logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

pagurian
ನಾಮವಾಚಕ
ಸಂನ್ಯಾಸಿ ಏಡಿ; ಅತಿಥಿ ನಳ್ಳಿ; ಚಿಪ್ಪಿಲ್ಲದ ತನ್ನ ಹಿಂಭಾಗದ ರಕ್ಷಣೆಗಾಗಿ ಬೇರೊಂದು ಚಿಪ್ಪುಜೀವಿ ಕಳಚಿದ ಚಿಪ್ಪಿನಲ್ಲಿ ಆಶ್ರಯ ಪಡೆಯುವ ನಳ್ಳಿ.

pah
ಭಾವಸೂಚಕ ಅವ್ಯಯ
ಛೀ! ಪಾ! (ತಿರಸ್ಕಾರ, ಅಸಹ್ಯ ಸೂಚಿಸುವ ಶಬ್ದ).

pahlavi
ನಾಮವಾಚಕ
ಪಹ್ಲವಿ; ಕ್ರಿಸ್ತಪೂರ್ವ 2ನೇ ಶತಮಾನದಿಂದ ಇಸ್ಲಾಂ ಸಂಸ್ಕೃತಿ ಉಗಮವಾಗುವ ಕ್ರಿಸ್ತಶಕ 7ನೇ ಶತಮಾನದವರೆಗಿನ ಪರ್ಷಿಯಾದ ಲೇಖನ ಪದ್ಧತಿ.

paid
ಕ್ರಿಯಾಪದ
1pay ಕ್ರಿಯಾಪದದ ಭೂತರೂಪ ಮತ್ತು ಭೂತಕೃದಂತ ರೂಪ.

pail
ನಾಮವಾಚಕ
  • ಬಕೀಟು; ಬಾನಿ; ಬಾಣಿ; ಹಾಲು ಮೊದಲಾದವನ್ನು ಕೊಂಡೊಯ್ಯಲು ಬಳಸುವ, ಮರದ ಯಾ ಲೋಹದ, ದುಂಡಾಗಿ ಬಗ್ಗಿಸಿದ ಕೊಳಗ, ಪಾತ್ರೆ.
  • ಬಕೀಟು, ಕೊಳಗ, ಬಾನಿ (ತುಂಬುವಷ್ಟು) – ಪ್ರಮಾಣ, ಮೊತ್ತ: half a pail of milk ಅರ್ಧ ಬಕೀಟು, ಬಾನಿ ಹಾಲು.

  • pailful
    ನಾಮವಾಚಕ
    = pail\((2)\).

    paillasse
    ನಾಮವಾಚಕ
    (ಸಾಮಾನ್ಯವಾಗಿ ತೆಳುವಾದ, ಒರಟಾದ) ಹುಲ್ಲುಹಾಸಿಗೆ; ತೃಣಶಯ್ಯೆ; (ಹುಲ್ಲು, ಜೊಂಡು, ಮೊದಲಾದವನ್ನು ತುಂಬಿಸಿದ) ಹಾಸಿಗೆ.

    paillette
    ನಾಮವಾಚಕ
  • ನಕ್ಕಿ; ಬಟ್ಟೆ, ಪಿಂಗಾಣಿ, ಮೊದಲಾದವುಗಳಲ್ಲಿ ಅಲಂಕಾರಕ್ಕಾಗಿ ಹಾಕುವ ಥಳಥಳಿಸುವ ವಸ್ತು.
  • ಎನ್ಯಾಮಲ್‍ ಪೇಂಟಿಂಗ್‍ನಲ್ಲಿ ಬಳಸುವ. ಉಜ್ಜ್ವಲವಾದ ಲೋಹದ ತುಂಡು.

  • pain
    ನಾಮವಾಚಕ ಪದಗುಚ್ಛ
  • (ರೋಗ ಯಾ ದೈಹಿಕ ಹಾನಿಯಿಂದಾದ ಮೈಯ) ನೋವು; ಯಾತನೆ; ಬಾಧೆ; ವೇದನೆ: suffering from stomach pains ಹೊಟ್ಟೆನೋವಿನಿಂದ ನರಳುತ್ತಿದ್ದಾನೆ.
  • (ಮನಸ್ಸಿನ) ಸಂಕಟ; ದುಃಖ; ಶೋಕ; ತಾಪ.
  • (ಬಹುವಚನದಲ್ಲಿ) ಪ್ರಯಾಸ; ಶ್ರಮ; ಪಟ್ಟ ಕಷ್ಟ: take pains ಶ್ರಮವಹಿಸು; ಪ್ರಯಾಸಪಡು. got nothing for my pains ನನ್ನ ಶ್ರಮಕ್ಕೆ ಏನೂ ಪ್ರತಿಫಲ ಸಿಗಲಿಲ್ಲ.
  • (ಆಡುಮಾತು) ಪೀಡೆ; ಅನಿಷ್ಟ; ತೊಂದರೆ ಕೊಡುವ ವ್ಯಕ್ತಿ ಯಾ ವಸ್ತು.
  • (ಬಹುವಚನದಲ್ಲಿ) ಹೆರಿಗೆ ಬೇನೆ; ಪ್ರಸವವೇದನೆ.
  • ಶಿಕ್ಷೆ; ದಂಡನೆ.

  • pain
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ನೋಯಿಸು; ನೋವುಕೊಡು; ಯಾತನೆಯುಂಟುಮಾಡು. ನೋವಾಗು; ನೋಯು: my arm is paining ನನ್ನ ತೋಳು ನೋಯುತ್ತಿದೆ.


    logo