logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

painstakingness
ನಾಮವಾಚಕ
(ಕೆಲಸ ಕಾರ್ಯಗಳಲ್ಲಿ) ಎಚ್ಚರಿಕೆ; ಶ್ರದ್ಧೆ; ಶ್ರಮವಹಿಸುವಿಕೆ.

paint
ನಾಮವಾಚಕ
    1. (ಮೇಲ್ಮೈಗೆ ಬಣ್ಣ ಕೊಡಲು ಬಳಿಯುವ, ದ್ರವರೂಪದಲ್ಲಿರುವ) ಬಣ್ಣ; ವರ್ಣ.
    2. (ಹೀಗೆ ಬಳಿದ ಮೇಲೆ) ಒಣಗಿ ಗಟ್ಟಿಯಾದ ಬಣ್ಣ: the paint peeled off ಬಣ್ಣ ಹೆಕ್ಕಳಿಕೆಯಾಗಿ ಉದುರಿತು.
  • (ಹಾಸ್ಯ ಪ್ರಯೋಗ ಯಾ ಪ್ರಾಚೀನ ಪ್ರಯೋಗ) (ಮುಖ ಮೊದಲಾದವಕ್ಕೆ ಹಚ್ಚಿಕೊಳ್ಳುವ) ಪ್ರಸಾಧನ ಬಣ್ಣ; ವರ್ಣಲೇಪ; (ಮುಖ್ಯವಾಗಿ ಕೆನ್ನೆ, ತುಟಿ, ಮೊದಲಾದವುಗಳಿಗೆ) ಹಚ್ಚಿಕೊಳ್ಳುವ ಕುಸುಂಬೇ ಬಣ್ಣ, ಯಾ ಉಗುರಿಗೆ ಬಳಿಯುವ ವಾರ್ನಿಷ್‍.

  • paint
    ಸಕರ್ಮಕ ಕ್ರಿಯಾಪದ ಪದಗುಚ್ಛ
    1. (ಗೋಡೆ, ವಸ್ತು, ಮೊದಲಾದವುಗಳ ಮೇಲೆ) ಬಣ್ಣ – ಸವರು, ಹಚ್ಚು, ಹಾಕು, ಲೇಪಿಸು.
    2. (ಗೊತ್ತಾದ) ಬಣ್ಣ ಬಳಿ: paint the door green ಬಾಗಿಲಿಗೆ ಹಸುರು ಬಣ್ಣ ಬಳಿ.
  • (ವಸ್ತು, ದೃಶ್ಯ, ಮೊದಲಾದವನ್ನು) ಬಣ್ಣದಲ್ಲಿ ಚಿತ್ರಿಸು, ರೂಪಿಸು, ರಚಿಸು; ವರ್ಣಚಿತ್ರ ಬರೆ.
  • (ರೂಪಕವಾಗಿ) (ಯಾವುದಾದರೂ ಸಂದರ್ಭ ಮೊದಲಾದವನ್ನು ವರ್ಣಚಿತ್ರದಂತೆ) ಶಬ್ದಗಳಿಂದ ಚಿತ್ರಿಸು, ವರ್ಣಿಸು, ಬಣ್ಣಿಸು: not so black as he is painted ಬಣ್ಣಿಸಿದಷ್ಟೇನೂ ಅವನು ಕೆಟ್ಟವನಲ್ಲ. painted a gloomy picture of the future ಭವಿಷ್ಯದ ನಿರಾಶಾಜನಕ ಚಿತ್ರವನ್ನು ಬಣ್ಣಿಸಿದ.
  • (ಹಾಸ್ಯ ಪ್ರಯೋಗ ಯಾ ಪ್ರಾಚೀನ ಪ್ರಯೋಗ)
    1. (ಮುಖ, ಚರ್ಮ, ಮೊದಲಾದವುಗಳಿಗೆ) ಪ್ರಸಾಧನ ಸಾಮಗ್ರಿ, ಬಣ್ಣ – ಹಚ್ಚು, ಲೇಪಿಸು ಯಾ ಹಚ್ಚಿಕೊ, ಲೇಪಿಸಿಕೊ.
    2. (ದ್ರವವನ್ನು ಚರ್ಮ ಮೊದಲಾದವುಗಳಿಗೆ) ಲೇಪಿಸು, ಹಚ್ಚು.
  • (ಗೋಡೆ ಮೊದಲಾದವನ್ನು) ವರ್ಣಚಿತ್ರಗಳಿಂದ ಅಲಂಕರಿಸು.

  • paint shop
    ನಾಮವಾಚಕ
  • ಬಣ್ಣದಂಗಡಿ; ಬಣ್ಣಗಳನ್ನು ಮಾರುವ ಅಂಗಡಿ.
  • ಬಣ್ಣದ ವಿಭಾಗ; ವಸ್ತುಗಳಿಗೆ, ಮುಖ್ಯವಾಗಿ ತುಂತುರಿಸಿ, ಬಣ್ಣ ಹಾಕುವ ಕಾರ್ಖಾನೆಯ ಬಣ್ಣದ ವಿಭಾಗ.

  • paint-stick
    ನಾಮವಾಚಕ
    ಬಣ್ಣದ ಕಡ್ಡಿ; ವರ್ಣಶಲಾಕೆ; ಕ್ರೇಯಾನ್‍ನಂತೆ ಬಳಸುವ, ನೀರಿನಲ್ಲಿ ಕರಗುವ, ಬಣ್ಣದ ಕಡ್ಡಿ.

    paintable
    ಗುಣವಾಚಕ
  • ಬಣ್ಣ ಬಳಿಯಬಹುದಾದ, ಲೇಪಿಸಬಹುದಾದ.
  • ಬಣ್ಣದಿಂದ ಚಿತ್ರಿಸಬಹುದಾದ.

  • paintbox
    ನಾಮವಾಚಕ
    ಬಣ್ಣದ ಪೆಟ್ಟಿಗೆ, ಡಬ್ಬ; ವರ್ಣಸಂಪುಟ; ಚಿತ್ರಗಳಿಗೆ ಬಣ್ಣಬಳಿಯಲು ಬಳಸುವ ಗಟ್ಟಿ (ನಿರಾರ್ದ್ರ) ಪೇಂಟ್‍ ಇರುವ ಡಬ್ಬ.

    paintbrush
    ನಾಮವಾಚಕ
  • ಬಣ್ಣದ ಕುಂಚ, ಕೂರ್ಚ, ಬ್ರಷ್ಷು; ಗೋಡೆ ಮೊದಲಾದವುಗಳಿಗೆ ಬಣ್ಣ ಹಚ್ಚುವ, ಬಣ್ಣಕಾರನ ಬ್ರಷ್ಷು. Figure: Paintbrushes
  • ವರ್ಣಕುಂಚ; ವರ್ಣಚಿತ್ರಕಾರನ ಕುಂಚ.

  • painted lady
    ನಾಮವಾಚಕ
    ಬಣ್ಣದ ಚಿಟ್ಟೆ; ಸಿಂತಿಯ ಕಾರ್ಡ್ಯುಯಿ ಕುಲಕ್ಕೆ ಸೇರಿದ, ಕಪ್ಪು ಮತ್ತು ಬಿಳಿ ಚುಕ್ಕೆಗಳಿರುವ ಕಿತ್ತಳೆಕೆಂಪು ಬಣ್ಣದ ಚಿಟ್ಟೆ.

    painter
    ನಾಮವಾಚಕ
  • (ವರ್ಣ)ಚಿತ್ರಕಾರ; (ಚಿತ್ರ) ಕಲಾವಿದ ಯಾ ಅಲಂಕಾರಕ.
  • ಬಣ್ಣಗಾರ; ವರ್ಣಕಾರ; ವರ್ಣಲೇಪಕ; ಬಣ್ಣದವ; ಪೇಂಟರು; ಮರದ ಸಾಮಾನು ಮೊದಲಾದವುಗಳಿಗೆ ಬಣ್ಣಹಾಕುವವನು.


  • logo