logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

quarter note
ನಾಮವಾಚಕ
(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಸಂಗೀತ) = crotchet.

quarter sessions
ನಾಮವಾಚಕ
(ಚರಿತ್ರೆ) ತ್ರೈಮಾಸಿಕ ಅಧಿವೇಶನ; ಇಂಗ್ಲೆಂಡಿನ ಕೌಂಟಿಗಳಲ್ಲಿ ಶಾಂತಿಪಾಲಕ ನ್ಯಾಯಮೂರ್ತಿಗಳೂ, ನಗರಗಳಲ್ಲಿ, ಪುರಸಭೆಗಳಿರುವ ಊರುಗಳಲ್ಲಿ ನಗರದ ಯಾ ಊರಿನ ಮ್ಯಾಜಿಸ್ಟ್ರೇಟರೂ ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ನಡೆಸುವ, ಸಿವಿಲ್‍ ಹಾಗೂ ಕ್ರಿಮಿನಲ್‍ ಮೊಕದ್ದಮೆಗಳಲ್ಲಿ ಕಡಮೆ ಅಧಿಕಾರವ್ಯಾಪ್ತಿ ಇರುವ ನ್ಯಾಯಾಲಯದ ಅಧಿವೇಶನ.

quarter-binding
ನಾಮವಾಚಕ
ಕಾಲು ಬೈಂಡಿಂಗ್‍; ಪುಸ್ತಕದ ಬೆನ್ನಿಗೆ ಮಾತ್ರ ಸಾಮಾನ್ಯವಾಗಿ ತೊಗಲನ್ನು ಹಾಕಿ, ಉಳಿದ ಭಾಗಗಳನ್ನು ಬೇರೆ ವಸ್ತುವಿಂದ ಕಟ್ಟಿದ ರಟ್ಟು, ಬೈಂಡಿಂಗು.

quarter-final
ನಾಮವಾಚಕ
(ಆಟದ ಪಂದ್ಯಗಳಲ್ಲಿ) ಕ್ವಾರ್ಟರ್‍ಫೆನಲ್‍; ‘ಸೆಮಿಹೈನಲ್‍’ಗೆ ಹಿಂದಿನ ಪಂದ್ಯ, ಆಟ ಯಾ ಸುತ್ತು.

quarter-hour
ನಾಮವಾಚಕ
  • ಕಾಲುಗಂಟೆ; 15 ನಿಮಿಷಗಳ ಅವಧಿ.
  • ಒಂದು ಗಂಟೆಗೆ 15 ನಿಮಿಷ ಮುಂಚಿನ ಯಾ 15 ನಿಮಿಷ ಅನಂತರದ ಸಮಯ.

  • quarter-light
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಪಕ್ಕದ ಕಿಟಕಿ; ಮೋಟಾರು ವಾಹನ, ಪೆಟ್ಟಿಗೆ ಗಾಡಿ, ಮೊದಲಾದವುಗಳ (ಮುಖ್ಯಬಾಗಿಲಿನ ಮೇಲಿನದಲ್ಲದ) ಪಕ್ಕದಲ್ಲಿರುವ ಕಿಟಕಿ.

    quarter-line
    ನಾಮವಾಚಕ
    (ರಗ್ಬಿ ಕಾಲ್ಚೆಂಡಾಟ) ಗೋಲಿನ ಗೆರೆಯಿಂದ 22 ಮೀಟರು ದೂರದಲ್ಲಿ ನೆಲದ ಮೇಲೆ ಎಳೆದಿರುವ ಅಡ್ಡಗೆರೆಯ ಒಳಗೆ ಇರುವ ಪ್ರದೇಶ, ಕ್ಷೇತ್ರ.

    quarter-plate
    ನಾಮವಾಚಕ
  • $8.3\times 10.8$ ಸೆಂಟಿಮೀಟರ್‍ ಅಳತೆಯ ಛಾಯಾ\-ಚಿತ್ರದ ಪ್ಲೇಟು ಯಾ ಫಿಲ್ಮ್‍.
  • ಇದರಿಂದ ತೆಗೆದ ಹೋಟೋ.

  • quarter-tone
    ನಾಮವಾಚಕ
    (ಸಂಗೀತ) ಅರೆ ಅರ್ಧಸ್ವರ; (ಜಾತಿ, ಸ್ಥಾಯಿ, ಗುರುತ್ವ–ಲಘುತ್ವ ಮತ್ತು ಘೋಷಗಳನ್ನು ಅನುಸರಿಸಿ ಸ್ವರೂಪಭೇದವುಳ್ಳ) ಸ್ವರದ ಚತುರ್ಥಾಂಶ.

    quarterage
    ನಾಮವಾಚಕ
    ತ್ರೈಮಾಸಿಕ:
  • ತ್ರೈಮಾಸಿಕ ಬಟವಾಡೆ, ಪಾವತಿ.
  • ತ್ರೈಮಾಸಿಕ – ಸಂಬಳ, ವೇತನ, ನಿತ್ತಿವೇತನ, ಮೊದಲಾದವು.


  • logo