logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Quakerism
ನಾಮವಾಚಕ
ಕ್ವೇಕರರ ತತ್ತ್ವಗಳು ಹಾಗೂ ಆಚರಣೆಗಳು.

quaking-grass
ನಾಮವಾಚಕ
(ಗಾಳಿಯಲ್ಲಿ ಅಲುಗುವ ತೆಳುವಾದ ಕಾಂಡಗಳುಳ್ಳ ಒಂದು ಬಗೆಯ) ಅದುರು ಹುಲ್ಲು.

quaky
ಗುಣವಾಚಕ
( ತರರೂಪ quakier, ತಮರೂಪ quakiest). ನಡುಗುವ; ಅದುರುವ; ಕಂಪಿಸುವ.

qualifiable
ಗುಣವಾಚಕ
(ವ್ಯಾಕರಣ) ವಿಶೇಷಿಸಬಹುದಾದ.

qualification
ನಾಮವಾಚಕ
    1. ಪರಿಮಿತಿ: statement with many qualifications ಹಲವು ಪರಿಮಿತಿಗಳುಳ್ಳ ಹೇಳಿಕೆ.
    2. ಉಪಾಧಿಯನ್ನು ಹೊಂದಿರುವುದು ಯಾ ಉಪಾಧಿ ಆಗಿರುವುದು.
    3. ಪರಿಮಿತಿ; ಪರಿಚ್ಛೇದ; ಪರಿಮಿತಿಗೊಳಿಸುವ ಸಂದರ್ಭ ಯಾ ಪರಿಸ್ಥಿತಿ.
    4. (ಯಾವುದೇ ವಸ್ತುವಿನ ಯಾ ವಿಷಯದ ಯಾ ತತ್ತ್ವದ) ಪರಿಚ್ಛಿನ್ನತೆ; ಪೂರ್ಣತೆ ಯಾ ನಿರುಪಾಧಿಕತೆಯಲ್ಲಿ ನ್ಯೂನತೆ: his delight had one qualification ಅವನ ಸಂತೋಷದಲ್ಲಿ ಒಂದು ನ್ಯೂನತೆಯಿತ್ತು.
  • (ಹುದ್ದೆ ಮೊದಲಾದವಕ್ಕೆ ಒಬ್ಬನನ್ನು ತಕ್ಕವನನ್ನಾಗಿ ಮಾಡುವ) ಅರ್ಹತೆ; ಯೋಗ್ಯತೆ; ಕ್ಷಮತೆ.
  • ಹಕ್ಕನ್ನು ಪಡೆದುಕೊಳ್ಳುವ ಯಾ ಹುದ್ದೆಯನ್ನು ವಹಿಸಿಕೊಳ್ಳುವ ಮುನ್ನ
    1. ನೆರವೇರಿಸಲೇ ಬೇಕಾದ – ಷರತ್ತು, ನಿಯಮ.
    2. ತೋರಿಸಬೇಕಾದ – ಪ್ರಮಾಣಪತ್ರ, ಅರ್ಹತಾಪತ್ರ: the qualification for citizenship may be a certain income ಪೌರತ್ವದ ಹಕ್ಕನ್ನು ಪಡೆಯಲು ನಿಗದಿಯಾದ ವರಮಾನ ಒಂದು ಅರ್ಹತೆಯಾಗಬಹುದು.
  • ಯಾವುದೇ ಗುಣ ಮೊದಲಾದವನ್ನು ಆರೋಪಿಸುವುದು; ಆರೋಪ: the qualification of his policy as opportunistic is unfair ಅವನ ನೀತಿಗೆ ಸಮಯಸಾಧಕತ್ವವನ್ನು ಆರೋಪಿಸುವುದು ನ್ಯಾಯವಲ್ಲ.

  • qualificatory
    ಗುಣವಾಚಕ
  • ಪರಿಮಿತಗೊಳಿಸುವ; ಸೀಮಿತಗೊಳಿಸುವ.
  • ಅರ್ಹತೆಯನ್ನೀಯುವ; ಯೋಗ್ಯನನ್ನಾಗಿ ಮಾಡುವ; ತಕ್ಕುದಾಗಿಸುವ.

  • qualifier
    ನಾಮವಾಚಕ
  • (ವ್ಯಾಕರಣ) ವಿಶೇಷಕ; ಇನ್ನೊಂದು ಪದವನ್ನು ವಿಶೇಷಿಸುವ ಪದ, ಉದಾಹರಣೆಗೆ ಗುಣವಾಚಕ ಯಾ ಕ್ರಿಯಾವಿಶೇಷಣ.
  • ವಿಶೇಷಕ:
    1. ಅರ್ಹನನ್ನಾಗಿಸುವ ವ್ಯಕ್ತಿ ಯಾ ವಸ್ತು.
    2. ದ್ರವದ ಸಾಂದ್ರತೆಯನ್ನು ಮಾರ್ಪಡಿಸುವಂತದು.

  • qualify
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಹುದ್ದೆ, ಸ್ಥಾನ, ಅಧಿಕಾರ, ಪುರಸ್ಕಾರ, ಮೊದಲಾದವನ್ನು ಪಡೆಯಲು ನಿಗದಿಯಾದ ಷರತ್ತುಗಳನ್ನು ಯಾ ಅಗತ್ಯಗಳನ್ನು ಪೂರೈಸಿ) ಅರ್ಹನಾಗು; ಅರ್ಹತೆ ಗಳಿಸು.
  • (ವ್ಯಕ್ತಿಗೆ ಯಾ ವಿಷಯಕ್ಕೆ ಯಾವುದೇ ಗುಣ ಮೊದಲಾದವನ್ನು) ಆರೋಪಿಸು; ಅಂತಿರುವಂತೆ ವರ್ಣಿಸು, ನಿರೂಪಿಸು: qualify the proposal as iniquitous ಸಲಹೆಯನ್ನು ಅನ್ಯಾಯವಾದದ್ದೆಂದು ಆರೋಪಿಸು.
  • (ವ್ಯಾಕರಣ) (ಪದದ, ಮುಖ್ಯವಾಗಿ ಗುಣವಾಚಕದ ವಿಷಯದಲ್ಲಿ) ವಿಶೇಷಿಸು; ಇನ್ನೊಂದು ಪದಕ್ಕೆ ಮುಖ್ಯವಾಗಿ ನಾಮಪದಕ್ಕೆ, ಗುಣವೊಂದನ್ನು ಅನ್ವಯಿಸು: adjectives qualify nouns ವಿಶೇಷಣಗಳು ನಾಮವಾಚಕಗಳನ್ನು ವಿಶೇಷಿಸುತ್ತವೆ.
  • ಅರ್ಹನನ್ನಾಗಿಸು; ದಕ್ಷನನ್ನಾಗಿಸು; ಒಂದು ಹುದ್ದೆಗೆ ಯಾ ಉದ್ದೇಶಕ್ಕೆ ಯೋಗ್ಯವಾಗುವಂತೆ ಮಾಡು.
  • ಕಾನೂನು ಮೇರೆಗೆ ಹಕ್ಕುಳ್ಳವನನ್ನಾಗಿ ಮಾಡು; ಅಧಿತನನ್ನಾಗಿಸು.
  • (ಹೇಳಿಕೆಯನ್ನು ಯಾ ಅಭಿಪ್ರಾಯವನ್ನು) ಸೀಮಿತಗೊಳಿಸು; (ಪರಿಮಿತಿಗಳಿಗೆ, ಷರತ್ತುಗಳಿಗೆ, ಉಪಾಧಿಗಳಿಗೆ ಒಳಪಡಿಸುವುದರ ಮೂಲಕ, ಹೇಳಿಕೆಯ ಯಾ ಅಭಿಪ್ರಾಯದ) ವ್ಯಾಪ್ತಿಯನ್ನು ಕಡಿಮೆಮಾಡು.
  • (ಅನುಭವ ಮೊದಲಾದವುಗಳ) ತೀವ್ರತೆಯನ್ನು – ತಗ್ಗಿಸು, ಕುಗ್ಗಿಸು; ಕಡಿಮೆ ಮಾಡು.
  • (ದ್ರವದ) (ಸಾಂದ್ರತೆಯನ್ನು ಯಾ ರುಚಿಯನ್ನು) ಮಾರ್ಪಡಿಸು; ವ್ಯತ್ಯಾಸಮಾಡು.
  • ಒಂದು ನಿರ್ದಿಷ್ಟ ಗುಣವನ್ನು ಆರೋಪಿಸು, – ಎಂದು ವಿವರಿಸು: the idea was qualified as absurd ಆ ಅಭಿಪ್ರಾಯವನ್ನು ಅರ್ಥಹೀನವೆಂದು ಆರೋಪಿಸಲಾಯಿತು.

  • qualifying
    ಗುಣವಾಚಕ
    ಅರ್ಹತಾ ನಿರ್ಧಾರಕ; ಯೋಗ್ಯತಾಮಾಪಕ; ಅರ್ಹತೆ ಗಳಿಸುವವರನ್ನು ನಿರ್ಧರಿಸುವ: qualifying examination ಅರ್ಹತಾ ಪರೀಕ್ಷೆ.

    qualitative
    ಗುಣವಾಚಕ
    ಗುಣಾತ್ಮಕ; ಗುಣಕ್ಕೆ ಸಂಬಂಧಿಸಿದ ಯಾ ಗುಣವನ್ನು ಅವಲಂಬಿಸಿದ: led to a qualitative change in society ಸಮಾಜದಲ್ಲಿ ಗುಣಾತ್ಮಕ ಬದಲಾವಣೆಗೆ ಅನುವಾಯಿತು.


    logo