logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

macadam
ನಾಮವಾಚಕ
  • ಮಕ್ಯಾಡಮ್‍; ಮಕ್ಯಾಡಮ್‍ ರಸ್ತೆಗೆ ಬಳಸುವ ಜಲ್ಲಿಕಲ್ಲು ಮೊದಲಾದ ಸಾಮಗ್ರಿ.
  • = tar macadam.

  • macadamia
    ನಾಮವಾಚಕ
    ಮ್ಯಾಕಡೇಮಿಯ:
  • ಖಾದ್ಯ ಬೀಜಗಳನ್ನು ಬಿಡುವ, ಆಸ್ಟ್ರೇಲಿಯದ, ನಿತ್ಯಹರಿದ್ವರ್ಣದ ಮರಗಳ ಒಂದು ಕುಲ.
  • ಈ ಕುಲದ ಮರ.

  • macadamization
    ನಾಮವಾಚಕ
    ಮಕ್ಯಾಡಮೀಕರಣ; ರಸ್ತೆಮಾಡಲು ಮಾಕ್ಯಾಡಮ್‍ ವಿಧಾನ ಬಳಸುವುದು.

    macadamize
    ಸಕರ್ಮಕ ಕ್ರಿಯಾಪದ
    ಮಕ್ಯಾಡಮೀಕರಿಸು; ಮಕ್ಯಾಡಮ್‍ ವಿಧಾನದಲ್ಲಿ ರಸ್ತೆ ಮಾಡು.

    macaque
    ನಾಮವಾಚಕ
    ಮಕ್ಯಾಕ್‍; ಕೆನ್ನೆ ಚೀಲಗಳನ್ನೂ, ಉದ್ದವಾದ ಬಾಲವನ್ನೂ ಊಳ್ಳ, ಮಕಾಕ ಕುಲದ ಕೋತಿ.

    macaroni
    ನಾಮವಾಚಕ
  • ಟೊಳ್ಳುಸೇವಿಗೆ; ಕೊಳವಿ ಸೇವಿಗೆ; ಗೋಧಿಹಿಟ್ಟಿನ ಕಣಕದಿಂದ ಮಾಡಿದ ತೆಳ್ಳನೆಯ, ಉದ್ದ ಕೊಳವಿಗಳಂಥ ತಿನಿಸು, ಆಹಾರ ಪದಾರ್ಥ.
  • (ಬಹುವಚನ macaronies). (ಚರಿತ್ರೆ) (ಯೂರೋಪಿನ ಅಭಿರುಚಿಗಳನ್ನು ಅನುಕರಿಸುತ್ತಿದ್ದ) ಹದಿನೆಂಟನೆಯ ಶತಮಾನದ ಬ್ರಿಟಿಷ್‍ ಸೊಗಸುಗಾರ, ಠೀವಿಗಾರ.

  • macaronic
    ಗುಣವಾಚಕ
  • (ಲ್ಯಾಟಿನ್‍ ಮತ್ತು ಇತರ) ಪರಭಾಷೆಗಳ ಶಬ್ದಗಳೂ ದೇಶೀಯ ಶಬ್ದಗಳೂ ಸೇರಿದ ಮತ್ತು ಲ್ಯಾಟಿನ್‍ ಮೊದಲಾದ ಪರ ಭಾಷೆಗಳ ಪ್ರತ್ಯಯ ಹಚ್ಚಿದ ವಿಡಂಬನ ಕವಿತೆಯ.
  • ಕಲಬೆರಕೆಯ; ಸಂಕರ; ಮಿಶ್ರ.

  • macaronic
    ನಾಮವಾಚಕ
    (ಬಹುವಚನದಲ್ಲಿ).
  • (ಲ್ಯಾಟಿನ್‍ ಮತ್ತು ಇತರ) ಪರಭಾಷೆಗಳ ಶಬ್ದಗಳೂ ದೇಶೀಯ ಶಬ್ದಗಳೂ ಸೇರಿದ ಮತ್ತು ಲ್ಯಾಟಿನ್‍ ಮೊದಲಾದ ಪರಭಾಷೆಗಳ ಪ್ರತ್ಯಯ ಹಚ್ಚಿದ ವಿಡಂಬನ ಪದ್ಯಗಳು.
  • ಕಲಬೆರಕೆ ಹಾಡು; ಸಂಕರ ಕವನ; ಬೆರಕೆ ಪದ್ಯ.

  • macaroon
    ನಾಮವಾಚಕ
    ಬಾದಾಮಿ ಬಿಸ್ಕತ್ತು; ಮೊಟ್ಟೆ ಬಿಸ್ಕತ್ತು; ಬಾದಾಮಿ, ಕೋಳಿಮೊಟ್ಟೆ, ಸಕ್ಕರೆ, ಮೊದಲಾದವನ್ನು ಸೇರಿಸಿ ತಯಾರಿಸಿದ ಸಣ್ಣ ರೊಟ್ಟಿ, ಬಿಸ್ಕತ್ತು.

    Macassar
    ಗುಣವಾಚಕ
    ಮಕ್ಯಾಸರ್‍ ತೈಲದ.


    logo