logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

paddle-wheel
ನಾಮವಾಚಕ
ಹುಟ್ಟುಗಾಲಿ; ನೀರನ್ನು ಹಿಂದಕ್ಕೆ ತಳ್ಳುವಂತೆ ಅಂಚಿನ ಸುತ್ತ ಹಲಗೆಗಳನ್ನು ಅಳವಡಿಸಿರುವ, ಹಡಗು ನಡೆಸುವ ಗಾಲಿ, ಚಕ್ರ.

paddler
ನಾಮವಾಚಕ
ಆಳವಿಲ್ಲದ ನೀರಿನಲ್ಲಿ ನಡೆಯುವವನು, ಕೈ ಯಾ ಕಾಲುಗಳನ್ನು ಆಡಿಸುವವನು.

paddler
ನಾಮವಾಚಕ
  • ಹುಟ್ಟುಹಾಕಿ ದೋಣಿ ನಡೆಸುವವ.
  • = paddle-steamer.

  • paddock
    ನಾಮವಾಚಕ
  • (ಬೇಲಿಯುಳ್ಳ) ಕುದುರೆಮಾಳ; ಕುದುರೆ ಸಾಕುವ ಕ್ಷೇತ್ರದ ಭಾಗವಾಗಿ ಯಾ ಲಾಯಕ್ಕೆ ಸೇರಿದಂತಿರುವ, ಬೇಲಿಹಾಕಿದ ಸಣ್ಣ ಹುಲ್ಲುಗಾವಲು.
  • (ಕುದುರೆ ಪಂದ್ಯ ಯಾ ಮೋಟಾರು ಪಂದ್ಯಗಳ ಮೈದಾನದ ಬಳಿ, ಪಂದ್ಯಕ್ಕೆ ಮೊದಲು ಕಾರುಗಳನ್ನು ಯಾ ಕುದುರೆಗಳನ್ನು ತಂದು ಸೇರಿಸುವ) ಬೇಲಿ ಹಾಕಿದ ಹುಲ್ಲಿನ ಆವರಣ.
  • (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) ಜಮೀನು; ಹೊಲ.

  • paddock
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ ಯಾ ಪ್ರಾಂತೀಯ ಪ್ರಯೋಗ) ಕಪ್ಪೆ; ದೊಡ್ಡ ನೆಲಗಪ್ಪೆ.

    Paddy
    ನಾಮವಾಚಕ
    (ಆಡುಮಾತು) (ಕೆಲವೊಮ್ಮೆ ಅವಮಾನಕರವಾಗಿ) ಐರ್ಲೆಂಡಿನವನು (ಐರ್ಲೆಂಡಿನವನ ಅಡ್ಡ ಹೆಸರು).

    paddy
    ನಾಮವಾಚಕ
  • ಬತ್ತದ ಗದ್ದೆ.
  • ಬತ್ತ; ನೆಲ್ಲು.

  • paddy
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಸಿಟ್ಟು; ರೇಗು; ಕೆರಳು; ಕೋಪೋದ್ರೇಕ; ರೋಷಾವೇಶ.

    paddy-field
    ನಾಮವಾಚಕ
    = 1paddy\(1)\).

    paddywhack
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಆಡುಮಾತು) = 2paddy.


    logo