logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

sabre
ನಾಮವಾಚಕ
  • ಬಾಗುಕತ್ತಿ; ಕೊಂಕು ಕತ್ತಿ; ರಾವುತರ, ಬಾಗಿದ ಅಲಗಿನ ಕತ್ತಿ. Figure: sabre
  • ರಾವುತ ಮತ್ತು ಕುದುರೆ: had 300 sabres ಮುನ್ನೂರು ರಾವುತರು ಮತ್ತು ಕುದುರೆಗಳನ್ನು ಪಡೆದಿತ್ತು.
  • ಕತ್ತಿವರಸೆ ಕತ್ತಿ; ಚೂಪಾದ ಅಲಗುಳ್ಳ, ಕತ್ತಿವರಿಸೆಯಲ್ಲಿ ಬಳಸುವ, ಹಗುರ ಕತ್ತಿ.
  • (ಬಹುವಚನದಲ್ಲಿ, ಚರಿತ್ರೆ) ರಾವುತದಳ; ಅಶ್ವದಳ.
  • ಗೋರು ಹಲ್ಲೆ ಯಾ ಸೌಟು; ಕರಗಿದ ಗಾಜಿನ ಮೇಲ್ಪದರುಗಳಲ್ಲಿರುವ ಕೊಳೆಯನ್ನು ಬಾಚಿ ತೆಗೆಯುವ ತಾಮ್ರದ ಸಲಕರಣೆ.

  • sabre
    ಸಕರ್ಮಕ ಕ್ರಿಯಾಪದ
    ಕೊಂಕು ಕತ್ತಿಯಿಂದ ಕಡಿ ಯಾ ಗಾಯಗೊಳಿಸು.

    sabre-bill
    ನಾಮವಾಚಕ
    ಬಾಗು ಕೊಕ್ಕು (ಹಕ್ಕಿ); ಕ್ಯಾಂಪಲೋರ್ಯಾಂಪಸ್‍ ಕುಲದ, ಉದ್ದವಾದ ಬಾಗಿದ ಕೊಕ್ಕುಳ್ಳ, ದಕ್ಷಿಣ ಅಮೆರಿಕದ ಯಾವುದೇ ಪಕ್ಷಿ.

    sabre-cut
    ನಾಮವಾಚಕ
  • ಕೊಂಕುಕತ್ತಿ ಏಟು.
  • ಕೊಂಕುಕತ್ತಿಯ ಗಾಯ ಯಾ ಗಾಯದ ಕಲೆ.

  • sabre-rattling
    ನಾಮವಾಚಕ
  • ಸೈನ್ಯಬಲದ ಪ್ರದರ್ಶನ.
  • ಕತ್ತಿ ಝಳಪಿಸುವಿಕೆ; ಬಲಪ್ರಯೋಗದ ಬೆದರಿಕೆ; ಸೈನ್ಯಬಲ ಪ್ರಯೋಗಿಸುವುದಾಗಿ ಹಾಕಿದ ಬೆದರಿಕೆ.

  • sabre-toothed
    ಗುಣವಾಚಕ ಪದಗುಚ್ಛ
    (ವಂಶನಷ್ಟವಾಗಿರುವ ವಿವಿಧ ಸಸ್ತನಿಗಳ ವಿಷಯದಲ್ಲಿ) ಕತ್ತಿಹಲ್ಲಿನ; ಕೊಂಕುಕತ್ತಿಯಾಕಾರದ, ಉದ್ದವಾದ ಮೇಲ್ಕೋರೆ ಹಲ್ಲುಗಳುಳ್ಳ. sabre-toothed lion (or tiger) ಕತ್ತಿಹಲ್ಲಿನ ಸಿಂಹ (ಯಾ ಹುಲಿ); ಕೊಂಕುಕತ್ತಿಯಾಕಾರದ ಉದ್ದವಾದ ಮೇಲ್ಕೋರೆ ಹಲ್ಲುಗಳಿದ್ದ, ಒಂದು ನಷ್ಟ ಸಸ್ತನಿ.

    sabre-wing
    ನಾಮವಾಚಕ
    ಬಾಗುರೆಕ್ಕೆ (ಹಕ್ಕಿ); ಕ್ಯಾಂಪಲಾಪ್ಟರಸ್‍ ಹಾಲ್ಕಟಸ್‍ ಕುಲಕ್ಕೆ ಸೇರಿದ, ಬಾಗಿದ ರೆಕ್ಕೆಗಳುಳ್ಳ, ದಕ್ಷಿಣ ಅಮೆರಿಕದ ಝೇಂಕಾರದ ಹಕ್ಕಿ.

    sabretache
    ನಾಮವಾಚಕ
    ರಾವುತ ಚೀಲ; ರಾವುತಾಧಿಕಾರಿಯ ನಡುಪಟ್ಟಿಯ ಎಡಗಡೆ ಉದ್ದವಾದ ಪಟ್ಟಿಗಳಿಂದ ತೂಗುಹಾಕಿದ, ಚರ್ಮದ ಚೀಲ.

    sabreur
    ನಾಮವಾಚಕ
    ಖಡ್ಗಧಾರಿ ರಾವುತ; ಕೊಂಕುಕತ್ತಿ ಬಳಸುವ, ಮುಖ್ಯವಾಗಿ ರ್ಬಾಗಿ ಕಾಣುವ, ರಾವುತ.

    sabulous
    ಗುಣವಾಚಕ
  • (ಪಂಡಿತ ಪ್ರಯೋಗ) ಸೈಕತ; ಮರಳಿನ.
  • (ವೈದ್ಯಶಾಸ್ತ್ರ) (ಮುಖ್ಯವಾಗಿ ಮೂತ್ರಾಂಗಗಳಲ್ಲಿ ಆಗುವ ಸ್ರಾವಗಳ ವಿಷಯದಲ್ಲಿ) ಮರಳಿನಂಥ; ಹರಳುಹರಳಾದ.


  • logo