logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

sacrament
ನಾಮವಾಚಕ ಪದಗುಚ್ಛ
  • (ಆಂತರಿಕ ಹಾಗೂ ಆಧ್ಯಾತ್ಮಿಕ ಅನುಗ್ರಹದ ಬಾಹ್ಯ ಮತ್ತು ಪ್ರತ್ಯಕ್ಷ ಚಿಹ್ನೆಯೆಂದು ಭಾವಿಸಿರುವ) ಧಾರ್ಮಿಕ ಕರ್ಮ; ಪವಿತ್ರ ಸಂಸ್ಕಾರ; ಮತಸಂಸ್ಕಾರ (ಪೌರಸ್ತ, ರೆಫರ್ಮೇಷನ್‍ ಪೂರ್ವದ ಪಾಶ್ಚಾತ್ಯ ಹಾಗೂ ರೋಮನ್‍ ಕ್ಯಾಥೊಲಿಕ್‍ ಚರ್ಚುಗಳು ಜ್ಞಾನಸ್ನಾನ (baptism), ಸ್ಥಿರೀಕರಣ (confirmation), ಪ್ರಭುಭೋಜನ (Eucharist), ಪ್ರಾಯಶ್ಚಿತ್ತ (penance), ಅಂತ್ಯಾಭ್ಯಂಜನ (extreme unction), ದೀಕ್ಷೆ (ordination) ಮತ್ತು ವಿವಾಹ (matrimony) ಎಂಬ ಏಳು ಸಂಸ್ಕಾರಗಳಿಗೆ ಬಳಸುವ ಪದ; ಪ್ರಾಟೆಸ್ಟೆಂಟರ ಬಹಳ ಜನರಲ್ಲಿ ಈ ಪದ ಜ್ಞಾನಸ್ನಾನ ಮತ್ತು ಪ್ರಭುಭೋಜನಗಳಿಗೆ ಸೀಮಿತವಾಗಿದೆ).
    1. ಮಾಂತ್ರಿಕ ವಸ್ತು; ರಹಸ್ಯಾರ್ಥದ ಪವಿತ್ರ ವಸ್ತು.
    2. ಪವಿತ್ರ – ಪ್ರಭಾವ, ಚಿಹ್ನೆ, ಸಂಕೇತ, ಮೊದಲಾದವು.
    3. (ಧಾರ್ಮಿಕ ಆಚರಣೆಯಿಂದ ಸಮರ್ಥಿಸಿದ) ಆಣೆ; ಶಪಥ; ಪ್ರತಿಜ್ಞೆ.
    1. ಪ್ರಭುಭೋಜನ ಕರ್ಮ ಯಾ ಸಂಸ್ಕಾರ.
    2. (ಈ ಕರ್ಮದಲ್ಲಿನ) ಪವಿತ್ರೀಕೃತ ಪದಾರ್ಥಗಳು, ಮುಖ್ಯವಾಗಿ ಬ್ರೆಡ್ಡು.

  • sacramental
    ಗುಣವಾಚಕ
  • ಪವಿತ್ರ ಕರ್ಮದ; ಮತಸಂಸ್ಕಾರದ.
  • ಪವಿತ್ರ ಕರ್ಮರೂಪದ; ಮತಸಂಸ್ಕಾರದಂಥ.
  • ಪ್ರಭುಭೋಜನ ಸಂಸ್ಕಾರದ ಯಾ ಅದರಂಥ.
  • (ತತ್ತ, ಸಿದ್ಧಾಂತ, ಮೊದಲಾದವುಗಳ ವಿಷಯದಲ್ಲಿ) ಮತಸಂಸ್ಕಾರಗಳಿಗೆ ಬಹಳ ಪ್ರಾಧಾನ್ಯ ನೀಡುವ.

  • sacramental
    ನಾಮವಾಚಕ
    ಮತ ಸಂಸ್ಕಾರ ಸದೃಶ ಕರ್ಮ ಯಾ ಆಚರಣೆ; ಸಪ್ತ ಸಂಸ್ಕಾರಗಳಲ್ಲಿ ಸೇರಿಲ್ಲದ, ಆದರೆ ಅವುಗಳಂತೆಯೇ ಆಚರಿಸುವ (ಉದಾಹರಣೆಗೆ ಪವಿತ್ರೋದಕ ಪ್ರೋಕ್ಷಣೆ, ಶಿಲುಬೆಯ ಚಿಹ್ನೆಯ ನ್ಯಾಸ, ಮೊದಲಾದವುಗಳ) ಆಚರಣೆ.

    sacramentalism
    ನಾಮವಾಚಕ
  • ಮತಸಂಸ್ಕಾರಪ್ರಾಧಾನ್ಯತಾ ವಾದ; ಮತಸಂಸ್ಕಾರ ಪ್ರಾಮುಖ್ಯ(ತೆ).
  • ಸಾನ್ನಿಧ್ಯ ನಿರಾಕರಣ ವಾದ.

  • sacramentalist
    ನಾಮವಾಚಕ
  • ಮತಸಂಸ್ಕಾರವಾದಿ;ಮತಸಂಸ್ಕಾರ ಪ್ರಾಮುಖ್ಯತಾ ವಾದಿ.
  • = 2sacramentarian\((1)\).

  • sacramentality
    ನಾಮವಾಚಕ
    ಮತಸಂಸ್ಕಾರತ್ವ; ಪವಿತ್ರ ಕರ್ಮತೆ.

    sacramentally
    ಕ್ರಿಯಾವಿಶೇಷಣ
    ಮತಸಂಸ್ಕಾರ ರೀತಿಯಲ್ಲಿ; ಮತಸಂಸ್ಕಾರದಂತೆ.

    sacramentarian
    ಗುಣವಾಚಕ
  • (ಚರಿತ್ರೆ) ಸಾನ್ನಿಧ್ಯ ನಿರಾಕರಣ ವಾದದ ಯಾ ವಾದಿಯ; ಪ್ರತ್ಯಕ್ಷತಾ ನಿರಾಕರಣ ವಾದದ ಯಾ ವಾದಿಯ; ಕ್ರೈಸ್ತ ಪ್ರಭುಭೋಜನದಲ್ಲಿ ಕ್ರಿಸ್ತನ ದೇಹ ಮತ್ತು ರಕ್ತ ವಾಸ್ತವಿಕವಾಗಿರುವುದಿಲ್ಲವೆಂದೂ, ಅವು ಸಂಕೇತ ಮಾತ್ರವೆಂದೂ ನಂಬಉವ ಯಾ ನಂಬಉವವನ.
  • = 1sacramental (1 & 3).

  • sacramentarian
    ನಾಮವಾಚಕ
  • (ಚರಿತ್ರೆ) ಸಾನ್ನಿಧ್ಯ ನಿರಾಕರಣವಾದಿ.
  • = sacramentalist\((1)\).

  • sacramentarianism
    ನಾಮವಾಚಕ
    ಸಾನ್ನಿಧ್ಯ ನಿರಾಕರಣ ವಾದ.


    logo