logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

paced
ಗುಣವಾಚಕ
  • ಗತಿಯ; ಗಮನದ; ವೇಗದ (ಸಾಮಾನ್ಯವಾಗಿ ಉತ್ತರಪ್ರತ್ಯಯವಾಗಿ ಪ್ರಯೋಗ): slow-paced ನಿಧಾನ ಗತಿಯ.
  • ಹೆಜ್ಜೆ ಇಟ್ಟು ಅಳೆದ; ಕ್ರಮಿಸಿ ಅಳತೆ ಮಾಡಿದ.
  • ನಿರ್ದಿಷ್ಟ ವೇಗದಲ್ಲಿ ಓಡಿದ; ಗತಿ ನಿಯಾಮಕನು ನಿರ್ದೇಶಿಸುವ ವೇಗದಲ್ಲಿ ಓಡಿದ: a paced mile ನಿರ್ದಿಷ್ಟ ವೇಗದಲ್ಲಿ ಓಡಿದ ಒಂದು ಮೈಲಿ (ದೂರ).

  • pacemaker
    ನಾಮವಾಚಕ
    ಗತಿ – ನಿಯಾಮಕ, ನಿರ್ದೇಶಕ, ನಿಯಂತ್ರಕ:
  • ಓಟದ ಪಂದ್ಯ ಮೊದಲಾದವುಗಳಲ್ಲಿ ಹೆಜ್ಜೆಯ ವೇಗವನ್ನು ತೋರಿಸಿಕೊಡಲು, ಸವಾರಿ ಮಾಡುತ್ತಾ ಯಾ ಓಡುತ್ತಾ ಜೊತೆಯಲ್ಲಿ ಹೋಗುವವನು.
  • ಹೃದಯದ ಸ್ನಾಯುವನ್ನು ಪ್ರಚೋದಿಸಿ, ಅದರ ಸಂಕೋಚನವನ್ನು ನಿಯಂತ್ರಿಸಿ ಹೃದಯದ ಮಿಡಿತವನ್ನು ಸುಸ್ಥಿತಿಯಲ್ಲಿಡುವ ಹೃದಯದ ಭಾಗ ಯಾ ಅದೇ ಕೆಲಸ ಮಾಡುವ ಕೃತಕ ವಿದ್ಯುದುಪಕರಣ.

  • pacer
    ನಾಮವಾಚಕ
  • (ಮುಖ್ಯವಾಗಿ) ಕುಲುಕು ನಡೆಯ ಕುದುರೆ; ಜಗ್ಗು ಹಾಕಿಕೊಂಡು ನಡೆಯುವ ಕುದುರೆ.
  • ನಿಧಾನವಾಗಿ ಹೆಜ್ಜೆ ಹಾಕುತ್ತ ನಡೆಯುವ ವ್ಯಕ್ತಿ.
  • = pacemaker.

  • pacha
    ನಾಮವಾಚಕ
    pasha ಎಂಬ ಪದದ ರೂಪಾಂತರ.

    pachinko
    ನಾಮವಾಚಕ
    (ಜಪಾನೀಯರು ಆಡುವ) ಪಿನ್‍ಬಾಲ್‍ನಂಥ ಒಂದು ಆಟ.

    pachisi
    ನಾಮವಾಚಕ
    ಪಚ್ಚೀಸಿ (ಆಟ); ಆರು ಕವಡೆಗಳಿಂದ ನಾಲ್ಕು ಮಂದಿ ಆಡುವ ಒಂದು ಬಗೆಯ ಚೌಕಾಬಾರ (ಆಟ).

    pachyderm
    ನಾಮವಾಚಕ
  • ಮಂದಚರ್ಮಿ; ದಪ್ಪ ಚರ್ಮವಿರುವ ಪ್ರಾಣಿ (ಮುಖ್ಯವಾಗಿ ಆನೆ ಯಾ ಘೇಂಡಾಮೃಗ, ಖಡ್ಗಮೃಗ).
  • (ರೂಪಕವಾಗಿ) ದಪ್ಪ ಚರ್ಮದವನು; ಎಮ್ಮೆ ಚರ್ಮ(ದ ವ್ಯಕ್ತಿ); ಗೇಲಿ, ಅಪಮಾನ, ಮೊದಲಾದವನ್ನು ಮನಸ್ಸಿಗೆ ತೆಗೆದುಕೊಳ್ಳದವನು.

  • pachydermatous
    ಗುಣವಾಚಕ
  • ಮಂದಚರ್ಮಿಯ; ಮಂದಚರ್ಮಿಗೆ ಸಂಬಂಧಿಸಿದ.
  • ದಪ್ಪಚರ್ಮದ; ಸೂಕ್ಷ್ಮವಲ್ಲದ; (ಗೇಲಿ, ಅಪಮಾನ, ಮೊದಲಾದವನ್ನು) ಮನಸ್ಸಿಗೆ ಹಚ್ಚಿಕೊಳ್ಳದ: a pachydermatous indifference to insults ಅಪಮಾನಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದಂಥ ಔದಾಸೀನ್ಯ, ಉಪೇಕ್ಷೆ.

  • pacific
    ಗುಣವಾಚಕ
  • ಶಾಂತಿಮುಖವಾದ; ಶಾಂತಿಕರ; ಶಾಂತಿಯುತ; ಶಾಂತಿಪೂರ್ಣ; ಪ್ರಶಾಂತ; ಶಾಂತ(ಸ್ವಭಾವದ).
  • ಶಾಂತಿಯ; ಶಾಂತಿಸಂಬಂಧವಾದ: pacific overtures ಶಾಂತಿ(ಸಂಬಂಧವಾದ) ಪ್ರಸ್ತಾಪಗಳು.
  • (Pacific) ಪೆಸಿಹಿಕ್‍ ಯಾ ಶಾಂತಮಹಾಸಾಗರದ ಯಾ ಅದರ ಪಕ್ಕದಲ್ಲಿರುವ.

  • Pacific
    ನಾಮವಾಚಕ ಪದಗುಚ್ಛ
    ಶಾಂತಮಹಾಸಾಗರ; ಅಮೆರಿಕಕ್ಕೂ, ಏಷ್ಯಾಕ್ಕೂ ನಡುವಣ ಪೆಸಿಹಿಕ್‍ ಮಹಾಸಾಗರ. the pacific = Pacific.


    logo