logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

racialist
ಗುಣವಾಚಕ
ವರ್ಣಭೇದ ನೀತಿಯ ಯಾ ಅದಕ್ಕೆ ಸಂಬಂಧಿಸಿದ.

racially
ಕ್ರಿಯಾವಿಶೇಷಣ
ಜನಾಂಗೀಯವಾಗಿ; ಕುಲವಂಶ ಯಾ ಜನಾಂಗದ – ದೃಷ್ಟಿಯಿಂದ ಆಧಾರದಿಂದ; ವಂಶ ಯಾ ಜನಾಂಗವನ್ನು ಅನುಸರಿಸಿ.

racily
ಕ್ರಿಯಾವಿಶೇಷಣ
ಸಹಜಗುಣವಿಶಿಷ್ಟವಾಗಿ; ಸಹಜ ಸರಳತೆ, ಓಜಸ್ಸು, ಜೀವಂತಿಕೆ ಮತ್ತು ತೀಕ್ಷ್ಣತೆಗಳಿಂದ ಕೂಡಿ.

raciness
ನಾಮವಾಚಕ
ಸಹಜಗುಣವಿಶಿಷ್ಟತೆ; ಸಹಜ ಸರಳತೆ, ಓಜಸ್ಸು, ಜೀವಂತಿಕೆ, ತೀಕ್ಷ್ಣತೆಗಳಿಂದ ಕೂಡಿರುವಿಕೆ.

racing car
ನಾಮವಾಚಕ
ರೇಸಿಂಗ್‍ ಕಾರು; ಸಿದ್ಧಪಡಿಸಿದ ಜಾಡಿನಲ್ಲಿ ಪಂದ್ಯಕ್ಕಾಗಿ ಓಡಲು ನಿರ್ಮಿಸಿದ ಮೋಟಾರು ಕಾರು.

racism
ನಾಮವಾಚಕ
  • ವರ್ಣಭೇದ ನೀತಿ; ಜನಾಂಗಭೇದ ನೀತಿ; ಶ್ವೇತವರ್ಣೀಯರೇ ಶ್ರೇಷ್ಠ, ಇತರ ವರ್ಣೀಯರೆಲ್ಲ ಕೀಳು ಎಂದು ಪ್ರತಿಪಾದಿಸುವ ವಾದ, ಅನುಸರಿಸುವ ನೀತಿ.
  • ಜನಾಂಗೀಯವಾದ; ಮಾನವನ ಬುದ್ಧಿಶಕ್ತಿ ಮೊದಲಾದವು ಅವನ ಕುಲ, ವಂಶ ಯಾ ಜನಾಂಗವನ್ನವಲಂಬಿಸಿದೆಯೆಂಬ ವಾದ.

  • rack
    ನಾಮವಾಚಕ
    ಚೆದುರು ಮೋಡಗಳು; ಬಿರುಗಾಳಿಯು ರಭಸದಿಂದ ಹೊಡೆದುಕೊಂಡು ಹೋಗುತ್ತಿರುವ, ಚೆಲ್ಲಾಪಿಲ್ಲಿಯಾದ ಮೇಘ ರಾಶಿಗಳು.

    rack
    ಅಕರ್ಮಕ ಕ್ರಿಯಾಪದ
    (ಮೋಡಗಳ ವಿಷಯದಲ್ಲಿ, ಗಾಳಿಯ ರಭಸದಿಂದ) ಹೊಡೆದುಕೊಂಡು ಹೋಗು.

    rack
    ನಾಮವಾಚಕ ಪದಗುಚ್ಛ
    hat-rack ಹ್ಯಾಟುಗಳ ಪತ್ತಿಗೆ.
  • ಮೇವು ತುಂಬಿಡಲು ಮಾಡಿದ, ಮರದ ಯಾ ಲೋಹದ ಕಂಬಿಗಳ ಚೌಕಟ್ಟು; ಮೇವು ಬಡು, ಪತ್ತಿಗೆ; ಗೋದಣಿಗೆ.
  • (ಸಾಮಾನುಗಳು, ಪುಸ್ತಕಗಳು ಮೊದಲಾದವುಗಳನ್ನಿಡಲು ಮಾಡಿದ ಅಡ್ಡಪಟ್ಟಿಗಳು, ಗೂಟಗಳು ಯಾ ಗೂಡುಗಳ ) ಬಡು; ಪತ್ತಿಗೆ; ರ್ಯಾಕು.
  • ಹಲ್ಲುಗಾಲಿಗೆ ಯಾ ತಿರುವು ಸುತ್ತಿಗೆ ಹೊಂದಿಕೆಯಾಗುವಂತೆ ಮಾಡಿದ ಹಲ್ಲುಗಳನ್ನಾಗಲಿ ಕಚ್ಚುಗಳನ್ನಾಗಲಿ ಉಳ್ಳ ಸರಳು ಯಾ (ರೈಲು)ಕಂಬಿ. Figure: rack(3)

  • rack
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಲಾಯದ ಮೇವುಕಟ್ಟನ್ನು (ಒಣ) ಹುಲ್ಲಿನಿಂದ ತುಂಬು, ಭರ್ತಿಮಾಡು.
  • (ಮೇವು ಕಟ್ಟಿನಲ್ಲಿ ಹುಲ್ಲು ತುಂಬಿ) ಕುದುರೆಯನ್ನು ಮೇಯಿಸು; ಕುದುರೆಗೆ ಮೇವಿಡು.
  • (ಕುದುರೆ ಮೊದಲಾದವನ್ನು) ಮೇವು ಕಟ್ಟಿಗೆ ಕಟ್ಟು.
  • ಪತ್ತಿಗೆಯ, ಬಡುವಿನ ಮೇಲೆ ಯಾ ಒಳಗೆ (ಯಾವುದೇ ಸಾಮಾನನ್ನು) ಇಡು.


  • logo