logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

rack
ಸಕರ್ಮಕ ಕ್ರಿಯಾಪದ
  • (ಚರಿತ್ರೆ) (ಮುಖ್ಯವಾಗಿ ಚಿತ್ರಹಿಂಸೆಗಾಗಿ ನಿರ್ಮಿಸಿದ ಚೌಕಟ್ಟು ಯಾ ಹಾಸಿಗೆಗೆ ಕಟ್ಟಿ, ವ್ಯಕ್ತಿಯ) ಕೀಲುಗಳನ್ನು ಹಿಗ್ಗಲಿಸು.
  • (ರೋಗದ ಯಾ ದೈಹಿಕ ಹಾಗೂ ಮಾನಸಿಕ ಯಾತನೆಯ ವಿಷಯದಲ್ಲಿ) ಚಿತ್ರಹಿಂಸೆ ಕೊಡು, ಮಾಡು: a racking headache ಚಿತ್ರಹಿಂಸೆ ಕೊಡುವ ತಲೆಶೂಲೆ.
    1. ಚಿತ್ರಹಿಂಸೆಯಾಗುವಂತೆ ಕುಲುಕಿಬಿಡು, ಅಲ್ಲಾಡಿಸಿಬಿಡು.
    2. ಕಾಲುಕೀಲುಗಳನ್ನೆಲ್ಲ ಎಳೆದು ಹಿಂಸಿಸು; ಹಿಗ್ಗಾಮುಗ್ಗಾ ಎಳೆದು ಯಾತನೆಯುಂಟುಮಾಡು: cough that seemed to rack his whole body ಅವನ ಮೈಯನ್ನೆಲ್ಲ ಅಲ್ಲಾಡಿಸಬಿಡುವಂತಿದ್ದ ಕೆಮ್ಮು.
    3. ಅತಿಯಾದ ಶ್ರಮ ಕೊಡು; ವೇದನೆಯಾಗುವಷ್ಟು ಶ್ರಮಪಡಿಸು: racked his brains for a plan ವುದಾದರೂ ಒಂದು ಉಪಾಯ ಹವಣಿಸಲು ತನ್ನ ಮಿದುಳಿಗೆ ಆದಷ್ಟೂ ಶ್ರಮಕೊಟ್ಟ, ತಲೆತುರುಚಿಕೊಂಡ.
    1. (ಸಾಧ್ಯವಾದಷ್ಟೂ) ಅತಿಯಾದ ಕಂದಾಯವನ್ನು ಯಾ ಮೊಬಲಗನ್ನು ಕೀಳು, ಸುಲಿದುಕೊ, ವಸೂಲು ಮಾಡು.
    2. ಅತಿ ಕಂದಾಯ ವಸೂಲು ಮಾಡಿ ರೈತರನ್ನು ಯಾ ಗುತ್ತಿಗೆದಾರನನ್ನು, ಅತಿ ಬಾಡಿಗೆಯಿಂದ ಬಾಡಿಗೆದಾರರನ್ನು – ಹಿಂಸಿಸು.
    3. ಅತಿಯಾಗಿ ಬೆಳೆ ತೆಗೆದು ಜಮೀನನ್ನು ನಿಸ್ಸಾರಗೊಳಿಸು, ಸತ್ತ್ವಹೀನವಾಗಿಸು.

  • rack
    ನಾಮವಾಚಕ ಪದಗುಚ್ಛ
    (ಚರಿತ್ರೆ) ಚಿತ್ರಹಿಂಸೆಯ ಹಾಸಿಗೆ; ಚಿತ್ರಹಿಂಸೆಗೆ ಒಳಪಡಿಸಿದವನನ್ನು ಅಂಗಾತನಾಗಿ ಮಲಗಿಸಿ ಅವನ ಕೈಕಾಲುಗಳನ್ನು ಎಳೆದು ಕಟ್ಟಿ ಎರಡು ತುದಿಗಳಲ್ಲೂ ಇರುವ ಭಾರವಾದ ಉರುಳೆಗಳನ್ನು ಹಿಂದಕ್ಕೂ ಮುಂದಕ್ಕೂ ಉರುಳಿಸಿ ಅವನ ಕೀಲುಗಳನ್ನೆಲ್ಲ ಹಿಗ್ಗಾಮುಗ್ಗಾ ಎಳೆದು ನರಕಯಾತನೆಗೆ ಗುರಿಮಾಡಲು ಬಳಸುತ್ತಿದ್ದ ಚೌಕಟ್ಟು. on the rack
  • ಚಿತ್ರಹಿಂಸೆಯ ಹಾಸಿಗೆಯ ಮೇಲೆ.
  • ಘೋರ ಸಂಕಟಕ್ಕೆ ಸಿಕ್ಕಿ; ಚಿತ್ರಹಿಂಸೆಗೆ ಒಳಗಾಗಿ.

  • rack
    ನಾಮವಾಚಕ
    = arrack (ಮುಖ್ಯವಾಗಿ rack punch ಎಂಬಲ್ಲಿ ಬಳಕೆ).

    rack
    ನಾಮವಾಚಕ
    ಕುಕ್ಕೋಟಕ್ಕೂ ಮಂದಗತಿಯ ನಾಗಾಲೋಟಕ್ಕೂ ಮಧ್ಯಸ್ಥ ವೇಗದ, ಕುದುರೆಯ ನಡಗೆ, ಗತಿ.

    rack
    ಅಕರ್ಮಕ ಕ್ರಿಯಾಪದ
    (ಕುದುರೆಯ ವಿಷಯದಲ್ಲಿ) ಕುಕ್ಕೋಟಕ್ಕೂ ಮಂದಗತಿಯ ನಾಗಾಲೋಟಕ್ಕೂ ಮಧ್ಯಸ್ಥ ವೇಗದಲ್ಲಿ ನಡೆ.

    rack
    ಸಕರ್ಮಕ ಕ್ರಿಯಾಪದ
    (ದ್ರಾಕ್ಷಿಯ ಯಾ ಸೇಬಿನ ಗಷ್ಟನ್ನು ಯಾ ಕಸರನ್ನು ಹಿಂಡಿ) ವೈನನ್ನು ತೆಗೆ.

    rack
    ನಾಮವಾಚಕ
    ವಿನಾಶ; ಹಾಳು; ಧ್ವಂಸ: go to rack and ruin ಧ್ವಂಸವಾಗಿ ಹೋಗು.

    rack
    ನಾಮವಾಚಕ
    ಕುರಿಮರಿ ಮೊದಲಾದವುಗಳ, ಮುಂದಿನ ಪಕ್ಕೆಲುಬುಗಳನ್ನೊಳಗೊಂಡ ಅಂಗಭಾಗ.

    rack-railway
    ನಾಮವಾಚಕ
    (ಕಡಿದಾದ ಮಾರ್ಗದಲ್ಲಿ ಬಂಡಿಗಳು ಹಿಂದಕ್ಕೆ ಸರಿಯದಂತೆ) ರೈಲುಹಾದಿಯಲ್ಲಿ ಸಾಧಾರಣವಾಗಿ ಇರುವ ಎರಡು ಕಂಬಿಗಳ ನಡುವೆ ಹಲ್ಲುಕಂಬಿಯೊಂದನ್ನು ಹಾಕಿರುವ ರೈಲುಮಾರ್ಗ; ಹಲ್ಲುಕಂಬಿ ರೈಲುಮಾರ್ಗ.

    rack-rent
    ನಾಮವಾಚಕ
  • ಆದಾಯ ಸಮಕಂದಾಯ; ಜಮೀನಿನ ಯಾ ಬೇರೆ ಆಸ್ತಿಯ ವಾರ್ಷಿಕ ಆದಾಯಕ್ಕೆ ಹೆಚ್ಚುಕಡಮೆ ಸರಿಸಮನಾದ ಕಂದಾಯ.
  • ದುಬಾರಿ ಕಂದಾಯ ಯಾ ಬಾಡಿಗೆ.


  • logo