logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oakling
ನಾಮವಾಚಕ
ಓಕ್‍ ಸಸಿ.

oakum
ನಾಮವಾಚಕ ಪದಗುಚ್ಛ
ಸೆಣಬಿನ ನಾರು, ಎಳೆ; ಹಳೆಯ (ಸೆಣಬಿನ) ಹಗ್ಗವನ್ನು ಹುರಿ ಬಿಚ್ಚಿ ತೆಗೆದ, (ಮುಖ್ಯವಾಗಿ ಹಡಗಿನಲ್ಲಿರುವ ಸಂದುಗಳನ್ನು ಮುಚ್ಚಲು ಬಳಸುವ) ಬಿಡಿ ಎಳೆ, ನಾರು. pick oakum ಸೆಣಬಿನ ಹಗ್ಗದ ಎಳೆ ಬಿಚ್ಚು, ನಾರು ಬಿಡಿಸು (ಮುಖ್ಯವಾಗಿ ಹಿಂದೆ ಕೈದಿಗಳಿಗೂ, ನಿರ್ಗತಿಕರಿಗೂ ವಿಧಿಸುತ್ತಿದ್ದ ಕೆಲಸ).

OAP
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) old-age pensioner.

oar
ನಾಮವಾಚಕ ಪದಗುಚ್ಛ
  • (ದೋಣಿ ನಡೆಸುವ) ಹುಟ್ಟು; ತೊಳೆ; ಜಲ್ಲು; ಜಲ್ಲೆ.
  • ಅಂಬಿಗ; ಹುಟ್ಟುಗಾರ; ಹುಟ್ಟುಹಾಕುವವನು; ತೊಳೆ ಒಚ್ಚುವವನು; ಜಲ್ಲು ಹಾಕುವವನು.
  • (ರೂಪಕವಾಗಿ)
    1. ರೆಕ್ಕೆ.
    2. ಈಜು ರೆಕ್ಕೆ.
    3. (ಈಜುವಾಗ ಬೀಸುವ) ತೋಳು ಇತ್ಯಾದಿ.

  • oar
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    (ಹುಟ್ಟು ಹಾಕಿ, ಜಲ್ಲು ಒಚ್ಚಿ) ದೋಣಿ ನಡೆಸು. ಹುಟ್ಟುಹಾಕು; ತೊಳೆ ಒಚ್ಚು; ಜಲ್ಲು ಹಾಕು (ಕಾವ್ಯಪ್ರಯೋಗ).
  • oar air (ಹುಟ್ಟುಹೊಡೆದಂತೆ) ಗಾಳಿಯನ್ನು ಸೀಳಿಕೊಂಡು ಹೋಗು.
  • oar one’s arms(or hand) (ಹುಟ್ಟು ಹಾಕುವಂತೆ) ತೋಳುಗಳನ್ನು ಯಾ ಕೈಗಳನ್ನು ಬೀಸಿಕೊಂಡು ಹೋಗು.
  • oar one’s way (ಹುಟ್ಟು ಹಾಕಿದಂತೆ, ಕೈಬೀಸಿ) ದಾರಿ ಮಾಡಿಕೊಂಡು ಹೋಗು.
  • oar water
    1. ಹುಟ್ಟುಹಾಕಿ ನೀರನ್ನು ಸೀಳಿಕೊಂಡು ಹೋಗು.
    2. ಹುಟ್ಟುಹಾಕುವಂತೆ (ಕೈಕಾಲು ಹೊಡೆಯುವುದರಿಂದ ಯಾ ಬೀಸುವುದರಿಂದ) ನೀರನ್ನು ಸೀಳಿಕೊಂಡು ಹೋಗು.

  • oarage
    ನಾಮವಾಚಕ
    (ಕಾವ್ಯಪ್ರಯೋಗ)
  • ಹುಟ್ಟಿನಿಂದ, ತೊಳೆಯಿಂದ ಆಗುವ ಕೆಲಸ; ಹುಟ್ಟು ಯಾ ತೊಳೆ ಮಾಡುವ ಕೆಲಸ.
  • ಹುಟ್ಟುಹಾಕುವುದು; ತೊಳೆ ಒಚ್ಚುವುದು; ಜಲ್ಲೆ–ಹಾಕುವುದು, ಬೀಸುವುದು.
  • ಕೈಕಾಲುಗಳನ್ನು ಹುಟ್ಟಿನಂತೆ ಹೊಡೆಯುವುದು, ಬೀಸುವುದು.
  • ದೋಣಿ ನಡೆಸುವ ಸಾಧನ ಸಲಕರಣೆಗಳು.
  • ಹುಟ್ಟುಗಳಂಥಹ ಸಾಧನ ಸಲಕರಣೆಗಳು.

  • oared
    ಗುಣವಾಚಕ
  • ಹುಟ್ಟುಗಳಿಂದ ಸಜ್ಜಿತವಾದ.
  • (ಸಂಯುಕ್ತಪದಗಳಲ್ಲಿ) ಹುಟ್ಟುಗಳ; ಹುಟ್ಟುಗಳುಳ್ಳ: four-oared ನಾಲ್ಕು ಹುಟ್ಟುಗಳ.

  • oarfish
    ನಾಮವಾಚಕ
    = ribbonfish.

    oarless
    ಗುಣವಾಚಕ
    ಹುಟ್ಟುಗಳಿಲ್ಲದ; ಜಲ್ಲುಗಳಿಲ್ಲದ; ತೊಳೆಗಳಿಲ್ಲದ.

    oarlock
    ನಾಮವಾಚಕ
    (ಅಮೆರಿಕನ್‍ ಪ್ರಯೋಗ)= rowlock.


    logo