logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

pagehood
ನಾಮವಾಚಕ
ಸೇವಕನ, ದೂತನ – ಕೆಲಸ; ಸೇವಕ – ಪದವಿ, ಹುದ್ದೆ.

pager
ನಾಮವಾಚಕ
ಪೇಜರ್‍; ಅದನ್ನು ಧರಿಸಿದ ವ್ಯಕ್ತಿಯ ಗಮನ ಸೆಳೆಯಲು ಬ್ಲೀಪ್‍ ಸದ್ದುಮಾಡಿ ಸಂದೇಶ, ಸೂಚನೆ ಕೊಡುವ ರೇಡಿಯೋ ಸಾಧನ, ಉಪಕರಣ.

pageship
ನಾಮವಾಚಕ
= pagehood.

paginal
ಗುಣವಾಚಕ
  • (ಪುಸ್ತಕಗಳು ಮೊದಲಾದವುಗಳ) ಪುಟಗಳ; ಪುಟಕ್ಕೆ ಸಂಬಂಧಿಸಿದ.
  • ಪುಟಕ್ಕೆ ಪುಟ: a paginal reprint of the original ಮೂಲವನ್ನು ಪುಟಕ್ಕೆ ಪುಟ ಹೋಲುವಂತೆ ಕೊಟ್ಟಿರುವ ಪುನರ್ಮುದ್ರಣ.

  • paginary
    ಗುಣವಾಚಕ
    = paginal.

    paginate
    ಸಕರ್ಮಕ ಕ್ರಿಯಾಪದ
    (ಪುಸ್ತಕ ಮೊದಲಾದವುಗಳಿಗೆ) ಪುಟಸಂಖ್ಯೆ ಕೊಡು; ಅನುಕ್ರಮವಾಗಿ ಪುಟಸಂಖ್ಯೆ ಹಾಕು.

    pagination
    ನಾಮವಾಚಕ
    ಪುಟಾಂಕನ; ಪೃಷ್ಠಾಂಕನ; ಪುಟಸಂಖ್ಯೆ – ಕೊಡುವುದು, ಹಾಕುವುದು, ಒದಗಿಸುವುದು.

    pagoda
    ನಾಮವಾಚಕ
  • ಪಗೋಡ; (ಇಂಡಿಯ, ಚೀನ, ಮೊದಲಾದ ದೇಶಗಳಲ್ಲಿನ) (ಮುಖ್ಯವಾಗಿ ಬಹುಅಂತಸ್ತಿನ ಗೋಪುರದಿಂದ ಕೂಡಿದ) ದೇವಸ್ಥಾನ ಯಾ ಪವಿತ್ರ ಭವನ. Figure: Pagoda-1
  • (ಅಲಂಕಾರಕ್ಕಾಗಿ ಮಾಡಿದ) ಗೋಪುರದಂಥ ಕಟ್ಟಡ.
  • (ದಕ್ಷಿಣ ಭಾರತದಲ್ಲಿ ಹಿಂದೆ ಬಳಕೆಯಲ್ಲಿದ್ದ) ಒಂದು ಚಿನ್ನದ ನಾಣ್ಯ.

  • pagoda-tree
    ನಾಮವಾಚಕ ಪದಗುಚ್ಛ
    shake the pagoda-tree (ಇಂಡಿಯದಲ್ಲಿ) ಕ್ಷಿಪ್ರವಾಗಿ, ಹೇರಳವಾಗಿ ಹಣ ಉದುರಿಸು, ಗಳಿಸು; ಬೇಗ ದುಡ್ಡುಮಾಡು.
  • ಪಗೋಡ ಮರ; ಸಹರ ಜಪಾನಿಕ ಕುಲಕ್ಕೆ ಸೇರಿದ, ಗೋಪುರವನ್ನು ಹೋಲುವ ಯಾವುದೇ ಮರ, ಮುಖ್ಯವಾಗಿ ಹಾಲುಸಂಪಿಗೆ ಮರ.
  • (ರೂಪಕವಾಗಿ) ಧನ ವೃಕ್ಷ; ದುಡ್ಡಿನ ಮರ; ನಾಣ್ಯವೃಕ್ಷ; ಚಿನ್ನದ ನಾಣ್ಯಗಳನ್ನು ಬಿಡುವುದೆಂಬ ಐತಿಹ್ಯವುಳ್ಳ, ಇಂಡಿಯದ ಮರ.

  • pagurian
    ಗುಣವಾಚಕ
    ಸಂನ್ಯಾಸಿ – ನಳ್ಳಿಯ, ಏಡಿಯ.


    logo