logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

rabidness
ನಾಮವಾಚಕ
= rabidity.

rabies
ನಾಮವಾಚಕ
ರೇಬೀಸ್‍; ಮುಖ್ಯವಾಗಿ ಹುಚ್ಚುನಾಯಿ ಕಡಿದವನಿಗೆ ಉಂಟಾಗುವ ಹುಚ್ಚು, ಸೆಳೆತ, ಜಲಭೀತಿ, ಮೊದಲಾದವುಗಳಿಂದ ಕೂಡಿದ ಒಂದು ಸಾಂಕ್ರಾಮಿಕ, ಮಾರಕ ರೋಗ.

RAC
ಸಂಕ್ಷಿಪ್ತ
(United Kingdom ನಲ್ಲಿ)
  • Royal Automobile Club.
  • Royal Armoured Corps.

  • raccoon
    ನಾಮವಾಚಕ
    racoonನ ರೂಪಾಂತರ.

    race
    ನಾಮವಾಚಕ ಪದಗುಚ್ಛ
    not in the race (ಆಸ್ಟ್ರೇಲಿಯ) (ಅಶಿಷ್ಟ) ಸಾಧ್ಯತೆ, ಅವಕಾಶ ಇಲ್ಲದಿರುವ.
  • ರಭಸದ ಒಳಪ್ರವಾಹ; ಮುಖ್ಯವಾಗಿ ಸಮುದ್ರದ ಯಾ ನದಿಯ ಒಳಗಡೆ ಕಿರು ಓಣಿಯಲ್ಲಿ ಹರಿಯುವ ಪ್ರಬಲ ಪ್ರವಾಹ: tide set with a strong race ಪ್ರಬಲ ಪ್ರವಾಹದಿಂದ ಕೂಡಿದ ಭರತ.
  • (ಪ್ರಾಚೀನ ಪ್ರಯೋಗ)
    1. (ಸೂರ್ಯ, ಚಂದ್ರ ಮೊದಲಾದವುಗಳ ) ಗತಿ; ಚಲನೆ.
    2. ಜೀವನದ, ಕಾಲದ ಗತಿ; ಕಾಲಗತಿ; ಆಯುಷ್ಯ: ere he had run half his race ಅವನ ಆಯುಷ್ಯದ ಅರ್ಧ ಸಹ ಕಳೆಯುವ ಮುನ್ನ.
  • (ಹೊಳೆಯಿಂದ ತೋಡಿದ ) ಕಾಲುವೆ; ಸ್ರೋತ (ಮುಖ್ಯವಾಗಿ ಸಂಯುಕ್ತಪದಗಳಲ್ಲಿ ) mill-race ಗಿರಣಿಕಾಲುವೆ.
  • (ನೇಯ್ಗೆ) ಲಾಳಿಯು ಹರಿಯುವ ಗಾಡಿ, ವೆಜ್ಜ, ದಾರಿ, ಪಥ.
    1. ರೇಸು; ಓಟದ ಪಂದ್ಯ; (ಓಟಗಾರರು, ಕುದುರೆಗಳು, ಹಡಗು ಯಾ ದೋಣಿಗಳು ಮೊದಲಾದವುಗಳ ) ಪಂಥದ ಓಟ; ಜೂಜು.
    2. (ಯಾವುದೇ ಕೆಲಸದಲ್ಲಿ, ಒಬ್ಬರ ಮೇಲೊಬ್ಬರ) ಮೇಲಾಟ; ಪಂದ್ಯ; ಪೈಪೋಟಿ; ಸ್ಪರ್ಧೆ.
  • (ಬಹುವಚನದಲ್ಲಿ) (ಕ್ಲುಪ್ತ ಕಾಲದಲ್ಲಿ ನಿರ್ದಿಷ್ಟ ವೈಹಾಳಿ ಪಥದಲ್ಲಿ ನಡೆಸುವ) ರೇಸುಗಳು; ಕುದುರೆ, ನಾಯಿ ಮೊದಲಾದವುಗಳ ಪಂದ್ಯಗಳು, ಜೂಜುಗಳು.
  • ಬಾಲ್‍ಬೇರಿಂಗ್‍ ಯಾ ರೋಲರ್‍ ಬೇರಿಂಗ್‍ನಲ್ಲಿ ಗಾಡಿಯಿರುವ ಎರಡು ಉಂಗುರಗಳಲ್ಲೊಂದು.
  • (ಆಸ್ಟ್ರೇಲಿಯ) ಕುರಿ ಮೊದಲಾದವುಗಳನ್ನು ಆರಿಸಿಕೊಳ್ಳಲು ಮಾಡಿದ ಬೇಲಿ ಹಾಕಿದ ಓಣಿ, ಕಿರುದಾರಿ.

  • race
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಕುದುರೆ ಮೊದಲಾದವನ್ನು) ಜೂಜುಬಿಡು; ಜೂಜೋಡಿಸು: raced his cycle against a car ತನ್ನ ಸೈಕಲನ್ನು ಕಾರಿನೊಡನೆ ಜೂಜು ಓಡಿಸಿದ.
  • (ವ್ಯಕ್ತಿಯನ್ನು, ವಸ್ತುವನ್ನು) ರಭಸದಿಂದ ಓಡಿಸು; ಅತಿವೇಗವಾಗಿ ಸಾಗುವಂತೆ ಮಾಡು: raced the bill through the House ಮಸೂದೆಯನ್ನು ಶಾಸನಸಭೆಯಲ್ಲಿ ಅತ್ಯಂತ ಶೀಘ್ರವಾಗಿ ಸಾಗಿಸಿದ. raced me along at 6 miles an hour ಗಂಟೆಗೆ ಆರು ಮೈಲಿಯ ವೇಗದಲ್ಲಿ ನನ್ನನ್ನು ಓಡಿಸಿದ.
  • (-ಒಡನೆ) ಪಂದ್ಯ ಓಡು; ಪೈಪೋಟಿ ನಡೆಸು.
  • ವೇಗದಲ್ಲಿ (ಇತರರನ್ನು) ಮೀರಿಸಲು ಯತ್ನಿಸು.

  • race
    ನಾಮವಾಚಕ ಪದಗುಚ್ಛ
  • (ವ್ಯಕ್ತಿ, ಪ್ರಾಣಿ ಯಾ ಸಸ್ಯಗಳ)
    1. ಕುಲ; ಬುಡಕಟ್ಟು.
    2. ಸಂತತಿ; ಪೀಳಿಗೆ; ವಂಶ.
    3. (ಒಂದೇ ಮೂಲದವರೆಂದು ಭಾವಿಸಲಾದವರ) ಸಂತತಿ; ಅನ್ವಯ; ಮನೆತನ; ಗೋತ್ರ; ಕುಟುಂಬ.
  • (ನಿರ್ದಿಷ್ಟ ಮೂಲದವೆಂದು ಭಾವಿತವಾದ) ಬುಡಕಟ್ಟು; ಕುಲ; ಬಣ; ರಾಷ್ಟ್ರ; ಜನಾಂಗ.
  • (ವಿಶಿಷ್ಟ ಲಕ್ಷಣಗಳುಳ್ಳ ಒಂದು) ಮಾನವ ವಿಭಾಗ; ಜನಾಂಗ; ವರ್ಗ: the Mongolian race ಮಂಗೋಲಿಯನ್‍ ಜನಾಂಗ.
  • (ಜೀವಿಗಳ ಯಾವುದೇ) ದೊಡ್ಡ ವಿಭಾಗ; ವರ್ಗ; ಕುಲ; ಜಾತಿ; ತಳಿ: the human race ಮಾನವ, ಮನುಷ್ಯ – ಕುಲ. the four-footed race ಚತುಷ್ಟಾದಿ ವರ್ಗ. the feathered race ಪಕ್ಷಿಜಾತಿ.
  • (ರಕ್ತಸಂಬಂಧಿಗಳ) ಕುಲಸಂತತಿ; ಅನ್ವಯ: of noble race ಉದಾತ್ತ ಕುಲದ.
  • (ಸಾಮನ್ಯ ಲಕ್ಷಣಗಳುಳ್ಳವರ) ವರ್ಗ; ಕುಲ; ಸಮುದಾಯ: the race of poets ಕವಿಕುಲ. the race of dandies ಷೋಕಿಲಾಲ ವರ್ಗ.
  • ಜನಾಂಗೀಯತೆ; ಜನಾಂಗದ ಆಧಾರದ ಮೇಲೆ ಮಾಡುವ ವಿಭಾಗ ಯಾ ಆ ಕಲ್ಪನೆಯನ್ನು ಆಧರಿಸಿದ ಭಾವನೆ: discrimination based on race ಜನಾಂಗೀಯತೆಯನ್ನು ಆಧರಿಸಿದ ತಾರತಮ್ಯ, ಭೇದಭಾವನೆ ಯಾ ವರ್ತನೆ.

  • race
    ನಾಮವಾಚಕ
    ಶುಂಠಿಯ ಬೇರು; ಶುಂಠಿ.

    race ball
    ನಾಮವಾಚಕ
    ಕುದುರೆಯ ಪಂದ್ಯದ ಸಂದರ್ಭದಲ್ಲಿ ನಡೆಸುವ ನರ್ತನಕೂಟ; ಪಂದ್ಯನರ್ತನ.

    race meeting
    ನಾಮವಾಚಕ
    (ಒಂದು ಸ್ಥಳದ) ಕುದುರೆ ಪಂದ್ಯಗಳ ಸರಣಿ.


    logo