logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oblivious
ಗುಣವಾಚಕ
  • ಮರವೆಯ; ಮರೆತುಹೋಗುವ; ಮರೆತುಬಿಡುವ; ವಿಸ್ಮೃತಿಶೀಲ; ಮರೆಯುವ ಸ್ವಭಾವದ.
  • ಗಮನಕೊಡದ; ಉಪೇಕ್ಷಿತ; ಗಮನಿಸದ.
  • ಅರಿವಿಲ್ಲದ; ಆಜ್ಞಾನದಿಂದ ಕೂಡಿದ.

  • obliviously
    ಕ್ರಿಯಾವಿಶೇಷಣ
  • ಮರೆತು; ಮರೆತುಬಿಟ್ಟು; ಮರೆತುಹೋಗಿ; ಮರೆಯುವ ಸ್ವಭಾವದಿಂದ ಕೂಡಿ.
  • ಗಮನಿಸದೆ; ಉಪೇಕ್ಷೆಯಿಂದ.
  • ಗೊತ್ತಿಲ್ಲದಂತೆ; ಅರಿವಿಲ್ಲದಂತೆ; ಅಜ್ಞಾನದಿಂದ.

  • obliviousness
    ನಾಮವಾಚಕ
    ವಿಸ್ಮರಣತೆ; ವಿಸ್ಮೃತಿ; ಮರೆತುಬಿಡುವ–ಪ್ರವೃತ್ತಿ, ಸ್ವಭಾವ; ಮರವೆಯ ಸ್ಥಿತಿ.

    oblong
    ಗುಣವಾಚಕ
  • (ಜ್ಯಾಮಿತಿ) ಆಯತ; ಆಯಾತಾಕಾರದ; ದೀರ್ಘಚತುರಸ್ರವಾಗಿರುವ; ಚತುರಸ್ರ ಯಾ ವರ್ತುಲವಾಗಿರದೆ ಅಡ್ಡ ದಿಕ್ಕಿಗಿಂತಲೂ ಅದರ ಲಂಬ ದಿಕ್ಕಿನಲ್ಲಿ ಹೆಚ್ಚು ಉದ್ದವಾಗಿರುವ.
  • ಅಗಲಕ್ಕಿಂತ ಎತ್ತರ ಹೆಚ್ಚಾಗಿರುವ.
  • (ಗೋಳಾಭದ ವಿಷಯದಲ್ಲಿ) = prolate(1).

  • oblong
    ನಾಮವಾಚಕ
  • ಆಯತ ರೂಪ ಯಾ ವಸ್ತು; ಆಯಾಕಾರದ ಯಾ ದೀರ್ಘ ಚತುರಸ್ರದ–ಆಕೃತಿ ಯಾ ವಸ್ತು.
  • ಎತ್ತರಕ್ಕಿಂತ ಅಗಲ ಹೆಚ್ಚಾಗಿರುವ ಆಕೃತಿ ಯಾ ವಸ್ತು.

  • obloquy
    ನಾಮವಾಚಕ
  • ಬೈಗುಳ; ತೆಗಳಿಕೆ; ನಿಂದೆ.
  • ದೂಷಣೆ; ಭರ್ತ್ಸನೆ; ಅವಮರ್ಯಾದೆ.
  • ಅಪಕೀರ್ತಿ; ಅಪಖ್ಯಾತಿ; ಅಪಪ್ರಥೆ; ಕೆಟ್ಟ ಹೆಸರು ಪಡೆದಿರುವುದು; ದೂಷಣೆಗೊಳಗಾಗಿರುವಿಕೆ.

  • obmutescence
    ನಾಮವಾಚಕ
    (ಪ್ರಾಚೀನ ಪ್ರಯೋಗ) ಹಠಮಾರಿ ಮೌನ; ಮೊಂಡು(ತನದ) ಮೌನ; ಮೊಂಡು ಮೂಕಭಾವ.

    obmutescent
    ಗುಣವಾಚಕ
    (ಪ್ರಾಚೀನ ಪ್ರಯೋಗ) ಹಠಮಾರಿ ಮೌನದ; ಮೊಂಡುತನದಿಂದ ಬಾಯ್ಬಿಡದ; ಮೊಂಡು ಮೂಕತನದ.

    obnoxious
    ಗುಣವಾಚಕ
  • ಹೇಸಿಕೆ ಹುಟ್ಟಿಸುವ; ಹೇವರಿಕೆ ಬರಿಸುವ; ಜುಗುಪ್ಸೆ, ಜಿಹಾಸೆ ಹುಟ್ಟಿಸುವ; ಅಸಹ್ಯವಾದ.
  • (ವಿರಳ ಪ್ರಯೋಗ) ಹಾನಿಗೆ, ಕೇಡಿಗೆ ಯಾ ಆಘಾತಕ್ಕೆ–ಈಡಾಗುವ.

  • obnoxiously
    ಕ್ರಿಯಾವಿಶೇಷಣ
    ಹೇಸಿಕೆ ಹುಟ್ಟಿಸುವಂತೆ; ಹೇವರಿಕೆ ತರುವಂತೆ; ಜುಗುಪ್ಸೆ, ಜಿಹಾಸೆ–ಹುಟ್ಟಿಸುವ ರೀತಿಯಲ್ಲಿ


    logo