logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

package holiday
ನಾಮವಾಚಕ
ಸಕಲ ಏರ್ಪಾಡಿನ ಪ್ರವಾಸ; ಒಟ್ಟಾರೆ ವ್ಯವಸ್ಥೆಯ ಪ್ರವಾಸ; ಎಲ್ಲಾ ವ್ಯವಸ್ಥೆಗಳಿಗೆ ತಗಲುವ ಖರ್ಚುಗಳನ್ನು ಒಳಗೊಳ್ಳುವ ಹಣವನ್ನು ಪಡೆದು ಏರ್ಪಡಿಸುವ ಪ್ರವಾಸ.

package tour
ನಾಮವಾಚಕ
= package holiday.

packager
ನಾಮವಾಚಕ
ಪ್ಯಾಕ್‍ಗಾರ; ಸಾಮಾನುಗಳನ್ನು ಡಬ್ಬ ಮೊದಲಾದವುಗಳಿಗೆ ಹಾಕಿ ಕಟ್ಟುವವ, ಪ್ಯಾಕ್‍ ಮಾಡುವವ.

packaging
ನಾಮವಾಚಕ
    1. ಪ್ಯಾಕಿಂಗ್‍ ಪದಾರ್ಥ; ಸಾಮಾನುಗಳನ್ನು ಕಟ್ಟುವ, ಸುತ್ತುವ ಪದಾರ್ಥ; ವಸ್ತು.
    2. ಸಾಮಾನುಗಳನ್ನು ತುಂಬುವ ಪೆಟ್ಟಿಗೆ ಮೊದಲಾದವು.
  • ಪ್ಯಾಕಿಂಗು; ಸಾಮಾನುಗಳನ್ನು ಕಟ್ಟುವಿಕೆ, ಪ್ಯಾಕ್‍ಮಾಡುವ ಕ್ರಿಯೆ.

  • packed lunch
    ನಾಮವಾಚಕ
    ಡಬ್ಬಿ ಊಟ; (ಚೀಲ, ಡಬ್ಬಿ, ಮೊದಲಾದವುಗಳಲ್ಲಿ) ಕೆಲಸ, ಶಾಲೆ, ಮೊದಲಾದ ಸ್ಥಳಗಳಿಗೆ ಒಯ್ಯುವ ಊಟ.

    packer
    ನಾಮವಾಚಕ
    ಪ್ಯಾಕರ್‍; ಭರ್ತಿಗಾರ; ತುಂಬುಗ; ಮುಖ್ಯವಾಗಿ ಮಾರುಕಟ್ಟೆಗೆ ಕಳುಹಿಸುವ ಹಣ್ಣು, ಮಾಂಸ, ಮೊದಲಾದ ಆಹಾರಪದಾರ್ಥಗಳನ್ನು ಡಬ್ಬ ಮೊದಲಾದವುಗಳಲ್ಲಿ ತುಂಬುವವನು, ಪ್ಯಾಕ್‍ ಮಾಡುವವನು ಯಾ ಅಂತಹ ಯಂತ್ರ.

    packet
    ನಾಮವಾಚಕ ಪದಗುಚ್ಛ
  • ಸಣ್ಣ ಕಟ್ಟು; ಪೊಟ್ಟಣ; ಪುಡಿಕೆ.
  • (ಆಡುಮಾತು) ಹಣದ ಗಂಟು; (ಜೂಜು, ಬಾಜಿ ಕಟ್ಟುವುದು, ಮೊದಲಾದವುಗಳಲ್ಲಿ ಗಳಿಸಿದ ಯಾ ಕಳೆದುಕೊಂಡ) ಗಣನೀಯ, ದೊಡ್ಡ ಮೊತ್ತದ ಹಣ.
  • (ಚರಿತ್ರೆ) = packet-boat.

  • packet-boat
    ನಾಮವಾಚಕ
    (ಚರಿತ್ರೆ)
  • ಅಂಚೆಯ ಹಡಗು; ಟಪಾಲುದೋಣಿ.
  • ಪ್ರಯಾಣಿಕರ ಹಡಗು.

  • packhorse
    ನಾಮವಾಚಕ
    ಹೇರುಗುದುರೆ; ಮೂಟೆ ಹೊರುವ ಕುದುರೆ.

    packing
    ನಾಮವಾಚಕ
    ಪ್ಯಾಕಿಂಗು:
  • ಕಟ್ಟು; ವೇಷ್ಟನ; ಕಂತೆ ಕಟ್ಟುವುದು; ಮೂಟೆ ಕಟ್ಟುವಿಕೆ; ಮಾರುಕಟ್ಟೆ ಮೊದಲಾದ ಕಡೆಗಳಿಗೆ ಕಳುಹಿಸುವ ಪದಾರ್ಥಗಳನ್ನು ಕಟ್ಟುವುದು ಯಾ ಪೆಟ್ಟಿಗೆ ಮೊದಲಾದವುಗಳಲ್ಲಿ ತುಂಬುವುದು.
  • ಒಡೆದುಹೋಗುವ, ಸೂಕ್ಷ್ಮವಾದ ವಸ್ತುಗಳನ್ನು ಸುತ್ತಲು, ಪ್ಯಾಕ್‍ ಮಾಡಲು ಮೆತ್ತೆಯಾಗಿ ಬಳಸುವ ವಸ್ತು.
  • (ಯಂತ್ರಶಾಸ್ತ್ರ) ಅಡಚಲು; ಯಂತ್ರದ ಭಾಗಗಳು ಒಂದಕ್ಕೊಂದು ಸೇರಿಕೊಳ್ಳುವ ಭಾಗದಲ್ಲಿ ತುಂಬಲು ಯಾ ಅಚ್ಚುಗಂಬಿಯ ಘರ್ಷಣೆ ತಪ್ಪಿಸಲು ಬಳಸುವ ಕಾಗದ, ರಬ್ಬರ್‍, ಕಲ್ನಾರು, ಮೊದಲಾದವು.


  • logo