logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

packing fraction
ನಾಮವಾಚಕ
ಸಂಕಲನಾಂಕ; ನ್ಯೂಕ್ಲಿಯಾನುಗಳ ಸೇರುವಿಕೆಯಿಂದ ಆಗುವ ರಾಶಿ ಲಾಭ ಯಾ ರಾಶಿನಷ್ಟದ ಒಂದು ಅಳತೆ; ಯಾವುದೇ ಪರಮಾಣು ನ್ಯೂಕ್ಲಿಯಸ್ಸಿನ ಯಾ ಬೀಜದ ನಿಜವಾದ ರಾಶಿ ಹಾಗೂ ಅದರ ರಾಶಿ ಸಂಖ್ಯೆಗಳಿಗಿರುವ ವ್ಯತ್ಯಾಸಕ್ಕೂ, ರಾಶಿಸಂಖ್ಯೆಗೂ ಇರುವ ದಾಮಾಷಾವನ್ನು $10,000$ದಿಂದ ಗುಣಿಸಿದರೆ ಸಿಕ್ಕುವ ಸಂಖ್ಯೆ.

packing-case
ನಾಮವಾಚಕ
ಪ್ಯಾಕಿಂಗ್‍ ಪೆಟ್ಟಿ; ಪ್ಯಾಕ್‍ ಮಾಡುವ ಡಬ್ಬ; ವಸ್ತುಗಳನ್ನು ಪ್ಯಾಕ್‍ ಮಾಡಲು, ಕಟ್ಟಲು ಬಳಸುವ, ಸಾಮಾನ್ಯವಾಗಿ ಮರದ, ಡಬ್ಬ ಯಾ ಚೌಕಟ್ಟು.

packing-needle
ನಾಮವಾಚಕ
ಮೂಟೆ (ಹೊಲಿಯುವ) ದಬ್ಬಳ.

packing-sheet
ನಾಮವಾಚಕ
  • ಪ್ಯಾಕಿಂಗ್‍ ಹಾಳೆ, ಬಟ್ಟೆ, ಸಾಮಾನುಗಳನ್ನು ಪ್ಯಾಕ್‍ಮಾಡಲು ಬಳಸುವ ಬಟ್ಟೆ ಮೊದಲಾದವು.
  • ಒದ್ದೆಬಟ್ಟೆ; ತಣ್ಣೀರು ಬಟ್ಟೆ; (ಜಲಚಿಕಿತ್ಸೆಯಲ್ಲಿ ಬಳಸುವ) ತೇವದ ಬಟ್ಟೆ.

  • packman
    ನಾಮವಾಚಕ
    ಸಂಚಾರಿ ಮಾರಾಟಗಾರ; ತಿರುಗು ವ್ಯಾಪಾರಿ.

    packthread
    ನಾಮವಾಚಕ
    ಸುತ್ತಲಿ; ಗೋಣಿದಾರ; ಮೂಟೆ ಹೊಲಿಯಲು, ಕಟ್ಟಲು ಬಳಸುವ ದಪ್ಪ ದಾರ.

    pact
    ನಾಮವಾಚಕ ಪದಗುಚ್ಛ
    ಒಪ್ಪಂದ; ಒಡಂಬಡಿಕೆ; ಕೌಲು; ಸಂಧಿ; ಕರಾರು. peace pact ಶಾಂತಿ – ಒಪ್ಪಂದ, ಕರಾರು.

    pad
    ನಾಮವಾಚಕ
  • (ಕಿರುಗುಟ್ಟುವುದನ್ನು ಕಡಮೆ ಮಾಡುವುದಕ್ಕಾಗಲಿ, ಚೀಲ ಮೊದಲಾದವುಗಳ ಖಾಲಿ ಸ್ಥಳವನ್ನು ತುಂಬುವುದಕ್ಕಾಗಲಿ ಉಪಯೋಗಿಸುವ, ದ್ರವವನ್ನು ಹೀರಿಕೊಳ್ಳುವುದು ಮೊದಲಾದವಕ್ಕೆ ಬಳಸುವ) ತುಂಬು; ಮೆತ್ತೆ.
  • ಬರೆಯುವ ಒತ್ತಿಗೆ, ಪ್ಯಾಡು; ಏಣಿನಲ್ಲಿ ಒಂದುಗೂಡಿಸಿದ ಒತ್ತು ಕಾಗದಗಳ ಯಾ ಲೇಖನ ಕಾಗದಗಳ ಕಟ್ಟು.
  • ಮಸಿ ಮೆತ್ತೆ; ರಬ್ಬರ್‍ ಸ್ಟ್ಯಾಂಪನ್ನು ಒತ್ತುವ, ಮಸಿಯ ತೇವವನ್ನು ಹಿಡಿದಿಟ್ಟಿರುವ ಒತ್ತಿಗೆ, ಮೆತ್ತೆ.
  • ಒತ್ತಿಗೆ; ಕೆಲವು ಚತುಷ್ಪಾದಿಗಳಲ್ಲಿ ಅಂಗಾಲಿನ ಯಾ ಮನುಷ್ಯನ ಬೆರಳಿನ ಮಾಂಸಲಭಾಗ, ಮೆತ್ತೆ.
  • (ಕ್ರಿಕೆಟ್‍ ಮೊದಲಾದ ಆಟಗಳಲ್ಲಿ) (ಕಾಲು ಮೊದಲಾದ ಅಂಗಗಳ ರಕ್ಷಣೆಗೆ ಬಳಸುವ) ಪ್ಯಾಡು; ಮೆತ್ತೆ ಕಾಪು.
  • (ಹೆಲಿಕಾಪ್ಟರು ಹಾರಲು ಯಾ ರಾಕೆಟ್ಟನ್ನು ಉಡಾಯಿಸಲು ಬಳಸುವ) ಮಟ್ಟಸವಾದ ಜಗಲಿ, ವೇದಿಕೆ, ಪೀಠ.
  • (ಆಡುಮಾತು) ವಸತಿಗೃಹ; ಮುಖ್ಯವಾಗಿ ಕುಳಿತುಕೊಳ್ಳಲು ಮತ್ತು ಮಲಗಲು ಬಳಸುವ ಕೋಣೆ, ಹ್ಲ್ಯಾಟು, ವಠಾರ.
  • (ಅಮೆರಿಕನ್‍ ಪ್ರಯೋಗ) ನೈದಿಲೆಯ ತೇಲುವ ಎಲೆ.
  • ಪಟ್ಟಿ ಬಿಗಿಯುವ ಜೀನಿನ ಭಾಗ.
  • (ನರಿ, ಮೊಲ, ಮೊದಲಾದವುಗಳ) ಪಂಜಾ; ಪಂಜರ; ಮುಂಗಾಲು.
  • (ಬೈರಿಗೆಯಲ್ಲಿ) ಅಲಗು (ಕೂರುವ) ಕಂಡಿ.
  • (ಅನೇಕ ಬಗೆಯ ಉಪಕರಣಗಳನ್ನು ಕೂರಿಸಬಹುದಾದ, ಸಿಕ್ಕಿಸಬಹುದಾದ, ಕೂರುಗಂಡಿಯುಳ್ಳ) ಹಿಡಿಕೆ.

  • pad
    ಸಕರ್ಮಕ ಕ್ರಿಯಾಪದ ಪದಗುಚ್ಛ
    padded cell (ಹುಚ್ಚಾಸ್ಪತ್ರೆಯಲ್ಲಿ) ಮೆತ್ತೆ ಕೋಣೆ; ಮೆತ್ತೆ ಅಂಟಿಸಿದ ಗೋಡೆಗಳುಳ್ಳ ಕೋಣೆ, ಕೊಠಡಿ.
  • ಮೆತ್ತೆಯೊದಗಿಸು; ಮೆತ್ತೆ ತುಂಬು.
  • (ಪುಸ್ತಕ, ವಾಕ್ಯ, ಮೊದಲಾದವನ್ನು) ವ್ಯರ್ಥವಾಗಿ ಉಬ್ಬಿಸು; ಅನಾವಶ್ಯಕ ವಿಷಯ, ಪದ, ಮೊದಲಾದವನ್ನು ಸೇರಿಸು, ತುಂಬು.

  • pad
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    (ರಸ್ತೆ ಮೊದಲಾದವುಗಳಲ್ಲಿ) ತಿರುಗಾಡು; ಓಡಾಡು; ಅಡ್ಡಾಡು.
  • ಕಾಲೆಳೆದುಕೊಂಡು ಮೆಲ್ಲಗೆ, ನಿಧಾನವಾಗಿ ನಡೆ.
  • ಕಾಲ್ನಡಗೆಯಲ್ಲಿ – ಹೋಗು, ತಿರುಗಾಡು, ಪ್ರಯಾಣ ಮಾಡು; ಪಾದಯಾತ್ರೆ ಮಾಡು.


  • logo