logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

magician
ನಾಮವಾಚಕ
  • ಮಾಂತ್ರಿಕ; ಮಂತ್ರವಾದಿ; ಮಾಟಗಾರ.
  • ಗಾರುಡಿಗ; ಐಂದ್ರಜಾಲಿಕ; ಜಾದುಗಾರ; ಯಕ್ಷಿಣಿಗಾರ.
  • (ರೂಪಕವಾಗಿ) (ಹಸ್ತಕೌಶಲ, ಕಲಾಕುಶಲತೆ, ಮೊದಲಾದವುಗಳಿಂದ) ಮೋಹಗೊಳಿಸುವವನು: authors are word magicians ಸಾಹಿತಿಗಳು ಶಬ್ದಗಾರುಡಿಗರು.

  • magilp
    ನಾಮವಾಚಕ
    megilp ಪದದ ರೂಪಾಂತರ.

    Maginot line
    ನಾಮವಾಚಕ
  • ಮ್ಯಾಜಿನೋ ರೇಖೆ; ಎರಡನೆಯ ಮಹಾ ಯುದ್ಧಕ್ಕೆ ಮುಂಚೆ ಹ್ರಾನ್ಸ್‍ ಮತ್ತು ಜರ್ಮನಿ ದೇಶಗಳ ನಡುವಣ ಗಡಿಯ ಉದ್ದಕ್ಕೂ ನಿರ್ಮಿಸಿದ್ದ ಶಸ್ತ್ರಸಜ್ಜಿತ ಕೋಟೆ ಕೊತ್ತಳಗಳ ಪಂಕ್ತಿ
  • ರಕ್ಷಣಾಪಂಕ್ತಿ; ತಮ್ಮನ್ನು ರಕ್ಷಿಸುತ್ತದೆ ಎಂದು ಕುರುಡು ಕುರುಡಾಗಿ ನಂಬಿರುವ ರಕ್ಷಣಾ ಸೈನಿಕ ಠಾಣೆಗಳ ಸಾಲು.

  • magisterial
    ಗುಣವಾಚಕ
  • ಮ್ಯಾಜಿಸ್ಟ್ರೇಟನ; ನ್ಯಾಯಾಧಿಕಾರಿಯ; ದಂಡಾಧಿಕಾರಿಯ.
  • ಮ್ಯಾಜಿಸ್ಟ್ರೇಟನು ನಡೆಸುವ; ನ್ಯಾಯಾಧಿಕಾರಿ ನಡೆಸುವ.
  • ಅಧಿಕಾರಯುಕ್ತ; ಆಧಿಕಾರಿಕ; ಅಧಿಕೃತ.
  • ದರ್ಪದಿಂದ ಕೂಡಿದ; ಜಬರದಸ್ತಿನ: in a magisterial tone of command ಆಜ್ಞೆಯ ರೀತಿಯ ದರ್ಪದ ದನಿಯಲ್ಲಿ.
  • (ಅಭಿಪ್ರಾಯಗಳ ವಿಷಯದಲ್ಲಿ) ಪ್ರಮಾಣಪೂರ್ವಕ; ಪ್ರಮಾಣಯುಕ್ತ; ಆಧಾರಪೂರ್ವಕ.

  • magisterially
    ಕ್ರಿಯಾವಿಶೇಷಣ
  • ಅಧಿಕಾರಯುತವಾಗಿ; ಅಧಿಕಾರವಾಣಿಯಲ್ಲಿ.
  • ದರ್ಪದಿಂದ; ಜಬರದಸ್ತಿನಿಂದ; ದಬ್ಬಾಳಿಕೆಯ ದನಿಯಲ್ಲಿ .
  • ನ್ಯಾಯಾಧಿಕಾರಿಯ ಸ್ಥಾನದಲ್ಲಿ; ನ್ಯಾಯಾಧೀಶನ ಅಧಿಕಾರದಿಂದ.

  • magisterium
    ನಾಮವಾಚಕ
    (ರೋಮನ್‍ ಕ್ಯಾಥೊಲಿಕ್‍ ಚರ್ಚು) (ಬಿಷಪ್‍ ಯಾ ಪೋಪನ) ಅಧಿಕೃತ ಉಪದೇಶ, ಬೋಧೆ.

    magistracy
    ನಾಮವಾಚಕ
  • ನ್ಯಾಯಾಧಿಪತಿಯ ಯಾ ಮ್ಯಾಜಿಸ್ಟ್ರೇಟನ – ಹುದ್ದೆ, ಪದವಿ, ಅಧಿಕಾರ.
  • (ಸಾಮೂಹಿಕವಾಗಿ) ಮ್ಯಾಜಿಸ್ಟ್ರೇಟರು(ಗಳು); ನ್ಯಾಯಾಧೀಶರು(ಗಳು).
  • ಮ್ಯಾಜಿಸ್ಟ್ರೇಟರ ಅಧಿಕಾರಕ್ಕೆ ಒಳಪಟ್ಟ ಜಿಲ್ಲೆ, ಪ್ರಾಂತ, ವಿಭಾಗ.

  • magistral
    ಗುಣವಾಚಕ
  • ಅಧಿಕಾರಿಯ; ಯಜಮಾನನ.
  • ಅಧಿಕಾರಿಗೆ, ಯಜಮಾನನಿಗೆ ಸಂಬಂಧಿಸಿದ: magistral staff ಅಧಿಕಾರವರ್ಗ.
  • (ಔಷಧಶಾಸ್ತ್ರ) ಸ್ವಕಲ್ಪಿತ; ಸ್ವಂತ ತಯಾರಿಸಿದ; ಪುಸ್ತಕದಲ್ಲಿರದ ಔಷಧದ ಪ್ರಯೋಗವನ್ನು ಒಂದು ನಿರ್ದಿಷ್ಟ ರೋಗಕ್ಕಾಗಿ ವೈದ್ಯನು ಕಲ್ಪಿಸುವ, ತಯಾರಿಸುವ.

  • magistrate
    ನಾಮವಾಚಕ
  • ನ್ಯಾಯಾಧಿಪತಿ; ಮ್ಯಾಜಿಸ್ಟ್ರೇಟು.
  • ಶಾಂತಿ (ಪಾಲಕ) ನ್ಯಾಯಾಧೀಶ; ಕೌಂಟಿ ಮೊದಲಾದವುಗಳಲ್ಲಿ ಶಾಂತಿಪಾಲನೆಗಾಗಿ ನೇಮಕಗೊಂಡ ನ್ಯಾಯವಾದಿಯಲ್ಲದ ನ್ಯಾಯಾಧಿಪತಿ, ಮ್ಯಾಜಿಸ್ಟ್ರೇಟು.
  • ಮ್ಯಾಜಿಸ್ಟ್ರೇಟು; ಕಾನೂನನ್ನು ಜಾರಿಗೊಳಿಸುವ ಸಿವಿಲ್‍ ಅಧಿಕಾರಿ.

  • magistrateship
    ನಾಮವಾಚಕ
  • ನ್ಯಾಯಾಧಿಕಾರಿಯ ಯಾ ಮ್ಯಾಜಿಸ್ಟ್ರೇಟನ – ಅಧಿಕಾರ, ಹುದ್ದೆ, ಸ್ಥಾನ.
  • ನ್ಯಾಯಾಧಿಕಾರಿಯ ಅಧಿಕಾರಾವಧಿ.


  • logo