logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

radian
ನಾಮವಾಚಕ
(ಜ್ಯಾಮಿತಿ) ರೇಡಿಯನ್‍; ಕೋನವನ್ನಳೆಯಲು ಬಳಸುವ ಮಾನ; ತ್ರಿಜ್ಯಕ್ಕೆ ಸಮವಾಗಿರುವ ಚಾಪದ ಎರಡು ತುದಿಗಳನ್ನು ವರ್ತುಲದ ಕೇಂದ್ರಕ್ಕೆ ಸೇರಿಸಿದಾಗ ಕೇಂದ್ರದಲ್ಲಿ ರೂಪುಗೊಳ್ಳುವ ಕೋನಕ್ಕೆ ಸಮನಾದುದು.

radiance
ನಾಮವಾಚಕ
  • ಪ್ರಕಾಶ; ಕಾಂತಿ; ಪ್ರಭೆ; ತೇಜಸ್ಸು: the radiance of the tropical sun ಉಷ್ಣವಲಯದ ಸೂರ್ಯತೇಜಸ್ಸು.
  • (ಕಣ್ಣಿನ ಯಾ ರೂಪರಾಶಿಯ) ಪ್ರಕಾಶ; ಕಾಂತಿ; ತೇಜಸ್ಸು; ಪ್ರಭಾರಾಶಿ.

  • radiancy
    ನಾಮವಾಚಕ
    = radiance.

    radiant
    ಗುಣವಾಚಕ
  • ಕಿರಣಗಳನ್ನು (ಹೊರ)ಸೂಸುವ, ಪ್ರಸರಿಸುವ; ತೇಜೋರಾಶಿಯನ್ನು ಹರಡುವ; ಕಾಂತಿಯನ್ನು ಬೀರುವ; ಪ್ರಭಾಮಯವಾದ.
  • (ಕಣ್ಣಿನ ಯಾ ರೂಪಲಾವಣ್ಯದ ವಿಷಯದಲ್ಲಿ) (ಆನಂದ, ಆಶೆ ಯಾ ಪ್ರೇಮದಿಂದ) ಪ್ರಕಾಶಮಾನವಾದ; ಕಾಂತಿಮಯವಾದ; ತೇಜಃಪುಂಜವಾದ.
  • (ಬೆಳಕಿನ ವಿಷಯದಲ್ಲಿ) ಕಿರಣಗಳಾಗಿ ಹರಡುವ, ಪ್ರಸರಿಸುವ.
  • (ಚೆಲುವಿನ ವಿಷಯದಲ್ಲಿ) ಉಜ್ವಲ; ದೇದೀಪ್ಯಮಾನ; ತೇಜೋಮಯ; ಕಣ್ಣನ್ನು ಕೋರೈಸುವ.
  • ತ್ರಿಜ್ಯಾಕಾರವಾಗಿ, ತ್ರಿಜ್ಯಗಳಂತೆ – ವರ್ತಿಸುವ ಯಾ ವಿಸ್ತರಿಸುವ.

  • radiant
    ನಾಮವಾಚಕ
  • ಬೆಳಕು ಯಾ ಉಷ್ಣವು ವಿಕಿರಣವಾಗುವ ಬಿಂದು ಯಾ ವಸ್ತು; ವಿಕಿರಣ ಕೆಂದ್ರ.
  • (ಖಗೋಳ ವಿಜ್ಞಾನ) = radiant point.

  • radiant heat
    ನಾಮವಾಚಕ
    ವಿಕಿರಣ ಉಷ್ಣ; ವಹನ (conduction) ಯಾ ಸಂವಹನ (convection)ದಿಂದ ಆಗಿರದೆ, ವಿಕಿರಣದಿಂದ ಸಾಗುವ ಉಷ್ಣ.

    radiant heater
    ನಾಮವಾಚಕ
    ವಿಕಿರಣ ಹೀಟರು, ತಾಪಕ; ವಿಕಿರಣ ಉಷ್ಣದಿಂದ ಕೆಲಸಮಾಡುವ ಹೀಟರು.

    radiant point
    ನಾಮವಾಚಕ
    ಪ್ರಸರಣ ಬಿಂದು:
  • ರಶ್ಮಿಗಳು ಯಾ ತ್ರಿಜ್ಯಗಳು ಯಾವ ಬಿಂದುವಿನಿಂದ ಹೊರಡುವುವೋ ಆ ಬಿಂದು.
  • (ಖಗೋಳ ವಿಜ್ಞಾನ) ಉಲ್ಕಾಪಾತ ಯಾವ ಬಿಂದುವಿನಿಂದ ಹೊರಡುತ್ತಿರುವಂತೆ ಕಾಣಿಸುವುದೋ ಆ ಬಿಂದು.

  • radiantly
    ಕ್ರಿಯಾವಿಶೇಷಣ
    ಪ್ರಕಾಶಮಾನವಾಗಿ; ಕಾಂತಿಪೂರ್ಣವಾಗಿ; ತೇಜೋಮವಾಗಿ; ಉಜ್ವಲವಾಗಿ; ಪ್ರಭಾಪೂರ್ಣವಾಗಿ; ದೇದೀಪ್ಯಮಾನವಾಗಿ.

    radiate
    ಗುಣವಾಚಕ
    ತ್ರಿಜ್ಯಾತ್ಮಕ; ತ್ರಿಜ್ಯಾಕಾರದ ಕಿರಣಗಳು ಯಾ ಭಾಗಗಳು ಉಳ್ಳ.


    logo