logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

quarterback
ನಾಮವಾಚಕ
ಕ್ವಾರ್ಟರ್‍ಬ್ಯಾಕ್‍; ಆಕ್ರಮಾಣಕಾರಿ ಆಟವನ್ನು ನಿರ್ದೇಶಿಸುವ ಅಮೆರಿಕನ್‍ ಕಾಲ್ಚೆಂಡಾಟದ ಆಟಗಾರ.

quarterdeck
ನಾಮವಾಚಕ
  • ಹಿಂದಕ್ಕ; ಹಿಂಭಾಗದ ದಕ್ಕ; ಹಡಗಿನ ಮೇಲ್ಭಾಗದ ದಕ್ಕದಲ್ಲಿ ಹಿಂಗೋಟಿಗೂ ಹಿಂಗೂವೆಗೂ ನಡುವಣ (ಸಾಮಾನ್ಯವಾಗಿ ಅಧಿಕಾರಿಗಳಿಗೆ ಮೀಸಲಾಗಿಡಲಾಗುವ) ಭಾಗ.
  • ಹಡಗಿನ ಯಾ ನೌಕಾ ತಂಡದ ಅಧಿಕಾರಿಗಳು.

  • quartering
    ನಾಮವಾಚಕ
  • ವಿಭಜನ; ವಿಭಾಗಮಾಡುವಿಕೆ; (ಮುಖ್ಯವಾಗಿ) ನಾಲ್ಕು ಸಮ\-ಭಾಗಗಳಾಗಿ ಒಡೆಯುವುದು, ಸೀಳುವುದು, ವಿಭಾಗಿಸುವುದು.
  • (ಬಹುವಚನದಲ್ಲಿ) (ವಂಶಲಾಂಛನ ವಿದ್ಯೆ) ಇತರ ಮನೆತನಗಳ ಹೆಣ್ಣುಗಳೊಡನೆ ಮದುವೆಯಾದುದನ್ನು ಸೂಚಿಸಲು ಗುರಾಣಿಯ ಮೇಲೆ ಕೆತ್ತುವ ಹೊಸ ವಂಶಲಾಂಛನಗಳು.
  • ವಂಶಲಾಂಛನದ ಗುರಾಣಿಯ ನಾಲ್ಕನೆಯ ಭಾಗ, ಚತುರ್ಥಾಂಶ.
  • (ಸೈನಿಕರು ಮೊದಲಾದವರಿಗೆ) ಬಿಡದಿ ಒದಗಿಸುವುದು, ಕಲ್ಪಿಸುವುದು.
  • ಹಲಗೆ ಕೊಯ್ತ; ಉತ್ತಮ ಗುಣಮಟ್ಟದ ಹಾಸುಹಲಗೆಗಳಾಗಿ ಬಳಸಲು ದಿಮ್ಮಿಗಳನ್ನು ಉದ್ದುದ್ದನಾಗಿ ಕೊಯ್ಯುವುದು.

  • quarterly
    ಗುಣವಾಚಕ
  • ತ್ರೈಮಾಸಿಕ; ಮೂರು ತಿಂಗಳಿಗೊಮ್ಮೆ ಆಗುವ, ನಡೆಯುವ ಯಾ ಪ್ರಕಟವಾಗುವ.
  • (ವಂಶಲಾಂಛನ ವಿದ್ಯೆ) (ಗುರಾಣಿಯ ವಿಷಯದಲ್ಲಿ) ನಾಲ್ಕು ಭಾಗಗಳಾಗಿ ವಿಭಾಗವಾಗಿರುವ.

  • quarterly
    ಕ್ರಿಯಾವಿಶೇಷಣ
  • ತ್ರೈಮಾಸಿಕವಾಗಿ; ಮೂರು ತಿಂಗಳಿಗೊಮ್ಮೆ.
  • (ವಂಶಲಾಂಛನ ವಿದ್ಯೆ) ವಂಶಲಾಂಛನ ಗುರಾಣಿಯ ನಾಲ್ಕು ಭಾಗಗಳಲ್ಲಿ ಯಾ ಮೂಲೆಮೂಲೆಯಾಗಿರುವ ಎರಡು ಭಾಗಗಳಲ್ಲಿ.

  • quarterly
    ನಾಮವಾಚಕ
    ತ್ರೈಮಾಸಿಕ; ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ ಪತ್ರಿಕೆ.

    quartermaster
    ನಾಮವಾಚಕ
    ಕ್ವಾರ್ಟರ್‍ಮಾಸ್ಟರ್‍:
  • ಬಿಡದಿ ಹಂಚಿಕೆ, ಪಡಿತರ ಒದಗಿಸುವುದು, ಮೊದಲಾದ ಕರ್ತವ್ಯವನ್ನು ನಿರ್ವಹಿಸುವ, ಸೈನ್ಯದಳದ ಒಬ್ಬ ಅಧಿಕಾರಿ.
  • ಹಡಗನ್ನು ನಡೆಸುವುದು, ಸಿಗ್ನಲ್ಲುಗಳು ಮೊದಲಾದವುಗಳನ್ನು ನೋಡಿಕೊಳ್ಳುವುದು, ಮೊದಲಾದ ಜವಾಬ್ದಾರಿ ಹೊತ್ತಿರುವ ನೌಕಾಸೈನ್ಯದ ಒಬ್ಬ ಕೆಳದರ್ಜೆಯ ಅಧಿಕಾರಿ.

  • Quartermaster General
    ನಾಮವಾಚಕ
    ಕ್ವಾರ್ಟರ್‍ಮಾಸ್ಟರ್‍ ಜೆನರಲ್‍; ಬಿಡದಿ ಒದಗಿಸುವುದೇ ಮೊದಲಾದ ಹೊಣೆಗಾರಿಕೆಯುಳ್ಳ ಸೇನಾವಿಭಾಗದ ಮುಖ್ಯಸ್ಥ.

    quartermaster sergeant
    ನಾಮವಾಚಕ
    ಸೇನಾ ಕ್ವಾರ್ಟರ್‍ಮಾಸ್ಟರ್‍ನ ಸಹಾಯಕನಾದ ಸಾರ್ಜೆಂಟು.

    quartern
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಕ್ವಾರ್ಟರ್ನ್‍; ಒಂದು ಪೈಂಟಿನ ಕಾಲು ಭಾಗ.


    logo