logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

quaff
ಸಕರ್ಮಕ ಕ್ರಿಯಾಪದ
(ಸಾಹಿತ್ಯಕ)
  • ಗಟಗಟನೆ ಕುಡಿದುಬಿಡು; ಒಂದೇ ಗುಟುಕಿನಲ್ಲಿ ಕುಡಿದುಬಿಡು ( ಅಕರ್ಮಕ ಕ್ರಿಯಾಪದ ಸಹ).
  • (ಬಟ್ಟಲು ಮೊದಲಾದವನ್ನು ದೀರ್ಘ ಗುಟುಕುಗಳಲ್ಲಿ) ಕುಡಿದು ಬರಿದು ಮಾಡು.

  • quaffable
    ಗುಣವಾಚಕ
    ಗಟಗಟನೆ ಕುಡಿದು ಬಿಡಬಹುದಾದ, ಕುಡಿದು ಮುಗಿಸಬಹುದಾದ.

    quaffer
    ನಾಮವಾಚಕ
    ಗಟಗಟನೆ ಕುಡಿಯುವವ.

    quag
    ನಾಮವಾಚಕ
    ಜೌಗು (ಪ್ರದೇಶ); ಹುಲ್ಲು ಮುಚ್ಚಿಯೋ ನೋಡಲು ಗಟ್ಟಿಯೆಂದೋ ತೋರುವ, ಆದರೆ ಮೇಲೆ ನಡೆದಾಗ ಅದುರಿ ಕುಸಿಯುವ, ಉಸುಬು ನೆಲ.

    quagga
    ನಾಮವಾಚಕ
    (ಹಿಂದೆ ದಕ್ಷಿಣ ಆಹ್ರಿಕದಲ್ಲಿದ್ದ) ತಲೆ, ಕತ್ತು ಮತ್ತು ದೇಹದ ಮುಂಭಾಗಗಳಲ್ಲಿ ಹಳದಿ – ಕಂದು ಪಟ್ಟೆಗಳಿದ್ದ, ವಂಶ ನಷ್ಟವಾದ, ಜೀಬ್ರದಂಥ ಒಂದು ಸಸ್ತನಿ.

    quaggy
    ಗುಣವಾಚಕ
    ಜೌಗುಜೌಗಾದ; ಉಸುಬು ಉಸುಬಾದ.

    quagmire
    ನಾಮವಾಚಕ
  • ಕಾಲು ಹೂತುಕೊಳ್ಳುವ ಉಸುಬು, ಜೌಗು – ನೆಲ; ಕೆಸರು; ಪಂಕ; ಬದಿ.
  • (ರೂಪಕವಾಗಿ) ಕೆಸರು; ಅಪಾಯಕಾರಿಯಾದ ಯಾ ಇಕ್ಕಟ್ಟಿನ ಪರಿಸ್ಥಿತಿ.

  • quahaug
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = quahog.

    quahog
    ನಾಮವಾಚಕ
    ಉತ್ತರ ಆಮೆರಿಕದ ಆಟ್ಲಾಂಟಿಕ್‍ ತೀರದಲ್ಲಿನ, ತಿನ್ನಬಲ್ಲ ಕ್ಲಾ$\!$ಮ್‍ ದ್ವಂಗಿಗಳಲ್ಲಿ ಒಂದು.

    quaich
    ನಾಮವಾಚಕ
    (ಸ್ಕಾಟ್ಲೆಂಡ್‍) (ಸಾಮಾನ್ಯವಾಗಿ ಮರದಲ್ಲಿ ಮಾಡಿದ, ಎರಡು ಹಿಡಿಗಳಿರುವ) ಕುಡಿಯುವ ಬಟ್ಟಲು; ಪಾನಪಾತ್ರೆ.


    logo