logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

sacred history
ನಾಮವಾಚಕ
ಪವಿತ್ರ ಚರಿತ್ರೆ; ಬೈಬಲ್‍ನಲ್ಲಿ ನಿರೂಪಿತವಾಗಿರುವ ಚರಿತ್ರೆ.

sacred ibis
ನಾಮವಾಚಕ
(ಪುರಾತನ ಇಜಿಪ್ಷಿಯನ್ನರು ಪೂಜಿಸುತ್ತಿದ್ದ) ಪವಿತ್ರ ಐಬಿಸ್‍ ಪಕ್ಷಿ.

sacred monkey
ನಾಮವಾಚಕ
(ಭಾರತೀಯರ) ಪವಿತ್ರ ವಾನರ; ಹನುಮಂತನ ಪ್ರತೀಕವೆಂದು ಪರಿಗಣಿಸಿರುವ ಕಪಿ.

sacred music
ನಾಮವಾಚಕ
ಧಾರ್ಮಿಕ ಸಂಗೀತ; ಧಾರ್ಮಿಕ ವಿಷಯದ ಸಂಗೀತ.

sacred number
ನಾಮವಾಚಕ
ಪವಿತ್ರ ಸಂಖ್ಯೆ; ಧಾರ್ಮಿಕ ಸಂಕೇತಾರ್ಥವುಳ್ಳ ಸಂಖ್ಯೆ, ಉದಾಹರಣೆಗೆ 3, 7, ಮೊದಲಾದವು.

sacred poetry
ನಾಮವಾಚಕ
ಧಾರ್ಮಿಕ ಕಾವ್ಯ; ಧಾರ್ಮಿಕ ವಿಷಯದ ಕಾವ್ಯ.

sacred writings
ನಾಮವಾಚಕ
= sacred book.

sacredly
ಕ್ರಿಯಾವಿಶೇಷಣ
  • ಪವಿತ್ರವಾಗಿ.
  • ಧಾರ್ಮಿಕವಾಗಿ.
  • ಪೂಜ್ಯಭಾವನೆಯಿಂದ.

  • sacredness
    ನಾಮವಾಚಕ
  • ಪಾವಿತ್ರ.
  • ಧಾರ್ಮಿಕತೆ.
  • ಪೂಜ್ಯತೆ.

  • sacrifice
    ನಾಮವಾಚಕ ಪದಗುಚ್ಛ
    the great (or last or supreme) sacrifice ಮಹಾತ್ಯಾಗ; ಅಂತಿಮ ಯಾ ಪರಮ ತ್ಯಾಗ; ಮುಖ್ಯವಾಗಿ ಯುದ್ಧದಲ್ಲಿ ಸ್ವದೇಶಕ್ಕಾಗಿ ಪ್ರಾಣತ್ಯಾಗ.
    1. ತ್ಯಾಗ; ಒಂದನ್ನು ಅದಕ್ಕಿಂತ ಉತ್ತಮವಾದ ಮತ್ತು ಹೆಚ್ಚು ಆವಶ್ಯಕವಾದ ಮತ್ತೊಂದಕ್ಕಾಗಿ ತ್ಯಜಿಸುವುದು ಯಾ ಬಿಡುವುದು: will gain nothing by the sacrifice of your principles ನಿನ್ನ ತತ್ತ್ವಗಳ ತ್ಯಾಗದಿಂದ ಏನೂ ಲಾಭವಿಲ್ಲ.
    2. (ಹೀಗೆ) ತ್ಯಜಿಸಿದ್ದು; ತ್ಯಕ್ತವಾದುದು; ಬಿಟ್ಟದ್ದು: at some sacrifice of regularity ನಿಯತತೆಯನ್ನು ಸ್ವಲ್ಪ ತ್ಯಜಿಸಿ.
    3. (ಹೀಗೆ ಮಾಡಿದ ತ್ಯಾಗದಿಂದ ಆದ) ನಷ್ಟ : surplus stock for sale at a large sacrifice ಬಹಳ ನಷ್ಟದ ಬೆಲೆಗೆ ಮಾರಾಟಕ್ಕಿಟ್ಟ ಹೆಚ್ಚುವರಿ ದಾಸ್ತಾನು ಸರಕು.
    1. ಬಲಿ; ಯಜ್ಞ; ಯಾಗ; ಪಶುಬಲಿ; ನರಮೇಧ; ಕಾಣಿಕೆಯಾಗಿ ದೇವರಿಗೆ ಪ್ರಾಣಿ ಯಾ ವ್ಯಕ್ತಿಯನ್ನು ಬಲಿಗೊಡುವುದು ಯಾ ತ್ಯಾಗ ಮಾಡುವುದು.
    2. ಬಲಿ; ಆಹುತಿ; ಬಲಿಯಾಗಿ ಅರ್ಪಿಸಿದ ಪ್ರಾಣಿ, ವ್ಯಕ್ತಿ ಯಾ ವಸ್ತು.
  • (ರೂಪಕವಾಗಿ) (ಶಮನಾರ್ಥವಾಗಿ ಮಾಡುವ) ಪ್ರಾರ್ಥನೆ; ವಂದನಾರ್ಪಣೆ; ಪ್ರಾಯಶ್ಚಿತ್ತ; ಶಾಂತಿ.
  • (ದೇವತಾಶಾಸ್ತ್ರ)
    1. ಕ್ರಿಸ್ತನ ಕ್ರೂಶಾರೋಹಣ; ಶಿಲುಬೆಯೇರಿಕೆ.
    2. ಪ್ರಭುಭೋಜನ ಕರ್ಮ; ದೇವ ತೃಪ್ತರ್ಥವಾಗಿ ಕ್ರಿಸ್ತನ ದೇಹ ಮತ್ತು ರಕ್ತಗಳ ಸಮರ್ಪಣೆಯೆಂದೋ, ವಂದನಾಸಮರ್ಪಣ ಕರ್ಮವೆಂದೋ ಆಚರಿಸುವ ಪ್ರಭುಭೋಜನ ಸಂಸ್ಕಾರ.
  • (ಆಟಗಳಲ್ಲಿ) ತ್ಯಾಗ; ಹೆಚ್ಚಿನ ನಷ್ಟವನ್ನು ತಪ್ಪಿಸಲು ಯಾ ಪರಿಹಾರರೂಪವಾದ ಅನುಕೂಲ, ಲಾಭ ಪಡೆಯಲು ಅನುಭವಿಸಿದ ನಷ್ಟ.


  • logo