logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

safe-breaker
ನಾಮವಾಚಕ
= safe-blower.

safe-cracker
ನಾಮವಾಚಕ
= safe-blower.

safegaurd
ನಾಮವಾಚಕ
  • ರಕ್ಷಣೆ; ಕಾಪು; ರಕ್ಷಣೋಪಾಯ; ಅಪಾಯವನ್ನು ತಡೆಗಟ್ಟುವ ಯಾ ರಕ್ಷಣೆ ನೀಡುವ ಸಂದರ್ಭ, ಗುಣ, ಷರತ್ತು ಯಾ ನಿಯಮ.
  • = safe conduct.

  • safegaurd
    ಸಕರ್ಮಕ ಕ್ರಿಯಾಪದ
    (ಮುಖ್ಯವಾಗಿ ಹಕ್ಕು ಮೊದಲಾದವನ್ನು ಮುಂಜಾಗರೂಕತೆಯಿಂದ ಯಾ ಷರತ್ತಿನ ಮೂಲಕ) ರಕ್ಷಿಸು; ಕಾಪಾಡು.

    safegaurding duties
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಸಂರಕ್ಷಣೆ, ಕಾಪು – ಸುಂಕ; ಅನ್ಯಾಯವಾದ ಪೈಪೋಟಿಯಿಂದ ರಕ್ಷಿಸಲು ಆಮದು ವಸ್ತುಗಳ ಮೇಲೆ ಹಾಕುವ ಸುಂಕ.

    safely
    ಕ್ರಿಯಾವಿಶೇಷಣ
  • ಭದ್ರವಾಗಿ.
  • ಸುರಕ್ಷಿತವಾಗಿ.

  • safeness
    ನಾಮವಾಚಕ
  • ಭದ್ರತೆ.
  • ಸುರಕ್ಷಿತ ಸ್ಥಿತಿ.

  • safety
    ನಾಮವಾಚಕ ಪದಗುಚ್ಛ
  • ಸುರಕ್ಷಿತತೆ; ಸುರಕ್ಷಿತ ಸ್ಥಿತಿ; ನಿರಪಾಯ ಸ್ಥಿತಿ; ಕ್ಷೇಮ, ನಿರ್ಭಯ – ಸ್ಥಿತಿ: there is safety in numbers ಸಂಖ್ಯೆಯಿದ್ದಲ್ಲಿ ಯಾ ಗುಂಪಿದ್ದಲ್ಲಿ ಕ್ಷೇಮ. is in safety ಸುರಕ್ಷಿತವಾಗಿದ್ದಾನೆ. cannot do it with safety ಅಪಾಯವಿಲ್ಲದೆ ಅದನ್ನು ಮಾಡಲಾಗದು. play for safety (ಆಟದಲ್ಲಿ, ರೂಪಕವಾಗಿ ಸಹ) ಅಪಾಯಗಳಿಂದ ದೂರವಿರು; ಸಾಹಸ ಮಾಡಬೇಡ; ಆತ್ಮರಕ್ಷಣೆಯ ದೃಷ್ಟಿಯಿಂದ ಆಡು ಯಾ ವರ್ತಿಸು.
  • (ವಿಶೇಷಣ ವಾಗಿ)
    1. (ಸು)ರಕ್ಷಣೆಯ; ಯಂತ್ರಗಳಿಂದ ಅಪಾಯವಾಗದಂತೆ ರಕ್ಷಿಸುವ ವಿವಿಧ ರಕ್ಷಣೋಪಾಯಗಳಲ್ಲೊಂದನ್ನು ಸೂಚಿಸುವ: safety bar ರಕ್ಷಣಾ ದಂಡ. safety lock ರಕ್ಷಣಾ ಬೀಗ.
    2. ರಕ್ಷಣೆಯ ಉಡುಪುಗಳನ್ನು ಸೂಚಿಸುವ: safety helmet ರಕ್ಷಣಾ ಶಿರಸ್ತ್ರಾಣ.
  • ಸುರಕ್ಷಿತತೆ; ಸುರಕ್ಷಣೆ; ಭದ್ರತೆ; ನಿರಪಾಯತೆ; ನಿರುಪದ್ರವತೆ: is the safety of the experiment certain? ಪ್ರಯೋಗದ ನಿರಪಾಯತೆ ಖಚಿತವೋ?
  • = safety-catch.

  • safety curtain
    ನಾಮವಾಚಕ
    ಕಾಪು – ಪರದೆ, ತೆರೆ; ರಕ್ಷಣೆ ತೆರೆ; ನಾಟಕ ಮಂದಿರದಲ್ಲಿ ಪ್ರೇಕ್ಷಕಾಂಗಣವನ್ನು ರಂಗದಿಂದ ಬೇರ್ಪಡಿಸುವ, ಬೆಂಕಿ ಹೊತ್ತದ ಪರದೆ.

    safety deposit
    ನಾಮವಾಚಕ
    = safe deposit.


    logo