logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

sacerdotalist
ನಾಮವಾಚಕ
ಪೌರೋಹಿತ್ಯವಾದಿ; ಪುರೋಹಿತವಾದದ – ಪ್ರತಿಪಾದಕ ಯಾ ಸಮರ್ಥಕ.

sacerdotalize
ಸಕರ್ಮಕ ಕ್ರಿಯಾಪದ
ಪೌರೋಹಿತ್ಯಕ್ಕೆ ಒಳಪಡಿಸು; ಪುರೋಹಿತರಿಗೆ ಅಧೀನವಾಗಿಸು.

sacerdotally
ಕ್ರಿಯಾವಿಶೇಷಣ
ಪೌರೋಹಿತ್ಯವಾಗಿ; ಪುರೋಹಿತ ರೀತಿಯಲ್ಲಿ.

sachem
ನಾಮವಾಚಕ
  • ಕೆಲವು ಅಮೆರಿಕನ್‍ ಇಂಡಿಯನ್‍ ಬಣಗಳ ಪರಮೋಚ್ಚ ನಾಯಕ.
  • ಪ್ರತಿಷ್ಠಿತ ವ್ಯಕ್ತಿ; ದೊಡ್ಡ ಮನುಷ್ಯ.
  • (ಅಮೆರಿಕನ್‍ ಪ್ರಯೋಗ) ರಾಜಕೀಯ ಮುಖಂಡ ಯಾ ನಾಯಕ.

  • sachet
    ನಾಮವಾಚಕ
  • ಸಣ್ಣ ಚೀಲ, ಸಂಚಿ ಯಾ ಪೊಟ್ಟಣ; ಯಾವುದೇ ವಸ್ತುವಿನ, ಮುಖ್ಯವಾಗಿ ಷ್ಯಾಂಪೂವಿನ ಸ್ವಲ್ಪ ಭಾಗವನ್ನು ಇಡುವಂತಿರುವ, ಸಣ್ಣ ಚೀಲ.
  • ಚಿಕ್ಕ ಸುಗಂಧ ಚೀಲ, ಸಂಚಿ.
  • ಸುಗಂಧ; ಉಡುಪು ಮೊದಲಾದವುಗಳಲ್ಲಿಡಲು ಪೊಟ್ಟಣವಾಗಿ ಕಟ್ಟಿರುವ, ಪುಡಿಯಾದ ಪರಿಮಳ ಯಾ ಸುಗಂಧ ದ್ರವ್ಯ.
  • ಸುಗಂಧ (ದ್ರವ್ಯದ) ಪೊಟ್ಟಣ.

  • sack
    ನಾಮವಾಚಕ ಪದಗುಚ್ಛ
    hit the sack ಮಲಗು.
  • (ಸೆಬಉ, ಕಾಗದ ಯಾ ಪ್ಲಾಸ್ಟಿಕ್‍ನಿಂದ ಮಾಡಿದ, ಸಾಮಾನುಗಳನ್ನು ಶೇಖರಿಸಿಡಲು ಯಾ ಒಯ್ಯಲು ಬಳಸುವ, ಗಟ್ಟಿಯಾದ) ದೊಡ್ಡಚೀಲ; ಗೋಣಿಚೀಲ.
  • (ಪದಾರ್ಥಗಳನ್ನು ತುಂಬಿರುವ) ಚೀಲ; ಮೂಟೆ: a sack of potatoes ಆಲೂಗೆಡ್ಡೆಗಳ ಮೂಟೆ.
  • (ಧಾನ್ಯ ಮೊದಲಾದವುಗಳ ಅಳತೆಯಾಗಿ) ಚೀಲ; ಮೂಟೆ; ಒಂದು ಚೀಲದಲ್ಲಿ ಹಾಕುವಷ್ಟು ಪ್ರಮಾಣ: at 10 rupees a sack ಒಂದು ಮೂಟೆಗೆ 10 ರೂಪಾಯಿಗಳಂತೆ.
  • (ಆಡುಮಾತು) ವಜಾ; ಕೆಲಸದಿಂದ ತೆಗೆದುಹಾಕುವುದು.
  • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹಾಸಿಗೆ.
  • (ಉಡುಪಿನ ವಿಷಯದಲ್ಲಿ)
    1. ಹೆಂಗಸಿನ ಸಡಿಲವಾದ ಮೋಟು ದಗಲೆ ಯಾ ಕವುದಿ.
    2. (ಪ್ರಾಚೀನ ಪ್ರಯೋಗ ಯಾ ಚರಿತ್ರೆ) ತೊಂಗುವಸ್ತ್ರ; ನೆಲದ ಮೇಲೆ ಬಿದ್ದು ಹರಿಯುವಂತೆ ಉಡುಪಿನ ಭುಜಗಳಿಗೆ ಲಗತ್ತಿಸಿರುವ ನಿರಿಮಡಿಕೆಯ ರೇಷ್ಮೆ ಬಟ್ಟೆ.
  • (ಹೆಂಗಸಿನ ಯಾ ಗಂಡಸಿನ) ದಗಲೆ ಅಂಗಿ; ಕಪನಿ(ಣಿ); ಬೆನ್ನಿಗೆ ಸರಿಯಾಗಿ ಕೂರದ, ಸಡಿಲವಾಗಿ ತೊಂಗುವ ಅಂಗಿ.
  • ಯಾವುದೇ ಬಗೆಯ ಚೀಲ, ಮೂಟೆ.

  • sack
    ಸಕರ್ಮಕ ಕ್ರಿಯಾಪದ
  • ಚೀಲಕ್ಕೆ ಯಾ ಚೀಲಗಳಿಗೆ - ತುಂಬಉ, ಭರ್ತಿಮಾಡು.
  • (ಆಡುಮಾತು) ಕೆಲಸದಿಂದ ತೆಗೆದುಹಾಕು, ವಜಾ ಮಾಡು.

  • sack
    ಸಕರ್ಮಕ ಕ್ರಿಯಾಪದ
  • (ಗೆದ್ದ ಸೈನ್ಯ ಯಾ ಅದರ ಸೇನಾಪತಿಯ ವಿಷಯದಲ್ಲಿಪಟ್ಟಣ ಮೊದಲಾದವನ್ನು)
    1. ಕೊಳ್ಳೆ ಹೊಡೆ; ಸೂರೆ ಮಾಡು; ಲೂಟಿ ಹೊಡೆ; ಸುಲಿಗೆ ಮಾಡು.
    2. ಕೊಳ್ಳೆಗೆ ಈಡುಮಾಡು; ಸುಲಿಗೆಗೆ ಒಪ್ಪಿಸು.
  • (ಕಳ್ಳರು ಮೊದಲಾದವರ ವಿಷಯದಲ್ಲಿ) ದೋಚು; ದೋಚಿಕೊಂಡು ಹೋಗು; ಇದ್ದದ್ದನ್ನೆಲ್ಲಾ ಹೊತ್ತುಕೊಂಡು ಹೋಗು ಯಾ ಸಾಗಿಸು.

  • sack
    ನಾಮವಾಚಕ
    (ಪಟ್ಟಣ, ಸ್ಥಳ, ಮೊದಲಾದವುಗಳ) ಕೊಳ್ಳೆ; ಲೂಟಿ; ಸುಲಿಗೆ (ಮಾಡುವುದು).

    sack
    ನಾಮವಾಚಕ
    ಬಿಳಿ ದ್ರಾಕ್ಷಾಮದ್ಯ; ಮೊದಲಲ್ಲಿ ಸ್ಪೇನ್‍ ದೇಶ ಮತ್ತು ಕನೇರಿ ದ್ವೀಪಗಳಿಂದ ಬ್ರಿಟನ್ನಿಗೆ ಆಮದು ಮಾಡಿಕೊಳ್ಳುತ್ತಿದ್ದ, ಹಲವು ಬಗೆಯ ಬಿಳಿ ದ್ರಾಕ್ಷಾಮದ್ಯ.


    logo