logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

pythonic
ಗುಣವಾಚಕ
ಅಪೋಲೋ ದೇವತೆಯ ಅರ್ಚಕಿಯ ಯಾ ಆಕೆಗೆ ಸಂಬಂಧಿಸಿದ.

pyuria
ನಾಮವಾಚಕ
(ವೈದ್ಯಶಾಸ್ತ್ರ) ಕೀವು ಮೂತ್ರ; ಕೀವುಚ್ಚೆ; ಮೂತ್ರದಲ್ಲಿ ಕೀವು ಇರುವುದು.

pyx
ನಾಮವಾಚಕ
  • (ಚರ್ಚು) ಪ್ರಭುಭೋಜನ ಸಂಸ್ಕಾರದಲ್ಲಿ ಪವಿತ್ರವಾದ ಬ್ರೆಡ್ಡನ್ನು ಇಡುವ ಪಾತ್ರೆ.
  • (ಬ್ರಿಟಿಷ್‍ ಪ್ರಯೋಗ) ನಾಣ್ಯಸಂಪುಟ; (ಬ್ರಿಟನ್ನಿನ ಸರ್ಕಾರೀ ಟಂಕಸಾಲೆಯಾದ ರಾಯಲ್‍ ಮಿಂಟ್‍ನಲ್ಲಿ ತಯಾರಿಸಿದ ಬೆಳ್ಳಿಯ ಹಾಗೂ ಚಿನ್ನದ ನಾಣ್ಯಗಳನ್ನು ಪರೀಕ್ಷಿಸಲು ಪ್ರತಿ ವರ್ಷವೂ ಬರುವ ಗೋಲ್ಡ್‍ಸ್ಮಿತ್‍ ಕಂಪನಿ ಎಂಬ ಅಕ್ಕಸಾಲಿಗರ ಸಂಸ್ಥೆಯಿಂದ ರಚಿತವಾದ ನ್ಯಾಯದರ್ಶಿಗಳ ಮಂಡಲಿಯ ಮುಂದೆ ತೋರಿಸುವ ಸಲುವಾಗಿ) ರಾಯಲ್‍ ಮಿಂಟ್‍ನಲ್ಲಿ ಬೆಳ್ಳಿಯ ಮತ್ತು ಚಿನ್ನದ ನಾಣ್ಯಗಳ ಮಾದರಿಗಳನ್ನು ಇಡುವ ಪೆಟ್ಟಿಗೆ.

  • pyx
    ಸಕರ್ಮಕ ಕ್ರಿಯಾಪದ
    (ಬ್ರಿಟಿಷ್‍ ಪ್ರಯೋಗ)
  • ನಾಣ್ಯಸಂಪುಟದಲ್ಲಿ (ನಾಣ್ಯಗಳನ್ನು) ಕಾಪಿಡು.
  • ಮಾದರಿ ನಾಣ್ಯಗಳನ್ನು ತೂಗಿನೋಡಿ ಅವುಗಳ ಗುಣಮಟ್ಟವನ್ನು ಪರೀಕ್ಷಿಸು.

  • pyxidium
    ನಾಮವಾಚಕ
    (ಸಸ್ಯವಿಜ್ಞಾನ) ಪಿಕ್ಸಿಡಿಯಮ್‍; ಪೆಟ್ಟಿಗೆಯ ಮುಚ್ಚಳದಂತೆ ಮೇಲ್ಭಾಗ ಎದ್ದು ಬರುವಂಥ ಬೀಜಕೋಶ.

    pyxis
    ನಾಮವಾಚಕ
  • ಸಣ್ಣ ಪೆಟ್ಟಿಗೆ, ಸಂಪುಟ.
  • = pyxidium.

  • pzazz
    ನಾಮವಾಚಕ
    pizazz ಎಂಬ ಪದದ ರೂಪಾಂತರ.


    logo