logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oblation
ನಾಮವಾಚಕ
  • (ದೇವರಿಗೆ ಸಮರ್ಪಿಸಿದ) ನೈವೇದ್ಯ; ಬಲಿ; ಆಹುತಿ.
  • ಬ್ರೆಡ್‍ ಮತ್ತು ವೈನ್‍ ನೈವೇದ್ಯ (ಸಮರ್ಪಣೆ); ಪ್ರಭುಬೋಜನ ಸಂಸ್ಕಾರದಲ್ಲಿ ದೇವರಿಗೆ ಬ್ರೆಡ್‍ ಮತ್ತು ವೈನುಗಳನ್ನು ಸಮರ್ಪಿಸುವುದು.
  • (ಕ್ರೈಸ್ತ) ಪ್ರಭುಬೋಜನ ಸಂಸ್ಕಾರ.
  • (ಧರ್ಮಕಾರ್ಯಗಳಿಗಾಗಿ ನೀಡಿದ) ದಾನ; ದತ್ತಿ; ಉಂಬಳಿ.

  • oblational
    ಗುಣವಾಚಕ
  • (ದೇವರಿಗೆ ಅರ್ಪಿಸಿದ) ನೈವೇದ್ಯದ; ಬಲಿಯ; ಆಹುತಿಯ.
  • (ಕ್ರೈಸ್ತ) ಪ್ರಭುಬೋಜನ ಸಂಸ್ಕಾರದಲ್ಲಿ ಅರ್ಪಿಸಿದ ಬ್ರೆಡ್ಡು ಮತ್ತು ವೈನಿನ.
  • (ಕ್ರೈಸ್ತ) ಪ್ರಭುಭೋಜನ ಸಂಸ್ಕಾರದ.
  • (ಧರ್ಮಕಾರ್ಯಗಳಿಗಾಗಿ ನೀಡಿದ) ದಾನದ; ದತ್ತಿಯ.

  • oblatory
    ಗುಣವಾಚಕ
    = oblational.

    obligate
    ಸಕರ್ಮಕ ಕ್ರಿಯಾಪದ
  • (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) (ವ್ಯಕ್ತಿಯನ್ನು ಕಾನೂನಿನ ಪ್ರಕಾರ ಯಾ ನೈತಿಕವಾಗಿ ಒಂದು ಕಾರ್ಯಮಾಡಲು) ಕಟ್ಟಿ ಹಾಕು; ಬದ್ಧನನ್ನಾಗಿ ಮಾಡು; ಬಾಧ್ಯನನ್ನಾಗಿಸು; ಕಟ್ಟುಬೀಳಿಸು.
  • (ಅಮೆರಿಕನ್‍ ಪ್ರಯೋಗ) (ಅಸ್ತಿಪಾಸ್ತಿಗಳನ್ನು) ಜಾಮೀನಿಗಾಗಿ–ಒತ್ತೆಯಿಡು, ಆಧಾರವಿಡು.

  • obligate
    ಗುಣವಾಚಕ
    (ಜೀವವಿಜ್ಞಾನ) ನಿರ್ಬಂಧಕ; (ಜೀವಿಯ ಲಕ್ಷಣದ ವಿಷಯದಲ್ಲಿ) ಜೀವದಿಂದಿರಲು ಅಗತ್ಯವಾದ.

    obligation
    ನಾಮವಾಚಕ ಪದಗುಚ್ಛ
  • (ಕಾಯಿದೆ, ಅನುಶಾಸನ, ಕರ್ತವ್ಯ, ಕರಾರು, ಮೊದಲಾದವುಗಳ) ಕಟ್ಟುಪಾಡು; ನಿರ್ಬಂಧ; ಬಂಧಕ ಶಕ್ತಿ.
  • (ಒಬ್ಬನ) ಅವಶ್ಯ, ಅನಿವಾರ್ಯ–ಕರ್ತವ್ಯ; ಹೊತ್ತ–ಹೊಣೆ, ಜವಾಬ್ದಾರಿ, ಭಾರ, ಹೊರೆ.
  • (ಬರೆದುಕೊಟ್ಟ) ಕರಾರು; ಮುಚ್ಚಳಿಕೆ: ಮುಖ್ಯವಾಗಿ ತಪ್ಪಿದರೆ ಶಿಕ್ಷೆಗೊಳಪಡಿಸಬಹುದಾದ, ಮಾಡಲೇಬೇಕೆಂದು ನಿರ್ಬಂಧಿಸಬಹುದಾದ ಕರಾರು, ಒಪ್ಪಂದ.
  • ಉಪಕಾರ; ಪ್ರಯೋಜನ: repay an obligation ಪಡೆದ ಉಪಕಾರ ತೀರಿಸು; ಉಪಕಾರ ಮಾಡಿದ್ದಕ್ಕೆ ಪ್ರತ್ಯುಪಕಾರ ಮಾಡು.
  • (ಇನ್ನೊಬ್ಬರಿಂದಾಗಿರುವ ಸೇವೆಯ ಯಾ ಉಪಕಾರದ) ಋಣ; ಕೃಜ್ಞತೆಯ ಭಾರ: be under an obligation (ಒಬ್ಬರಿಂದಾಗಿರುವ ಸೇವೆಯ ಯಾ ಉಪಕಾರದ) ಋಣ ಹೊತ್ತಿರು; ಹಂಗಿಗೆ ಒಳಪಟ್ಟಿರು.

  • obligational
    ಗುಣವಾಚಕ
  • ಕರಾರಿನ ಯಾ ಅದಕ್ಕೆ ಸಂಬಂಧಿಸಿದ.
  • ಕರ್ತವ್ಯದ; ಕರ್ತವ್ಯಭಾರದ; ಕರ್ತವ್ಯಕ್ಕೆ ಕಟ್ಟುಬಿದ್ದ.

  • obligator
    ನಾಮವಾಚಕ

    obligatorily
    ಕ್ರಿಯಾವಿಶೇಷಣ
  • (ಕಾನೂನಿನ ಮೇರೆಗೆ ಯಾ ನೈತಿಕವಾಗಿ) ಕಟ್ಟುಬೀಳಿಸಿರುವಂತೆ; ಅನಿವಾರ್ಯ ಕರ್ತವ್ಯವಾಗಿರುವಂತೆ.
  • ಕರ್ತವ್ಯಕ್ಕೆ ಕಟ್ಟುಬಿದ್ದಂತೆ, ಸಿಲುಕಿದಂತೆ.

  • obligatory
    ಗುಣವಾಚಕ
  • (ಕಾನೂನಿನ ಮೇರೆಗೆ ಯಾ ನೈತಿಕವಾಗಿ) ಕಟ್ಟುಬಿದ್ದ ಕಟ್ಟುಬೀಳಿಸಿರುವ; ಕಟ್ಟಿಗೆ ಸಿಲುಕಿದ; ಕಟ್ಟಿ ಹಾಕಿರುವ; ಬಂಧಕವಾದ; ಮಾಡಲೇಬೇಕಾದ; ನಿರ್ಬಂಧವಾದ; (ಅನುಜ್ಞಾತ್ಮಕವಲ್ಲದೆ) ಅನಿವಾರ್ಯ ಕರ್ತವ್ಯವಾದ.
  • (ಕೃತಜ್ಞತಾ) ಋಣ ರೂಪದ; ಉಪಕಾರಭಾರದ.


  • logo