logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

pademelon
ನಾಮವಾಚಕ
ತಿಲೋಗಲೆ ಕುಲದ, (ಆಸ್ಟ್ರೇಲಿಯದ ಕಡಲತೀರದ ಕುರುಚಲು ಪ್ರದೇಶದಲ್ಲಿ ವಾಸಿಸುವ) ಸಣ್ಣ ಜಾತಿಯ ಕ್ಯಾಂಗರೂ.

Padishah
ನಾಮವಾಚಕ
ಬಾದಷಹ:
  • ಪರ್ಷಿಯಾದ ದೊರೆಯ ಬಿರುದು.
  • (ಚರಿತ್ರೆ) (ಹಿಂದೆ ಯೂರೋಪಿನಲ್ಲಿ) ತುರ್ಕಿ ಸುಲ್ತಾನನ ಬಿರುದು.
  • (Padishah) (ಅಮೆರಿಕನ್‍ ಪ್ರಯೋಗ, ಆಡುಮಾತು) ಪ್ರಮುಖ ಯಾ ಪ್ರಭಾವಿ ವ್ಯಕ್ತಿ.

  • padlock
    ನಾಮವಾಚಕ ಪದಗುಚ್ಛ
    ಜೋಲುಬೀಗ; ಚಿಲಕಕ್ಕೆ ತಗುಲಿಸುವ, ಕೆಳಕ್ಕೆ ನೇತಾಡುವ ಹೊರ ಬೀಗ. padlock law ಬೀಗಮುದ್ರೆ ಕಾನೂನು; (ಒಂದು ಆವರಣ, ಕಟ್ಟಡ, ಮೊದಲಾದವನ್ನು) ಮುಚ್ಚಿ ಬೀಗಮುದ್ರೆ ಹಾಕುವ ಅಧಿಕಾರ ನೀಡುವ ಕಾನೂನು.

    padlock
    ಸಕರ್ಮಕ ಕ್ರಿಯಾಪದ
  • ಜೋಲು ಬೀಗ ಜಡಿ, ಹಾಕು.
  • (ಕಟ್ಟಡ ಮೊದಲಾದವಕ್ಕೆ) ಬೀಗಮುದ್ರೆ ಹಾಕು.

  • padouk
    ನಾಮವಾಚಕ
    ಪಡೂಕ್‍:
  • ಮಹಾಗನಿ ದಾರುವಿನಂಥ ನಾಟ ಕೊಡುವ, ಮುಖ್ಯವಾಗಿ ಟೆರಕಾರ್ಪಸ್‍ ಇಂಡಿಕಸ್‍ ಕುಲಕ್ಕೆ ಸೇರಿದ, ಬರ್ಮಾ ದೇಶದ ಒಂದು ಮರ.
  • ಆ ಮರದ ದಾರು, ನಾಟ.

  • padre
    ನಾಮವಾಚಕ
    (ಆಡುಮಾತು) (ಸೈನ್ಯ ಮೊದಲಾದವುಗಳಲ್ಲಿನ) ಪಾದ್ರಿ.

    padrone
    ನಾಮವಾಚಕ
  • (ಮೆಡಿಟರೇನಿಯನ್‍ ಸಮುದ್ರದಲ್ಲಿ ಸಂಚರಿಸುವ) ವ್ಯಾಪಾರ ನೌಕೆಯ ಮುಖ್ಯಸ್ಥ, ಯಜಮಾನ, ಒಡೆಯ, ಧಣಿ.
  • (ಇಟಲಿಯಲ್ಲಿ ಬೀದಿಯ ಸಂಗೀತಗಾರರು, ಭಿಕ್ಷುಕ ಮಕ್ಕಳು, ಮೊದಲಾದವರಿಗೆ) ಉದ್ಯೋಗ ಒದಗಿಸುವ – ಧಣಿ, ಯಜಮಾನ.
  • (ಇಟಲಿಯಲ್ಲಿ) ತಂಗುದಾಣದ – ಮಾಲೀಕ, ಒಡೆಯ.

  • padsaw
    ನಾಮವಾಚಕ
    ವಕ್ರಾಕೃತಿಗಳನ್ನು ಕತ್ತರಿಸಲು ಬಳಸುವ, ಒಂದು ಬಗೆಯ ಚಿಕ್ಕ ಗರಗಸ, ಕೈಗರಗಸ.

    paduasoy
    ನಾಮವಾಚಕ
    ಪ್ಯಾಡ್ಯುಅಸಾಯ್‍ ರೇಷ್ಮೆ ಬಟ್ಟೆ; (ಹದಿನೆಂಟನೆಯ ಶತಮಾನದಲ್ಲಿ ಜನರು ಬಹಳವಾಗಿ ಧರಿಸುತ್ತಿದ್ದ) ಹುರಿನೂಲಿನ ರೇಷ್ಮೆ ಬಟ್ಟೆ.

    paean
    ನಾಮವಾಚಕ
  • ಪ್ರಶಂಸಾಗೀತೆ; ಸ್ತೋತ್ರಗೀತೆ.
  • ಜಯಗಾನ; ವಿಜಯಗೀತೆ.
  • (ಹಿಂದೆ) ಗ್ರೀಕರು ತಮ್ಮ ಕಷ್ಟ ವಿಮೋಚನೆಯ ಯಾ ವಿಜಯದ ಕಾಲದಲ್ಲಿ ಅಪಾಲೋ ದೇವತೆಗೆ ಮಾಡುತ್ತಿದ್ದ ಸ್ತೋತ್ರ ಯಾ ಸ್ತುತಿ.


  • logo