logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oblige
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
(ಆಡುಮಾತು) (ಹಾಡು ಮೊದಲಾದವುಗಳಿಂದ, ನಿರ್ದಿಷ್ಟ ನೆರವಿನಿಂದ, ಮನರಂಜನೆಯಿಂದ) ಸಹಾಯ ಮಾಡು: Divya obliged with a song ದಿವ್ಯಾಳು ಒಂದು ಹಾಡು ಹಾಡಿ ಸಹಾಯ ಮಾಡಿದಳು. much obliged ವಂದನೆಗಳು; ಕೃತಜ್ಞನಾಗಿದ್ದೇನೆ.
  • (ಹೇಳಿದಂತೆ ಮಾಡಲು) ಬಲಾತ್ಕರಿಸು; ನಿರ್ಭಂಧಪಡಿಸು; ಒತ್ತಾಯಪಡಿಸು.
  • ಕಟ್ಟುಬೀಳಿಸುವಂತಿರು; ಕಟ್ಟಿಹಾಕುವಂತಿರು; ನಿರ್ಬಂಧಕವಾಗಿರು.
  • (ಉಪಕಾರ, ಸಹಾಯ ಮಾಡಿ) ಋಣಿಯನ್ನಾಗಿಸು; (ಉಪಕಾರದ) ಹೊರೆ ಹೊರಿಸು.
  • ಸಂತೋಷಪಡಿಸು; ತೃಪ್ತಿಪಡಿಸು; ಉಪಕಾರಮಾಡು; ಅನುಗ್ರಹಿಸು; ಉಪಕರಿಸು: oblige me by leaving (ಹೋಗು ಎನ್ನುವುದಕ್ಕೆ ಸೌಮ್ಯೋಕ್ತಿಯಾಗಿ) ಹೋಗುವ (ಮೂಲಕ) ಉಪಕಾರ ಮಾಡು.
  • (ಅನೇಕ ವೇಳೆ ಅಕರ್ಮಕವಾಗಿ ಪ್ರಯೋಗ) ಸಹಾಯ, ಉಪಕಾರ–ಮಾಡು: will you oblige ನನಗೆ ಸಹಾಯ ಮಾಡುತ್ತೀಯಾ?
  • (ಕರ್ಮಣಿ ಪ್ರಯೋಗದಲ್ಲಿ) ಋಣಿಯಾಗು; ಕೃತಜ್ಞನಾಗಿರು: am obliged to you for your help ನಿನ್ನ ಸಹಾಯಕ್ಕಾಗಿ ಋಣಿಯಾಗಿದ್ದೇನೆ.
  • (ಪ್ರಾಚೀನ ಪ್ರಯೋಗ ಯಾ ನ್ಯಾಯಶಾಸ್ತ್ರ) (ಆಣೆ, ಪ್ರಮಾಣ, ಕರಾರು, ಮೊದಲಾದವುಗಳಿಂದ ಒಬ್ಬನನ್ನು ಯಾ ಒಂದು ಕೆಲಸ ಮಾಡಲು) ಕಟ್ಟು ಬೀಳಿಸು; ನಿರ್ಬಂಧಕ್ಕೆ ಒಳಗಾಗಿಸು.
  • (ಆಡುಮಾತು) ವಿನೋದ ಕೂಟಕ್ಕೆ (ಹಾಡು ಮೊದಲಾದ) ಕೊಡುಗೆ ಕೊಡು.

  • obligee
    ನಾಮವಾಚಕ
  • (ನ್ಯಾಯಶಾಸ್ತ್ರ) ಕರಾರುದಾರ; ಕರಾರು ಬರೆಸಿಕೊಂಡವನು ಯಾ ಕಾನೂನು ಮೇರೆಗೆ ತನಗೆ ಬದ್ಧನಾಗಿರುವ ವ್ಯಕ್ತಿಯನ್ನು ಪಡೆದಿರುವವನು.
  • (ವಿರಳ ಪ್ರಯೋಗ) ಉಪಕೃತ; ಋಣಿ; ಉಪಕಾರ ಪಡೆದಿರುವವನು; ಹಂಗು ಹೊತ್ತವನು.

  • obliger
    ನಾಮವಾಚಕ
  • ಕರಾರುಗಾರ; ಕರಾರು ಹಾಕುವವನು, ವಿಧಿಸುವವನು.
  • ಉಪಕಾರಿ; ಉಪಕಾರ ಮಾಡುವವನು; ಉಪಕಾರದ ಹೊರೆ ಹೊರಿಸುವವನು.

  • obliging
    ಗುಣವಾಚಕ
    ದಾಕ್ಷಿಣ್ಯಪರ; ಉಪಕಾರಶೀಲ; ಅನುಗ್ರಾಹಕ.

    obligingly
    ಕ್ರಿಯಾವಿಶೇಷಣ
    ದಾಕ್ಷಿಣ್ಯಪರನಾಗಿ; ಉಪಕಾರಶೀಲನಾಗಿ; ಅನುಗ್ರಹ ಬುದ್ಧಿಯಿಂದ; ಅನುಗ್ರಹ ಪ್ರವೃತ್ತಿಯಿಂದ.

    obligingness
    ನಾಮವಾಚಕ
    ದಾಕ್ಷಿಣ್ಯಪರತೆ; ಉಪಕಾರಶೀಲತೆ; ಅನುಗ್ರಹ–ಬುದ್ಧಿ, ಪ್ರವೃತ್ತಿ.

    obligor
    ನಾಮವಾಚಕ
    (ನ್ಯಾಯಶಾಸ್ತ್ರ) ಕರಾರುಗಾರ; ಕರಾರುಬದ್ಧ; ಒಬ್ಬನಿಗೆ ಕರಾರಿನಿಂದ, ಪತ್ರ ಬರೆದುಕೊಟ್ಟು ಯಾ ಇತರ ಕಾನೂನುಕ್ರಮದ ಪ್ರಕಾರ ಕಟ್ಟುಬಿದ್ದವನು.

    oblique
    ಗುಣವಾಚಕ ಪದಗುಚ್ಛ
  • ಓರೆಯಾದ; ಬಾಗಿದ; ಪ್ರವಣ:
    1. ಮೇಲಿನ ದಿಕ್ಕಿನಿಂದ ಯಾ ಸಮತಲದಿಂದ ಬಾಗಿದ .
    2. ನೇರವಾದ ಗೆರೆಯಿಂದ ಯಾ ಹಾದಿಯಿಂದ ಬೇರೆಯಾದ ದಿಕ್ಕು ಹಿಡಿದ.
  • ಸುತ್ತು ಬಳಸಿನ; ಪರೋಕ್ಷ ವಿಧಾನದ; ಸುತ್ತಿಬಳಸಿ ಬರುವ; ನೇರವಾಗಿ ವಿಷಯಕ್ಕೆ ಹೋಗದ.
  • (ಜ್ಯಾಮಿತಿ) ವಾಲಿದ; ಬಾಗಿದ; ಓರೆಯಾದ; ತಿರ್ಯಕ್‍:
    1. (ರೇಖೆ, ಸಮತಲ, ಮೊದಲಾದವುಗಳ ವಿಷಯದಲ್ಲಿ) ಸಮಕೋನದಲ್ಲಿಲ್ಲದ.
    2. (ಕೋನದ ವಿಷಯದಲ್ಲಿ) ಓರೆ(ಯಾದ); ಲಘು ಯಾ ವಿಶಾಲಕೋನದ.
    3. (ಶಂಕು, ಉರುಳೆ, ಮೊದಲಾದವುಗಳ ವಿಷಯದಲ್ಲಿ) ಆಧಾರತಲಕ್ಕೆ ಲಂಬವಾಗಿಲ್ಲದ ಅಕ್ಷವುಳ್ಳ.
  • ವಾಲಿದ; ಬಾಗಿದ; ತಿರ್ಯಕ್‍:
    1. (ಅಂಗರಚನಾಶಾಸ್ತ್ರ) ದೇಹದ ಯಾ ಕೈಕಾಲುಗಳ ಅಕ್ಷಕ್ಕೆ ಸಮಾಂತರವಾಗಿಯಾಗಲಿ ಲಂಬವಾಗಿಯಾಗಲಿ ಇಲ್ಲದಿರುವ.
    2. (ಸಸ್ಯವಿಜ್ಞಾನ) (ಎಲೆಯ ವಿಷಯದಲ್ಲಿ) ಎರಡು ಪಕ್ಕಗಳೂ ಸಮವಾಗಿಲ್ಲದಿರುವ.
  • (ವ್ಯಾಕರಣ) ಪ್ರಥಮಾ ಸಂಬೋಧನ ಭಿನ್ನ ವಿಭಕ್ತಿಯ; ಪ್ರಥಮಾ, ಸಂಬೋಧನ ವಿಭಕ್ತಿಗಳನ್ನು ಬಿಟ್ಟು ಉಳಿದ ವಿಭಕ್ತಿಗಳನ್ನು ಸೂಚಿಸುವ, ತೋರಿಸುವ.

  • oblique
    ನಾಮವಾಚಕ
  • ಓರೆಗೆರೆ $(/)$.
  • ಓರೆ(ಯಾದ) ಸ್ನಾಯು.

  • oblique
    ಅಕರ್ಮಕ ಕ್ರಿಯಾಪದ
    (ಮುಖ್ಯವಾಗಿ ಸೈನ್ಯದ ವಿಷಯದಲ್ಲಿ) (ನೇರವಾದ ಹಾದಿ ಬಿಟ್ಟು) ಓರೆಯಾದ ಯಾ ಬಳಸು ಹಾದಿಯಲ್ಲಿ ಮುಂದುವರಿ, ಸಾಗು.


    logo