logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

pa
(ಚರಿತ್ರೆ)
ಪಾ; ನ್ಯೂಸಿಲಂಡ್‍ನ (ಸಾಮಾನ್ಯವಾಗಿ ಕೋಟೆಯಿಂದ ಆವೃತವಾದ, ಬೆಟ್ಟದ ಮೇಲಿರುವ) ಹಳ್ಳಿ; (ಈಗಿನ ಪ್ರಯೋಗ) ಮಯೋರಿ ಹಳ್ಳಿ.

pabulum
ನಾಮವಾಚಕ
  • (ಮುಖ್ಯವಾಗಿ ಸಸ್ಯಗಳ ಮತ್ತು ಕೆಳದರ್ಜೆ ಪ್ರಾಣಿಗಳ) ಆಹಾರ; ಮೇವು; ತಿಂಡಿ; ತೀನಿ.
  • (ರೂಪಕವಾಗಿ) (ಮುಖ್ಯವಾಗಿ ಮನಸ್ಸಿನ) (ಪುಷ್ತಿದಾಯಕ) ಆಹಾರ: mental pabulum ಮನಸ್ಸಿನ, ಮಾನಸಿಕ – ಆಹಾರ.
  • ವಸ್ತು; ಗ್ರಾಸ: the interview provides pabulum to contemporary historians ಆ ಸಂದರ್ಶನವು ಸಮಕಾಲೀನ ಚರಿತ್ರಕಾರರಿಗೆ ಗ್ರಾಸ ಒದಗಿಸುತ್ತದೆ.

  • PABX
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) private automatic branch exchange.

    paca
    ನಾಮವಾಚಕ
    ಪ್ಯಾಕ; ಮಧ್ಯ ಮತ್ತು ದಕ್ಷಿಣ ಅಮೆರಿಕ ಪ್ರದೇಶಗಳಲ್ಲಿ ಜೀವಿಸುವ, ಬಾಲವಿಲ್ಲದ, ಬಿಳಿ ಚುಕ್ಕೆಗಳಿರುವ, ಕ್ಯೂನಿಕ್ಯಲಸ್‍ ಕುಲಕ್ಕೆ ಸೇರಿದ, ಒಂದು ಜಾತಿಯ ದಂಶಕ (ಪ್ರಾಣಿ).

    pace
    ನಾಮವಾಚಕ ಪದಗುಚ್ಛ
    1. (ನಡಗೆಯಲ್ಲಿ, ಓಟದಲ್ಲಿ) ಹೆಜ್ಜೆದಾಪು.
    2. (ಹೀಗೆ ಹಾಕಿದ) ಒಂದು ದಾಪಿನ ದೂರ; ಎರಡು ಹೆಜ್ಜೆಗಳ ನಡುವಣ ಅಂತರ (ಸುಮಾರು 75 ಸೆಂ.ಮೀ. ಯಾ 30 ಅಂಗುಲ).
    3. ನಡಗೆಯಲ್ಲಿ ಪಾದವನ್ನು ಒಮ್ಮೆ ನೆಲಕ್ಕೂರಿ ಅದರಿಂದ ಮುಂದೆ ಮತ್ತೊಮ್ಮೆ ಅದನ್ನು ಊರುವಲ್ಲಿ ಸಾಗಿದ ದೂರ (ಸುಮಾರು 60 ಅಂಗುಲ).
  • ನಡಗೆಯ, ಓಟದ ವೇಗ: with breathless pace ಅತ್ಯಂತ ವೇಗವಾಗಿ.
  • ವೇಗ:
    1. (ರಂಗಭೂಮಿ) ಪ್ರದರ್ಶನದ, ಅಭಿನಯದ ವೇಗ.
    2. (ಸಂಗೀತ) (ಗಾಯನದ ಯಾ ವಾದನದ) ನಡೆ; ಗತಿ: with great pace ದ್ರುತಗತಿಯಲ್ಲಿ; ವೇಗವಾಗಿ. with slow pace ಮಂದಗತಿಯಲ್ಲಿ; ನಿಧಾನವಾಗಿ.
  • ಬೆಳವಣಿಗೆಯ, ಅಭಿವೃದ್ಧಿಯ, ಪ್ರಗತಿಯ – ಪ್ರಮಾಣ (ಅನೇಕ ವೇಳೆ ರೂಪಕವಾಗಿ): the pace of development in science ವಿಜ್ಞಾನದ ಬೆಳವಣಿಗೆಯ ಪ್ರಮಾಣ.
    1. ನಡೆ; ನಡಗೆ; ನಡೆಯುವ, ಓಡುವ – ರೀತಿ.
    2. ನಡೆ; ನಡಗೆ; ಗತಿ; ಕ್ರಮಣ; ಗಮನ; (ಮುಖ್ಯವಾಗಿ ತರಬೇತು ಮಾಡಿದ ಕುದುರೆ, ಹೇಸರಗತ್ತೆ, ಮೊದಲಾದವುಗಳ) ಹಲವು ತೆರನ ನಡಗೆಗಳಲ್ಲಿ ಒಂದು: rode at an ambling pace ಕುಲುಕು ನಡಗೆಯಲ್ಲಿ ಸವಾರಿ ಮಾಡಿದ.
  • ಕುಲುಕು ನಡೆ; ಬಳುಕು ಗತಿ.
  • (ಕ್ರಿಕೆಟ್‍) ಬೋಲ್‍ ಮಾಡುವ ವೇಗ.
  • (ಕ್ರಿಕೆಟ್‍) (ಆಡುವ) ಪಟ್ಟೆಯ ವೇಗ; ಆಡುವ ನೆಲದ ಪಟ್ಟೆಯಿಂದ ಪುಟಿಯುವ ಚೆಂಡಿನ ವೇಗದ ಮೇಲೆ ಪಟ್ಟೆ ಬೀರಿರಬಹುದಾದ ಪ್ರಭಾವದ ಪ್ರಮಾಣ: difference in pace of matting and turf wickets ಹಾಸುಪಟ್ಟೆ ಮತ್ತು (ಹುಲ್ಲು) ಹೆಪ್ಪುಪಟ್ಟೆಗಳ ವೇಗಗಳಲ್ಲಿನ ವ್ಯತ್ಯಾಸ.
  • ಎತ್ತರಿಸಿದ ಮೆಟ್ಟಿಲು ಯಾ ವೇದಿಕೆ.

  • pace
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ನಿಧಾನವಾಗಿ ಯಾ ಒಂದೇ ಸಮನಾಗಿ ಹೆಜ್ಜೆ ಹಾಕುತ್ತಾ) ನಡೆ; ಹೋಗು.
  • (ಸವಾರ, ಓಟಗಾರ, ಮೊದಲಾದವರಿಗೆ) ಹೆಜ್ಜೆ ಹಾಕಿ ತೋರಿಸು.
  • (ದೂರವನ್ನು) ಹೆಜ್ಜೆ ಹಾಕಿ ಅಳೆ.
  • (ನಿಧಾನವಾಗಿ ಯಾ ಒಂದೇ ಸಮನಾಗಿ ಹೆಜ್ಜೆ ಹಾಕುತ್ತಾ) ಸಾಗು; ಪಯಣಿಸು; ಪ್ರಯಾಣ ಮಾಡು.
  • (ಒಂದು ನಿರ್ದಿಷ್ಟ ವೇಗದಲ್ಲಿ ನಡೆಯುವುದನ್ನು) ತೋರಿಸಿಕೊಡು; ಕಲಿಸು; ಅದರಲ್ಲಿ ತರಬೇತಿ ನೀಡು: pace a horse ಕುದುರೆಗೆ ನಡಿಗೆಯ ತರಬೇತಿ ನೀಡು.

  • pace
    ಉಪಸರ್ಗ
    (ವಿರುದ್ಧಾಭಿಪ್ರಾಯ ಸೂಚಿಸುವಲ್ಲಿ) ಕ್ಷಮಿಸುವುದಾದರೆ; ಅಪ್ಪಣೆಯೊಂದಿಗೆ; ಅಪ್ಪಣೆ ಬೇಡಿ: I do not, pace Mr. Smith, agree with his ideas ಮಿಸ್ಟರ್‍ ಸ್ಮಿತ್‍ ಕ್ಷಮಿಸಬೇಕು, ನಾನು ಅವರ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ.

    pace bowler
    ನಾಮವಾಚಕ
    (ಕ್ರಿಕೆಟ್‍) ವೇಗದ ಬೋಲರು; ‘ಸ್ಪಿನ್‍’ ಮಾಡದೆ ಬಿರುಸಾಗಿ ಬೋಲ್‍ ಮಾಡುವವ.

    pace-setter
    ನಾಮವಾಚಕ
  • ನಾಯಕ; ಮುಂದಾಳು; ನೇತಾರ.
  • = pacemaker(a).
  • ಮಾದರಿ; ಇತರರು ಅನುಕರಿಸಬೇಕಾದ ವ್ಯಕ್ತಿ ಮೊದಲಾದವರು: that firm was the pace-setter in car design for many years ಕಾರಿನ ವಿನ್ಯಾಸದಲ್ಲಿ ಆ ಸಂಸ್ಥೆ ಅನೇಕ ವರ್ಷ ಮಾದರಿಯಾಗಿತ್ತು.

  • pace-stick
    ನಾಮವಾಚಕ
    ಗತಿಮಾಪಕ; ಹೆಜ್ಜೆಯ ದೂರವನ್ನು ಅಳತೆಗೆ ತಕ್ಕಂತೆ ಹೊಂದಿಸಲಾಗುವ, ವ್ಯಾಯಾಮ ಶಿಕ್ಷಕನ ಒಂದು ಇಗ್ಗಾಲಿ ಸಲಕರಣೆ.


    logo