logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

racecard
ನಾಮವಾಚಕ
ರೇಸ್‍ಕಾರ್ಡು; ರೇಸುಗಳ ಕಾರ್ಯಕ್ರಮ(ವಿವರ); ರೇಸುಪಟ್ಟಿ.

racecourse
ನಾಮವಾಚಕ
ವೈಹಾಳಿ ಪಥ; ಕುದುರೆ ಪಂದ್ಯದ ಜಾಡು, ಓಣಿ, ಹಾದಿ.

racegoer
ನಾಮವಾಚಕ
ರೇಸುಗಾಮಿ; ಕುದುರೆ ರೇಸಿಗೆ (ಪದೇ ಪದೇ) ಹೋಗುವವ.

racehorse
ನಾಮವಾಚಕ
ಪಂದ್ಯದ, ಜೂಜಿನ – ಕುದುರೆ; ಪಂದ್ಯಕ್ಕಾಗಿ ಸಾಕಿ ತಯಾರುಮಾಡಿದ ಕುದುರೆ.

racemate
ನಾಮವಾಚಕ
(ರಸಾಯನವಿಜ್ಞಾನ) ರ್ಯಾಸಿಮೇಟ್‍:
  • ರಸೀಮಿಕ್‍ ಆಮ್ಲದ ಲವಣ ಯಾ ಎಸ್ಟರು.
  • ಯಾವುದೇ ದ್ಯುತಿಪಟು ಸಂಯುಕ್ತದ ಎಡಮುರಿ ಮತ್ತು ಬಲಮುರಿ ರೂಪಗಳು ಸಮಪ್ರಮಾಣದಲ್ಲಿರುವ ಮಿಶ್ರಣ.

  • raceme
    ನಾಮವಾಚಕ
    (ಸಸ್ಯವಿಜ್ಞಾನ) ರಸೀಮ್‍; ಅಸೀಮಾಕ್ಷ; ಮಧ್ಯೆ ಇರುವ ಉದ್ದವಾದ ಕಾಪಿನ ಮೇಲೆ ಸಮ ಅಂತರಗಳಲ್ಲಿ ಚಿಕ್ಕಚಿಕ್ಕ ತೊಟ್ಟುಗಳುಳ್ಳ ಹೂಗಳು ಅಂಟಿಕೊಂಡಿರುವ ಪುಷ್ಪಗುಚ್ಛ.

    racemic
    ಗುಣವಾಚಕ
    (ರಸಾಯನವಿಜ್ಞಾನ) ರೆಸಿಮಿಕ್‍; ರೆಸಿಮೀಯ; (ದ್ಯುತಿಪಟು ಸಂಯುಕ್ತಗಳ ವಿಷಯದಲ್ಲಿ) ವಾಮಭ್ರಾಮಕ (laevorotatory) ಮತ್ತು ದಕ್ಷಿಣ ಭ್ರಾಮಕ (dextrorotatory) ರೂಪಗಳೆರಡೂ ಸಮಪ್ರಮಾಣದಲ್ಲಿರುವ.

    racemic acid
    ನಾಮವಾಚಕ
    (ರಸಾಯನವಿಜ್ಞಾನ) ರೆಸಿಮಿಕ್‍ ಆಮ್ಲ; ವಾಮಭ್ರಾಮಕ ಮತ್ತು ದಕ್ಷಿಣಭ್ರಾಮಕ ಟಾರ್ಟಾರಿಕ್‍ ಆಮ್ಲಗಳು ಸಮಪ್ರಮಾಣದಲ್ಲಿರುವ ಮಿಶ್ರಣ ಯಾ ಅವುಗಳ ಸಂಯುಕ್ತ.

    racemization
    ನಾಮವಾಚಕ
    (ರಸಾಯನವಿಜ್ಞಾನ) ರೆಸಿಮೀಕರಣ; (ದ್ಯುತಿಪಟು ಸಂಯುಕ್ತಗಳ ವಿಷಯದಲ್ಲಿ) ರೆಸಿಮಿಕ್‍ ಮಿಶ್ರಣ ಆಗುವುದು ಯಾ ಮಾಡುವುದು.

    racemize
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ರೆಸಿಮೀಕರಿಸು; (ದ್ಯುತಿಪಟು ಸಂಯುಕ್ತವನ್ನು) ರೆಸಿಮಿಕ್‍ ಮಿಶ್ರಣವಾಗಿಸು. ರೆಸಿಮೀಭವಿಸು; ರೆಸಿಮಿಕ್‍ ಮಿಶ್ರಣವಾಗು.


    logo