logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obfuscatory
ಗುಣವಾಚಕ
  • (ಮನಸ್ಸು ಮೊದಲಾದವನ್ನು) ಮಂಕಾಗಿಸುವ.
  • ದಿಕ್ಕುತೋರದಂತೆ ಮಾಡುವ.
  • (ಅರ್ಥ ಮಾಡಿಕೊಳ್ಳಲು ಕಷ್ಟವಾಗುವಂತೆ) ಜಟಿಲಗೊಳಿಸುವ.

  • obi
    ನಾಮವಾಚಕ
    obeah ಪದದ ರೂಪಾಂತರ.

    obi
    ನಾಮವಾಚಕ
    ಸೊಂಟಪಟ್ಟಿ ಕಟಿಬಂಧ; ಜಪಾನಿ ಹೆಂಗಸರು, ಮಕ್ಕಳು ಕಿಮೋನೋದೊಂದಿಗೆ ತೊಡುವ, ಅಗಲವೂ ಉಜ್ಜ್ವಲವೂ ಆದ ನಡುಕಟ್ಟು.

    obit
    ನಾಮವಾಚಕ
  • (ಚರಿತ್ರೆ) (ಮುಖ್ಯವಾಗಿ ಒಂದು ಸಂಸ್ಥೆಯಲ್ಲಿ ಸ್ಥಾಪಕನ ಯಾ ದಾತನ ಮರಣದ ವಾರ್ಷಿಕ ದಿನ ನಡೆಸುವ) ಸ್ಮಾರಕ ಪ್ರಾರ್ಥನೆ ಯಾ ಪೂಜೆ.
  • ಆ ವ್ಯಕ್ತಿಯ ಸತ್ತ ದಿನಾಂಕ ಯಾ ಅದರ ದಾಖಲೆ.
  • (ಆಡುಮಾತು) = obituary.

  • obiter dictum
    ನಾಮವಾಚಕ
  • (ನ್ಯಾಯಾಧಿಪತಿಯು ಯಾವುದೇ ವಿಷಯವನ್ನು ಚರ್ಚಿಸುತ್ತಿರುವಾಗ ಯಾ ಯಾವುದೇ ತೀರ್ಪು ಕೊಡುತ್ತಿರುವಾಗ ಕೊಡುವ, ಆ ವಿಷಯಕ್ಕೆ ಯಾ ತೀರ್ಪಿಗೆ ಅತ್ಯಾವಶ್ಯಕವಲ್ಲದ ಮತ್ತು ಆ ಕಾರಣದಿಂದಲೇ ಯಾವ ಪಕ್ಷವನ್ನು ಬದ್ಧಗೊಳಿಸಲಾರದ) ಪ್ರಾಸಂಗಿಕ ಅಭಿಪ್ರಾಯ.
  • (ಸಾಮಾನ್ಯವಾಗಿ) (ಯಾವುದೇ) ಪ್ರಾಸಂಗಿಕೋಕ್ತಿ; ಪ್ರಾಸಂಗಿಕ ಮಾತು.

  • obituarial
    ಗುಣವಾಚಕ
    ನಿಧನ ವಾರ್ತೆಯ; ಮೃತವಾರ್ತೆಗೆ ಸಂಬಂಧಿಸಿದ.

    obituarist
    ನಾಮವಾಚಕ
    ನಿಧನವಾರ್ತಾಕಾರ; ಸಾವು ಸುದ್ದಿಗಾರ; ಮೃತಿಪ್ರಕಟಣೆ ಬರೆಯುವವನು.

    obituary
    ನಾಮವಾಚಕ
  • (ಮುಖ್ಯವಾಗಿ ವೃತ್ತಪತ್ರಿಕೆಗಳಲ್ಲಿ) ಪ್ರಕಟವಾಗುವ ನಿಧನವಾರ್ತೆ, ಮೃತಿಪ್ರಕಟಣೆ; ಸಾವಿನ, ಸಾವುಗಳ–ಸುದ್ದಿ.
  • ಮೃತ ವೃತ್ತಾಂತ; ಮೃತ ವ್ಯಕ್ತಿಯ ಸಂಕ್ಷಿಪ್ತ ಜೀವನ ಚರಿತ್ರೆ.

  • obituary
    ಗುಣವಾಚಕ
  • ನಿಧನವಾರ್ತೆಯ; ಸಾವಿನ ಸುದ್ದಿಯನ್ನು ದಾಖಲಿಸುವ.
  • ಮೃತನ ಮರಣವನ್ನು ಕುರಿತ; ಸತ್ತವನ ಸಾವಿಗೆ ಸಂಬಂಧಿಸಿದ.

  • object
    ನಾಮವಾಚಕ ಪದಗುಚ್ಛ
  • (ಕಣ್ಣಿಗೆ ಕಾಣಿಸುವ ಯಾ ಇಂದ್ರಿಯಗೋಚರವಾದ) ಭೌತಿಕ–ವಸ್ತು, ಪದಾರ್ಥ.
  • (ಯಾವುದೇ ಕ್ರಿಯೆಗೆ ಯಾ ಭಾವಕ್ಕೆ ವಿಷಯವಾದ, ಪಾತ್ರವಾದ) ವ್ಯಕ್ತಿ ಯಾ ವಸ್ತು: the object of attention ಗಮನಕ್ಕೆ ಗುರಿಯಾದ ವ್ಯಕ್ತಿ ಯಾ ವಸ್ತು. the object of our study ನಮ್ಮ ಅಧ್ಯಯನದ ವಿಷಯ, ವಸ್ತು. he is a proper object of (or for) charity ದಾನಕ್ಕೆ ಅವನು ಸತ್ಪಾತ್ರ; ಅವನು ದಾನ ಪಡೆಯಲು ಸರಿಯಾದ, ಅರ್ಹನಾದ ವ್ಯಕ್ತಿ.
  • ಗುರಿ; ಉದ್ದೇಶ; ಲಕ್ಷ್ಯ; ಗುರಿಯಿಟ್ಟ ವಸ್ತು.
  • (ವ್ಯಾಕರಣ) ಕರ್ಮ(ಪದ); ಸಕರ್ಮಕ ಕ್ರಿಯಾಪದದಿಂದ ಇಲ್ಲವೆ ಉಪಸರ್ಗದಿಂದ ನಿಯಂತ್ರಿತವಾಗುವ ನಾಮಪದ ಇಲ್ಲವೆ ಅದಕ್ಕೆ ಸಮಾನವಾದ ಭಾಗ.
  • (ತತ್ತ್ವಶಾಸ್ತ್ರ) ಜ್ಞೇಯ ವಸ್ತು; ಜ್ಞಾತೃವಿನ ಜ್ಞಾನಕ್ಕೆ ವಿಷಯವಾದ ವಸ್ತು; ಜ್ಞಾತೃವಿಗೆ ಯಾ ಮನಸ್ಸಿಗೆ ಬಾಹ್ಯವಾದ, ಭಿನ್ನವಾದ–ವಿಷಯ, ವಸ್ತು. ಪದಾರ್ಥ.
  • (ಹೀನಾರ್ಥಕ ಪ್ರಯೋಗ) ಬಡಪಾಯಿ; ಮುಖ್ಯವಾಗಿ ಕನಿಕರ ಹುಟ್ಟಿಸುವ ಯಾ ಹಾಸ್ಯಾಸ್ಪದವಾದ ಸ್ವರೂಪವುಳ್ಳ ವ್ಯಕ್ತಿ ಯಾ ವಸ್ತು.
  • (ಕಂಪ್ಯೂಟರ್‍) ಮಾಹಿತಿಯ ಒಂದು ತಂಡ ಮತ್ತು ಅದರ ನಿರ್ವಹಣೆಯ ವಿವರಣೆ.
  • ದೃಶ್ಯವಸ್ತು; ವೀಕ್ಷಣ ಸಾಧನಗಳಿಂದ ಯಾ ಉಪಕರಣಗಳಿಂದ ನೋಡಿದ ಯಾ ಚಿತ್ರಿಸಿ ತೋರಿಸಿದ ವಸ್ತು.


  • logo