logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

radically
ಕ್ರಿಯಾವಿಶೇಷಣ
  • ಸಂಪೂರ್ಣವಾಗಿ; ಮೂಲಭೂತವಾಗಿ.
  • ಆಮೂಲಾಗ್ರವಾಗಿ.

  • radicalness
    ನಾಮವಾಚಕ
  • ಮೂಲಭೂತತೆ.
  • ಆಮೂಲಾಗ್ರವಾಗಿರುವಿಕೆ.

  • radicchio
    ನಾಮವಾಚಕ
    ಕಡು ಕೆಂಬಣ್ಣದ ಎಲೆಗಳುಳ್ಳ ಒಂದು ಬಗೆಯ ಚಿಕೊರಿ ಗಿಡ.

    radices
    ನಾಮವಾಚಕ
    radix ಎಂಬ ಪದದ ಬಹುವಚನ.

    radicle
    ನಾಮವಾಚಕ
    ಮೂಲಾಂಕುರ:
  • ತಾಯಿಬೇರಾಗಿ ಪರಿವರ್ತನೆಗೊಳ್ಳಲಿರುವ ಸಸ್ಯದ ಭ್ರೂಣಭಾಗ.
  • ನರದ ಯಾ ಸಿರೆಯ ಬೇರಿನಂಥ ಉಪಭಾಗ.

  • radicular
    ಗುಣವಾಚಕ
    ಮೂಲಾಂಕುರದ ಯಾ ಅದಕ್ಕೆ ಸಂಬಂಧಿಸಿದ:
  • ತಾಯಿಬೇರಾಗಿ ಪರಿವರ್ತನೆಗೊಳ್ಳಲಿರುವ ಸಸ್ಯದ ಭ್ರೂಣ ಭಾಗದ.
  • ನರದ, ಸಿರೆಯ ಬೇರಿನಂಥ ಉಪಭಾಗದ.

  • radii
    ನಾಮವಾಚಕ
    radius ಎಂಬ ಪದದ ಬಹುವಚನ.

    radio
    ನಾಮವಾಚಕ
    ರೇಡಿಯೋ:
  • ರೇಡಿಯೋ ಅಲೆಗಳ ಆವೃತ್ತಿಯ ವಿದ್ಯುತ್ಕಾಂತ ತರಂಗಗಳನ್ನುಪಯೋಗಿಸಿಕೊಂಡು ಮಾತು, ಸಂಗೀತ ಮತ್ತಿತರ ಎಲ್ಲ ಬಗೆಯ ಶಬ್ದಗಳನ್ನೂ ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ವ್ಯವಸ್ಥೆ.
  • ಇದಕ್ಕಾಗಿ ಬಳಸುವ ಉಪಕರಣ.
  • ರೇಡಿಯೋ ಪ್ರಸರಣ.
  • ರೇಡಿಯೋ ಮುಖಾಂತರ ದೊರೆತ, ಕಳುಹಿಸಿದ ಸಂದೇಶ.
  • ರೇಡಿಯೋ ಪ್ರಸಾರ ನಿಲಯ ಯಾ ಪ್ರಸಾರ ನಾಲೆ.

  • radio
    ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ವರ್ತಮಾನ ಪ್ರಥಮ ಪುರುಷ ಏಕವಚನ radioes; ಭೂತರೂಪ ಮತ್ತು ಭೂತಕೃದಂತ radioed) ಸಕರ್ಮಕ ಕ್ರಿಯಾಪದ ರೇಡಿಯೋ ಮುಖಾಂತರ ತಿಳಿಸು ಯಾ ಪ್ರಸಾರಮಾಡು.
  • (ಸಂದೇಶವನ್ನು) ರೇಡಿಯೋ ಮುಖಾಂತರ ಕಳುಹಿಸು.
  • (ವ್ಯಕ್ತಿಗೆ) ರೇಡಿಯೋ ಮುಖಾಂತರ ಸಂದೇಶ ಕಳುಹಿಸು.

  • radio astronomy
    ನಾಮವಾಚಕ
    ರೇಡಿಯೋ ಖಗೋಳವಿಜ್ಞಾನ; ವಿದ್ಯುತ್ಕಾಂತರೋಹಿತದ ರೇಡಿಯೋ ಆವರ್ತನ ವ್ಯಾಪ್ತಿಯನ್ನು ಕುರಿತ ಖಗೋಳವಿಜ್ಞಾನ ಶಾಖೆ.


    logo