logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oafishness
ನಾಮವಾಚಕ
ದಡ್ಡತನ; ಮುಟ್ಠಾಳತನ.

oak
ನಾಮವಾಚಕ ಪದಗುಚ್ಛ
  • ಓಕ್‍ ಮರ ಯಾ ಪೊದೆ; ಕ್ವೆರ್ಕಸ್‍ ಕುಲಕ್ಕೆ ಸೇರಿದ, ಹಾಲೆಗಳಂಥ ಎಲೆಗಳುಳ್ಳ, ಹಣ್ಣು ಬಿಡುವ ಒಂದು ಮರ ಯಾ ಪೊದೆ.
  • ಓಕ್‍ (ಮರದ) ದಾರು; ಮುಖ್ಯವಾಗಿ ಪೀಠೋಪಕರಣ ಮತ್ತು ಕಟ್ಟಡಗಳಲ್ಲಿ ಬಳಸುವ ಗಟ್ಟಿಯಾದ, ಬೆಲೆಬಾಳುವ ಈ ಮರದ ದಾರು.
  • (ಬ್ರಿಟಿಷ್‍ ಪ್ರಯೋಗ) (ವಿಶ್ವವಿದ್ಯಾನಿಲಯಗಳ ಕಾಲೇಜುಕೊಠಡಿಗಳ) ಹೊರಬಾಗಿಲು: sport one’s oak ಭೇಟಿಗಾರರನ್ನು ನಿಷೇಧಿಸಲು ಹೊರಬಾಗಿಲು ಹಾಕು, ಮುಚ್ಚು.
  • (the Oaks) (ಏಕವಚನವಾಗಿ ಬಳಕೆ) ಓಕ್‍ (ಪಂದ್ಯ); ಇಂಗ್ಲೆಂಡಿನ ಎಪ್ಸಮ್‍ ನಗರದಲ್ಲಿ ನಡೆಯುವ ಮೂರು ವರ್ಷ ವಯಸ್ಸಿನ ಹೆಣ್ಣುಕುದುರೆ ಮರಿಗಳ ಜೂಜು.
  • ಓಕ್‍ (ಮರದ) ಎಲೆಗಳು: oak is still worn on 29th May ಮೇ 29ರಂದು ಈಗಲೂ ಓಕ್‍ ಎಲೆಗಳನ್ನು ಧರಿಸಲಾಗುತ್ತದೆ.
  • ಓಕ್‍ ಬಣ್ಣ; ಓಕ್‍ ಮರದ ಎಳೆಯೆಲೆಗಳ ಬಣ್ಣ.

  • oak
    ಗುಣವಾಚಕ
    ಓಕಿನ; ಓಕ್‍ ಮರದ; ಓಕ್‍ ಮರದಿಂದ ಮಾಡಿದ, ತಯಾರಿಸಿದ: oak table ಓಕ್‍ (ಮರದ) ಮೇಜು.

    oak-apple
    ನಾಮವಾಚಕ ಪದಗುಚ್ಛ
    ಓಕ್‍ ಸೇಬು; ಓಕ್‍ ಮರಗಳಲ್ಲಿ ಕೆಲವು ಬಗೆಯ ಕಣಜದ ಹುಳುಗಳ ಮರಿಗಳಿಂದ ಉಂಟಾಗುವ, ಸೇಬಿನಂಥ ಗಂಟು. oak-apple day ಮೇ 29ನೆಯ ದಿನಾಂಕ; 1660ರಲ್ಲಿ ಇಂಗ್ಲೆಂಡಿನಲ್ಲಿ ರಾಜಪ್ರಭುತ್ವವು ಪುನಃ ಸ್ಥಾಪಿತವಾದಾಗ ಎರಡನೆಯ ಚಾರ್ಲ್ಸ್‍ ದೊರೆತನಕ್ಕೆ ಬಂದ ದಿನ (ಅಂದು ಇಂಗ್ಲೆಂಡಿನ ಹಳ್ಳಿಗರು ರಾಯಲ್‍ ಓಕ್‍ನ ಸ್ಮಾರಕವಾಗಿ ಓಕ್‍ ಸೇಬನ್ನು ಅಲಂಕಾರವಾಗಿ ಧರಿಸುತ್ತಾರೆ).

    oak-fern
    ನಾಮವಾಚಕ
    ಓಕ್‍ ಜರಿ (ಗಿಡ); ಆಲ್ಪ್ಸ್‍ ಪರ್ವತ ಪ್ರದೇಶದಲ್ಲಿ ಬೆಳೆಯುವ ಪಾಲಿ ಪೋಡಿಯೇಸೀ ವಂಶದ ಒಂದು ಜರೀಗಿಡ.

    oak-gall
    ನಾಮವಾಚಕ
    = oak-apple.

    oak-tree
    ನಾಮವಾಚಕ
    ಓಕ್‍ ಮರ, ವೃಕ್ಷ.

    oak-wood
    ನಾಮವಾಚಕ
  • ಓಕ್‍ (ಮರಗಳ) ಕಾಡು, ವನ.
  • ಓಕ್‍–ದಾರು, ಮೋಪು, ನಾಟ.

  • oaken
    ಗುಣವಾಚಕ
    = 2oak.

    oaklet
    ನಾಮವಾಚಕ
    ಸಣ್ಣ ಓಕ್‍ ಮರ.


    logo