logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

radioactive
ಗುಣವಾಚಕ
ವಿಕಿರಣಪಟು; ವಿಕಿರಣಶೀಲ; ವಿಕಿರಣಪಟುತ್ವ ಉಳ್ಳ.

radioactively
ಕ್ರಿಯಾವಿಶೇಷಣ
ವಿಕಿರಣಶೀಲವಾಗಿ.

radioactivity
ನಾಮವಾಚಕ
ವಿಕಿರಣಪಟುತ್ವ; ವಿಕಿರಣಶೀಲತೆ; ಬೀಜದ ಅಸ್ಥಿರತೆಯ ಕಾರಣ, ಬಾಹ್ಯಪ್ರಚೋದನೆ ಇಲ್ಲದೆಯೇ ಕಣಗಳನ್ನೂ ಅಧಿಕ ಆವೃತ್ತಿಯ ವಿದ್ಯುತ್ಕಾಂತ ತರಂಗಗಳನ್ನೂ ಹೊರಕ್ಕೆ ಹಾಕಿ, ಕ್ಷಯಿಸಿ, ಬೇರೊಂದು ಧಾತು ಆಗುವ ಕೆಲವು ಪರಮಾಣುಗಳ ಗುಣಲಕ್ಷಣ.

radiobiological
ಗುಣವಾಚಕ
ರೇಡಿಯೋ ಜೀವವಿಜ್ಞಾನದ ಯಾ ಅದಕ್ಕೆ ಸಂಬಂಧಿಸಿದ.

radiobiologically
ಕ್ರಿಯಾವಿಶೇಷಣ
ರೇಡಿಯೋ ಜೀವವಿಜ್ಞಾನರೀತ್ಯಾ.

radiobiologist
ನಾಮವಾಚಕ
ರೇಡಿಯೋ ಜೀವವಿಜ್ಞಾನಿ; ರೇಡಿಯೋ ಜೀವವಿಜ್ಞಾನದಲ್ಲಿ ತಜ್ಞ.

radiobiology
ನಾಮವಾಚಕ
ರೇಡಿಯೋ ಜೀವವಿಜ್ಞಾನ; ಜೀವಿಗಳ ಮೇಲೆ ವಿಕಿರಣದ ಪರಿಣಾಮಗಳನ್ನು ಕುರಿತ ವಿಜ್ಞಾನ ಶಾಖೆ.

radiocarbon
ನಾಮವಾಚಕ
ರೇಡಿಯೋ ಕಾರ್ಬನ್‍; ವಾತಾವರಣದ ನೈಟ್ರೊಜನ್‍ ಜೊತೆಗೆ ವಿಶ್ವಕಿರಣಗಳು ವರ್ತಿಸುವುದರಿಂದ ಉತ್ಪತ್ತಿಯಾಗುವ, ಐತಿಹಾಸಿಕ ಉಳಿಕೆಗಳ, ಕಾಲನಿರ್ಣಯಕ್ಕೆ ಉಪಯೋಗಿಸಿಕೊಂಡಿರಲಾಗಿರುವ, 14 ರಾಶಿಸಂಖ್ಯೆಯ ಕಾರ್ಬನ್‍ ಐಸೊಟೋಪು.

radiocarbon dating
ನಾಮವಾಚಕ
= carbon dating.

radiochemical
ಗುಣವಾಚಕ
ರೇಡಿಯೋ ರಾಸಾಯನಿಕ; ರೇಡಿಯೋ ರಸಾಯನ ಶಾಸ್ತ್ರೀಯ.


logo