯವಿಲ್ಲದ; ಔಚಿತ್ಯವರಿಯದ; ವ್ಯವಹಾರಕುಶಲತೆ ಇಲ್ಲದ.

    tactlessly
    ಕ್ರಿಯಾವಿಶೇಷಣ
    ಔಚಿತ್ಯವರಿಯದೆ; ಔಚಿತ್ಯಜ್ಞಾನವಿಲ್ಲದೆ; ವ್ಯವಹಾರ ಕುಶಲತೆಯಿಲ್ಲದೆ.

    tactlessness
    ನಾಮವಾಚಕ
    ಔಚಿತ್ಯಜ್ಞಾನಾಭಾವ; ಔಚಿತ್ಯವರಿಯದಿರುವಿಕೆ; ವ್ಯವಹಾರ ಕುಶಲತೆಯಿಲ್ಲದಿರುವಿಕೆ.


    logo