logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

M.Tech.
ಸಂಕ್ಷಿಪ್ತ
Master of Technology.

MA
ಸಂಕ್ಷಿಪ್ತ
  • Master of Arts.
  • (ಅಮೆರಿಕನ್‍ ಪ್ರಯೋಗ) Massachusetts.

  • ma
    ನಾಮವಾಚಕ
    (ಆಡುಮಾತು) ತಾಯಿ; ಅಮ್ಮ.

    ma'am
    ನಾಮವಾಚಕ
    (madam ಪದದ ಸಂಕ್ಷಿಪ್ತ, ಉನ್ನತ ವರ್ಗದ ಸ್ತ್ರೀಯನ್ನು, ಮುಖ್ಯವಾಗಿ ಆಸ್ಥಾನ, ಅರಮನೆ, ಮೊದಲಾದ ಸ್ಥಳಗಳಲ್ಲಿ ರಾಣಿ ಮೊದಲಾದವರನ್ನು ಸಂಬೋಧಿಸುವ ಗೌರವದ ಒಕ್ಕಣೆ) ಶ್ರೀಮತಿಯವರೇ! ಅಮ್ಮಾ! ತಾಯಿ! ಅಮ್ಮಣ್ಣಿ! ಅವ್ವ! ಅಕ್ಕ!

    Mac
    ನಾಮವಾಚಕ
    (ಆಡುಮಾತು)
  • ಸ್ಕಾಟ್ಲೆಂಡಿನವನು.
  • (ಅಮೆರಿಕನ್‍ ಪ್ರಯೋಗ) (ಮುಖ್ಯವಾಗಿ ಸಂಬೋಧನೆಯಾಗಿ) ಮನುಷ್ಯ; ಮಾನವ.

  • mac
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಆಡುಮಾತು) = mackintosh.

    macabre
    ಗುಣವಾಚಕ
  • ಭೀಕರ; ಭಯಂಕರ; ಉಗ್ರ; ಘೋರ; ಕರಾಳ; ಬೀಭತ್ಸ.
  • ಮೃತ್ಯು ಸೂಚಕ; ಸಾವಿನ ಕರಾಳ ಸ್ವರೂಪಕ್ಕೆ ಸಂಬಂಧಿಸಿದ.

  • macaco
    ನಾಮವಾಚಕ
    ಮಕೇಕೋ; ಮಕೇಕನ್‍ ಕುಲಕ್ಕೆ ಸೇರಿದ ಏಷ್ಯಾ, ಆಹ್ರಿಕಾಗಳ ಒಂದು ಬಗೆಯ ಕಪಿ.

    macaco
    ನಾಮವಾಚಕ
    ಮಕೇಕೋ; ಒಂದು ಬಗೆಯ ಲೀಮರ್‍ ಕಪಿ.

    macadam
    ಗುಣವಾಚಕ
    ಮಕ್ಯಾಡಮ್‍ನ; (ರಸ್ತೆಯ ವಿಷಯದಲ್ಲಿ) (ಮಕ್ಯಾಡಮ್‍ ಎಂಬ ಇಂಜಿನಿಯರ್‍ ಬಳಕೆಗೆ ತಂದ) ಒಂದೇ ಗಾತ್ರದ ಜಲ್ಲಿಕಲ್ಲುಗಳ ವರಿಸೆಗಳನ್ನು ಒಂದರ ಮೇಲೊಂದರಂತೆ ಹಾಕಿ, ಒಂದೊಂದು ವರಿಸೆಯನ್ನೂ ದಮ್ಮಸ್ಸು ಮಾಡಿ ತಯಾರಿಸಿದ.


    logo