logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

qualitative analysis
ನಾಮವಾಚಕ
(ರಸಾಯನವಿಜ್ಞಾನ) ಗುಣಾತ್ಮಕ ವಿಶ್ಲೇಷಣೆ; ಯಾವುದೇ ಸಂಯುಕ್ತ ಯಾ ಮಿಶ್ರಣದ ಘಟಕಗಳ ಪರಿಮಾಣಗಳನ್ನು ಲೆಕ್ಕಿಸದೆ, ಆ ಘಟಕಗಳು ಯಾವುವು ಎಂಬುದನ್ನು ನಿರ್ಣ\-ಯಿಸಲು ನಡೆಸುವ ವಿಶ್ಲೇಷಣೆ.

qualitatively
ಕ್ರಿಯಾವಿಶೇಷಣ
ಗುಣಾತ್ಮಕವಾಗಿ; ಗುಣಕ್ಕೆ ಸಂಬಂಧಿಸಿದಂತೆ ಯಾ ಗುಣವನ್ನು ಅವಲಂಬಿಸಿದಂತೆ.

quality
ನಾಮವಾಚಕ
(ಬಹುವಚನ qualities).
  • ಮೇಲ್ಮೆಯ ಮಟ್ಟ; ಗುಣಮಟ್ಟ; ಶ್ರೇಷ್ಠತೆಯ ದರ್ಜೆ: of good quality ಉತ್ತಮ ದರ್ಜೆಯ. poor in quality ಕೀಳು ದರ್ಜೆಯ. quality matters more than quantity ಪ್ರಮಾಣಕ್ಕಿಂತ ಗುಣಕ್ಕೆ ಮಹತ್ವ ಹೆಚ್ಚು.
  • (ಸಾಮಾನ್ಯ ಷ್ಟಿಯಿಂದ) ಉತ್ಕೃಷ್ಟತೆ; ಉತ್ತಮವಾಗಿರುವಿಕೆ; ಚೆನ್ನಾಗಿರುವಿಕೆ: has quality ಚೆನ್ನಾಗಿದೆ; ಉತ್ಕೃಷ್ಟವಾಗಿದೆ.
  • ಸಹಜ ಗುಣ ಯಾ ಶಕ್ತಿ, ಸಾಮರ್ಥ್ಯ; ಸ್ವಭಾವಜನ್ಯ ಗುಣ (ಯಾ ದೋಷ): he has many good qualities ಅವನಲ್ಲಿ ಅನೇಕ ಸಹಜ ಗುಣಗಳಿವೆ. the defects of his qualities ಅವನ ಸ್ವಭಾವಜನ್ಯ ದೋಷಗಳು.
  • ವೈಶಿಷ್ಟ್ಯ; ವಿಶಿಷ್ಟ ಗುಣ, ಲಕ್ಷಣ; ವಿಶಿಷ್ಟ ಪ್ರಭಾವ, ಮಹಿಮೆ: gives a taste of his quality ತನ್ನ ವೈಶಿಷ್ಟ್ಯದ ರುಚಿಯನ್ನು, ಮಹಿಮೆಯನ್ನು ತೋರಿಸುತ್ತಾನೆ.
  • (ಒಬ್ಬನಿಗೆ) ತಕ್ಕ, ಸಲ್ಲುವ, ಉಚಿತವಾದ, ಯೋಗ್ಯವಾದ – ಗುಣ: the qualities of a ruler ರಾಜೋಚಿತ ಗುಣಗಳು; ರಾಜಯೋಗ್ಯ ಲಕ್ಷಣಗಳು.
  • ವಸ್ತುವೊಂದರ ತುಲನಾತ್ಮಕ – ಸ್ವರೂಪ, ಬಗೆ, ಮಾದರಿ, ನಮೂನೆ ಯಾ ರಖಮು: is made in three qualities ಮೂರು ರಖಂಗಳಲ್ಲಿ ತಯಾರಿಸಲಾಗಿದೆ.
  • ಬೌದ್ದಿಕ ಯಾ ನೈತಿಕ – ಗುಣ, ವಿಶೇಷ: the quality of mercy ದಯಾಗುಣ.
  • (ಪ್ರಾಚೀನ ಪ್ರಯೋಗ) ವರಿಷ್ಠತೆ; ಉನ್ನತ – ವರ್ಗ; ಅಂತಸ್ತು; ಮೇಲ್ದರ್ಜೆ: people of quality ವರಿಷ್ಠರು; ಉನ್ನತ ಅಂತಸ್ತಿನವರು. the quality ವರಿಷ್ಠ ವರ್ಗ.
  • (ತರ್ಕಶಾಸ್ತ್ರ) (ತಾರ್ಕಿಕ ಪ್ರತಿಜ್ಞಾವಾಕ್ಯದ ವಿಷಯದಲ್ಲಿ) ಭಾವಾತ್ಮಕತೆ ಯಾ ಅಭಾವಾತ್ಮಕತೆ; ಅಸ್ತ್ಯರ್ಥಕವಾಗಿ ಯಾ ನಾಸ್ತ್ಯರ್ಥಕವಾಗಿ ಸ್ವರೂಪ ಇರುವಿಕೆ, ಉದಾಹರಣೆಗೆ all men are mortal ಎಲ್ಲ ಮಾನವರೂ ಮರ್ತ್ಯರು (ಅಸ್ತ್ಯರ್ಥಕ). some men are not honest ಕೆಲವು ಮಾನವರು ಪ್ರಾಮಾಣಿಕರಲ್ಲ (ನಾಸ್ತ್ಯರ್ಥಕ).
  • (ಶಬ್ದ, ವಾಕ್ಕು, ಮೊದಲಾದವುಗಳ ವಿಷಯದಲ್ಲಿ) ವಿಶಿಷ್ಟ ಗುಣ, ಲಕ್ಷಣ; ವಿಶಿಷ್ಟತೆ; ವೈಶಿಷ್ಟ್ಯ; ಉಚ್ಚತೆ, ಗಂಭೀರತೆ, ದುತ್ವ, ಮೊದಲಾದ ಗುಣಗಳಿಂದ ಭಿನ್ನವಾದ ವ್ಯ\-ಕ್ತಿಯನ್ನು ಗುರುತಿಸಲು ನೆರವಾಗುವ ಲಕ್ಷಣ.

  • quality
    ಗುಣವಾಚಕ
    ಉತ್ತಮ ದರ್ಜೆಯ; ಶ್ರೇಷ್ಠ ಗುಣದ: quality product ಉತ್ತಮ ದರ್ಜೆಯ ಉತ್ಪನ್ನ.

    quality control
    ನಾಮವಾಚಕ
    ಗುಣ ನಿಯಂತ್ರಣ; ಉತ್ಪನ್ನದ ಮಾದರಿಯೊಂದು ನಿರ್ದೇಶನಕ್ಕೆ ತಕ್ಕಂತೆ ತಯಾರಾಗಿದೆಯೆ ಎಂಬುದನ್ನು ಪರೀಕ್ಷಿಸಿ, ಉತ್ಪನ್ನದ ಗುಣಮಟ್ಟವನ್ನು ಕಾಪಾಡುವ ಒಂದು ವ್ಯವಸ್ಥೆ, ವಿಧಾನ.

    qualm
    ನಾಮವಾಚಕ
  • (ಏಕಾಏಕಿ ಬವಳಿ, ಕ್ಷೀಣತೆ, ಪಿತ್ತೋದ್ರೇಕ, ಮೊದಲಾದವುಗಳ ಪರುಣಾಮದಿಂದ ಉಂಟಾಗುವ) ಸುಸ್ತು; ಸಂಕಟ; ಕ್ಷೀಣತೆ.
  • (ಇದ್ದಕ್ಕಿದಂತೆ ಉಂಟಾಗುವ) ಎದೆಗುಂದು; ಮನಸ್ಸಿನ ಅಳುಕು; ದಯ ದೌರ್ಬಲ್ಯ; ಕ್ಲ್ಯೆಬ್ಯ.
  • (ಸಂಕಲ್ಪಿಸಿರುವ ಕಾರ್ಯವು ಧರ್ಮವೋ ಅಧರ್ಮವೋ, ಉಚಿತವೋ ಅನುಚಿತವೋ ಎಂಬ, ಅಂತರ್ವಾಣಿಯಿಂದ ಪ್ರೇರಿತವಾದ) ಧರ್ಮ ಶಂಕೆ; ಧರ್ಮಾಧರ್ಮ ಸಂದೇಹ; ಪಾಪ ಶಂಕೆ.
  • (ಮುಖ್ಯವಾಗಿ ತನ್ನ ನಡತೆಯ ವಿಷಯದಲ್ಲಿ ಉಂಟಾದ) ಅಳುಕು; ಸಂಶಯ; ಮುಜುಗರ.

  • qualmish
    ಗುಣವಾಚಕ
  • (ಮುಖ್ಯವಾಗಿ) ಪಿತ್ತ ಸಂಕಟದ; ಬವಳಿ ಯಾ ಪಿತ್ತೋದ್ರೇಕದಿಂದ ಉಂಟಾಗುವ ಸುಸ್ತಿನ, ಸಂಕಟದ.
  • (ಏಕಾಏಕಿ ಉಂಟಾಗುವ) ದಯ ದೌರ್ಬಲ್ಯದ.
  • ಧರ್ಮ ಶಂಕೆಯ; ಧರ್ಮಾಧರ್ಮ ಸಂದೇಹದ; ಅಳುಕಿನ.

  • quandary
    ನಾಮವಾಚಕ
  • ದಿಗ್ಭ್ರಾಂತಿ; ದಿಕ್ಕುಗೆಟ್ಟ ಸ್ಥಿತಿ; ಹಿಂದು ಮುಂದು ತೋರದ, ದಿಕ್ಕು ತೋಚದ ವಿಷಮ ಪರಿಸ್ಥಿತಿ.
  • ಇಕ್ಕಟ್ಟು; ಉಭಯಸಂಕಟ; ದ್ವಂದ್ವ; ಪೇಚು.

  • quango
    ನಾಮವಾಚಕ
    ಕ್ವಾಂಗೋ; ಸರಕಾರದ ಧನಸಹಾಯವಿರುವ, ಮತ್ತು ಅದರ ಹಿರಿಯ ಅಧಿಕಾರಿಗಳನ್ನು ಸರಕಾರವೇ ನೇಮಕ ಮಾಡುವ ಒಂದು ಅರೆ ಸರ್ಕಾರಿ ಸಂಸ್ಥೆ.

    quant
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಚೂಪು ಬುಡದ ಗಣೆ; (ಇಂಗ್ಲೆಂಡಿನ ಪೂರ್ವ ಕರಾವಳಿಯ ಅಂಬಿಗರು ಮೊದಲಾದವರು ದೋಣಿ ನಡೆಸಲು ಬಳಸುವ, ಕೆಸರಿನಲ್ಲಿ ಸಿಕ್ಕಿಕೊಳ್ಳದಂಥ) ಚೂಪಾದ ಬುಡವುಳ್ಳ ಜಲ್ಲೆ, ಹುಟ್ಟು ಕೋಲು, ಗಣೆ.


    logo