logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Kantian
ಗುಣವಾಚಕ
ಕ್ಯಾಂಟ್‍ ಎಂಬಾತನ; ಕ್ಯಾಂಟಿನ ಸಿದ್ಧಾಂತದ.

Kantian
ನಾಮವಾಚಕ
ಕ್ಯಾಂಟ್‍ನ ಅನುಯಾಯಿ; ಕ್ಯಾಂಟ್‍ವಾದಿ; ಕ್ಯಾಂಟ್‍ಪಂಥಿ.

Kantianism
ನಾಮವಾಚಕ
ಕ್ಯಾಂಟ್‍ನ ಸಿದ್ಧಾಂತ; ಬ್ರಿಟಿಷ್‍ ಅನುಭವವಾದ ಹಾಗೂ ಇತರ ಯೂರೋಪಿಯನ್‍ ದೇಶಗಳ ವಿಚಾರವಾದ – ಈ ಎರಡರ ಸಮನ್ವಯಕ್ಕೆ ಯತ್ನಿಸಿದ ಹದಿನೆಂಟನೆಯ ಶತಮಾನದ ಜರ್ಮನ್‍ ತತ್ವಶಾಸ್ತ್ರಜ್ಞ ಇಮ್ಯಾನ್ಯುಅಲ್‍ ಕ್ಯಾಂಟ್‍ (1724–1804)ನ ಸಿದ್ಧಾಂತ.

KANU
ಸಂಕ್ಷಿಪ್ತ
Kenya African National Union.

kaolin
ನಾಮವಾಚಕ
ಕೆಯೊಲಿನ್‍; ಬಿಳಿಜೇಡಿ(ಮಣ್ಣು); ಪಿಂಗಾಣಿ ಮಣ್ಣು; ಪಿಂಗಾಣಿಯನ್ನು ತಯಾರಿಸಲು ಬಳಸುವ ಒಂದು ಬಗೆಯ ನುಣುಪಾದ ಬಿಳಿಯ ಜೇಡಿಮಣ್ಣು.

kaolinise
ಸಕರ್ಮಕ ಕ್ರಿಯಾಪದ
= kaolinize.

kaolinite
ನಾಮವಾಚಕ
ಕೆಯೊಲಿನೈಟ್‍; ಕೆಯೊಲಿನ್‍ನ ಮುಖ್ಯ ಘಟಕವಾಗಿರುವ ಜಲಯುಕ್ತ ಅಲ್ಯೂಮಿನಿಯಂ ಸಿಲಿಕೇಟ್‍, ${\rm Al}_2{\rm Si}_2{\rm O}_5{\rm (OH)}_4$.

kaolinize
ಸಕರ್ಮಕ ಕ್ರಿಯಾಪದ
(ಗಾಳಿ, ಬಿಸಿಲು, ಮೊದಲಾದ ಹವಾ ಬದಲಾವಣೆಗಳಿಗೆ ಒಡ್ಡುವುದರ ಮೂಲಕ ಹೆಲ್ಡ್‍ಸ್ಟಾರ್‍ ಮೊದಲಾದ ಖನಿಜವನ್ನು) ಕೆಯೊಲಿನೀಕರಿಸು; ಕೆಯೊಲಿನ್‍ಗೊಳಿಸು; ಬಿಳಿ ಜೇಡಿಯನ್ನಾಗಿಸು.

kaon
ನಾಮವಾಚಕ
(ಭೌತವಿಜ್ಞಾನ) ಕೇಯಾನ್‍; ಅಧಿಕ ಶಕ್ತಿಕಣಗಳ ಸಂಘರ್ಷಣೆಯಲ್ಲಿ ಉತ್ಪತ್ತಿಯಾಗುವ, ಅಸ್ಥಿರವಾದ, ಇಲೆಕ್ಟ್ರಾನಿನ 966.3ರಷ್ಟು ತೂಕವಿರುವ ವಿದ್ಯುದಾವಿಷ್ಟ ಮೀಸಾನ್‍ ಯಾ 974.6ರಷ್ಟು ತೂಕವಿರುವ ವಿದ್ಯುತ್ತಟಸ್ಥ ಮೀಸಾನ್‍.

kapellmeister
ನಾಮವಾಚಕ
ವಾದ್ಯಮೇಳ, ಗೀತನಾಟಕ, ಮೇಳಗಾಯನ ಮೊದಲಾದವುಗಳ ಡೈರೆಕ್ಟರು, ನಿರ್ದೇಶಕ.


logo