logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Pakistan
ನಾಮವಾಚಕ
ಪಾಕಿಸ್ತಾನ; 1947ರಲ್ಲಿ ದಕ್ಷಿಣ ಏಷ್ಯದಲ್ಲಿ ಸ್ಥಾಪಿತವಾದ ಸ್ವತಂತ್ರ ಮುಸ್ಲಿಂ ರಾಷ್ಟ್ರ.

Pakistani
ನಾಮವಾಚಕ
ಪಾಕಿಸ್ತಾನದಲ್ಲಿ ಹುಟ್ಟಿದವ ಯಾ ಪಾಕಿಸ್ತಾನಿ ಪ್ರಜೆ.

Pakistani
ಗುಣವಾಚಕ
ಪಾಕಿಸ್ತಾನದ ಯಾ ಅದಕ್ಕೆ ಸಂಬಂಧಿಸಿದ.

pakora
ನಾಮವಾಚಕ
ಪಕೋಡ; ಭಾರತದ ಒಂದು ಬಗೆಯ ಕರಿದ ತಿಂಡಿ.

pal
ನಾಮವಾಚಕ
(ಆಡುಮಾತು) ಗೆಣೆಯ; ಗೆಳೆಯ; ಸ್ನೇಹಿತ; ಮಿತ್ರ; ಜೊತೆಗಾರ; ಸಂಗಾತಿ; ಸಂಗಡಿಗ.

pal
ಅಕರ್ಮಕ ಕ್ರಿಯಾಪದ ಪದಗುಚ್ಛ
(ಇನ್ನೊಬ್ಬನೊಡನೆ) ಸಹವಾಸ ಮಾಡು; ಜೊತೆಗೂಡು; ಜೊತೆಯಾಗು; ಮಿತ್ರತ್ವ ಬೆಳೆಸು. pal up = 2pal.

palace
ನಾಮವಾಚಕ
  • (ದೊರೆ, ಆರ್ಚ್‍ ಬಿಷಪ್‍, ಬಿಷಪ್‍, ಮೊದಲಾದವರ) ಅರಮನೆ; ಅಧಿಕೃತ ನಿವಾಸ, ವಾಸಸ್ಥಾನ.
  • ಅರಮನೆ; ಭವನ; ಮಹಲು; ಸೌಧ; ಪ್ರಾಸಾದ.
  • (ವಿನೋದ, ಉಪಾಹಾರ, ಮೊದಲಾದವುಗಳಿಗಾಗಿರುವ) ವಿಶಾಲ ಮಂದಿರ; ಭವ್ಯ ಭವನ.

  • palace car
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಭವ್ಯ ರೈಲುಬಂಡಿ; ಸುಖಭೋಗಕ್ಕೆ ಅನುಕೂಲ ಕಲ್ಪಿಸಿರುವ ರೈಲುಗಾಡಿ.

    palace coup
    ನಾಮವಾಚಕ
    = palace revolution.

    palace revolution
    ನಾಮವಾಚಕ
    ಅರಮನೆ ಕ್ರಾಂತಿ; ಹಿರಿಯ ಅಧಿಕಾರಿಗಳಿಂದ ಸಾರ್ವಭೌಮ, ಸರ್ಕಾರ, ಮೊದಲಾದವುಗಳ ಪದಚ್ಯುತಿ, ಮುಖ್ಯವಾಗಿ ಅಹಿಂಸಾತ್ಮಕ ವಿಧಾನಗಳ ಮೂಲಕ ಅಧಿಕಾರದಿಂದ ತೆಗೆದುಹಾಕುವುದು, ಉರುಳಿಸುವುದು.


    logo