logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

kale
ನಾಮವಾಚಕ ಪದಗುಚ್ಛ
Scotch kale ಧೂಮ್ರವರ್ಣದ ಎಲೆಗಳುಳ್ಳ ಕೋಸುಗೆಡ್ಡೆ.
  • ಕೇಲ್‍ (ಸಸ್ಯ); ಸುರುಳಿ ಸುರುಳಿಯಾದ ಎಲೆಗಳಿರುವ, ಕೋಸುಗೆಡ್ಡೆ ಜಾತಿಯ ಸಸ್ಯ.
  • ಕೇಲ್‍ ಸಾಂಬಾರು; ಕೇಲ್‍ ಗೆಡ್ಡೆಯಿಂದ ಮಾಡಿದ ಸಾಂಬಾರು.
  • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹಣ; ರೊಕ್ಕ.

  • kaleidoscope
    ನಾಮವಾಚಕ
  • ಕಲೈಡೋಸ್ಕೋಪು; ವಿವಿಧ ಚಿತ್ರದರ್ಶಕ; ವಿವಿಧ ಚಿತ್ರದರ್ಶಿ; ಕೊಳವೆಯ ಒಳಗಡೆಗೆ ತಗುಲಿದಂತೆ ಪರಸ್ಪರ $50^\circ$ ಕೋನಗಳಿರುವಂತೆ ಮೂರು ಉದ್ದದ ಕನ್ನಡಿಗಳನ್ನು ಜೋಡಿಸಿ, ಕೊಳವಿಯನ್ನು ತಿರುಗಿಸಿದಾಗ ತಳದಲ್ಲಿ ಹಾಕಿರುವ ಬಣ್ಣಬಣ್ಣದ ಗಾಜಿನ ಚೂರುಗಳು, ಮಣಿಗಳು, ಮೊದಲಾದವನ್ನು ವಿವಿಧ ವಿಚಿತ್ರ ಹಾಗೂ ಸುಂದರ ಆಕಾರಗಳಲ್ಲಿ ತೋರಿಸುವ ಸಲಕರಣೆ.
  • (ರೂಪಕವಾಗಿ) ಚಿತ್ರ ವಿಚಿತ್ರ ಘಟನಾವಲಿ; ನಿರಂತರವಾಗಿ ಬದಲಾಯಿಸುತ್ತಿರುವ ಚಿತ್ರವಿಚಿತ್ರ ವಸ್ತುಗಳು ಯಾ ಘಟನಾವಳಿ; ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಘಟನೆಗಳ ಪರಂಪರೆ.

  • kaleidoscopic
    ಗುಣವಾಚಕ
  • ಕಲೈಡೋಸ್ಕೋಪಿನ ಯಾ ಕಲೈಡೋಸ್ಕೋಪಿಗೆ ಸಂಬಂಧಿಸಿದ.
  • ರೂಪ, ಆಕೃತಿ, ವರ್ಣ, ಮೊದಲಾದವನ್ನು ಕಲೈಡೋಸ್ಕೋಪಿನಂತೆ ಬದಲಾಯಿಸುತ್ತಿರುವ.
  • ನಿತ್ಯ ಪರಿಣಾಮಿ; ನಿರಂತರವಾಗಿ ಬದಲಾಯಿಸುತ್ತಿರುವ: kaleidoscopic events ನಿರಂತರವಾಗಿ ಬದಲಾಯಿಸುತ್ತಿರುವ ಘಟನೆಗಳು.
  • ಅತ್ಯಂತ ಜಟಿಲವೂ ವೈವಿಧ್ಯಮಯವೂ ಆದ: kaleidoscopic view of history ಜಟಿಲವೂ ವೈವಿಧ್ಯಮಯವೂ ಆದ ಐತಿಹಾಸಿಕ ದೃಷ್ಟಿ.

  • kaleidoscopical
    ಗುಣವಾಚಕ
    = kaleidoscopic.

    kaleidoscopically
    ಕ್ರಿಯಾವಿಶೇಷಣ
  • ಕಲೈಡೋಸ್ಕೋಪಿನಂತೆ.
  • ಕಲೈಡೋಸ್ಕೋಪಿನಂತೆ ಬದಲಾಯಿಸುತ್ತಾ.
  • ನಿರಂತರವಾಗಿ ಬದಲಾವಣೆಗೊಳ್ಳುತ್ತಾ.
  • ಜಟಿಲವೂ ವೈವಿಧ್ಯಮಯವೂ ಆದ ರೀತಿಯಲ್ಲಿ.

  • kalends
    ನಾಮವಾಚಕ
    = calends.

    kaleyard
    ನಾಮವಾಚಕ
    (ಕುಟುಂಬದ ಬಳಕೆಗಾಗಿ ಕಾಯಿಪಲ್ಯ ಬೆಳೆಸುವ) ಹಿತ್ತಲ ತೋಟ; ಕೈತೋಟ.

    kaleyard school
    ನಾಮವಾಚಕ
    ಹಿತ್ತಲ ಬಳಗ; ಹಿತ್ತಲ ಪಂಥ; ಜನಸಾಮಾನ್ಯರ ನುಡಿಯನ್ನು ವಿಶೇಷವಾಗಿ ಬಳಸಿ, ಜನಸಾಮಾನ್ಯರ ದಿನನಿತ್ಯದ ಜೀವನವನ್ನು ಕುರಿತು ಬರೆಯುವ ಸ್ಕಾಟ್ಲೆಂಡಿನ ಕಾದಂಬರಿಕಾರರ ಒಂದು ಪಂಥ, ಬಳಗ.

    kali
    ನಾಮವಾಚಕ
    ಕಾಲಿ; ಸೋಡಾ ಭಸ್ಮವನ್ನು ತಯಾರಿಸಲು ಬಳಸುತ್ತಿದ್ದ, ಗ್ಲಾಸ್‍ವರ್ಟ್‍ ಎಂಬ ಮುಳ್ಳುಗಿಡ.

    kalmia
    ನಾಮವಾಚಕ
    ಕ್ಯಾಲ್ಮಿಯ; ಉತ್ತರ ಅಮೆರಿಕದ, ಚಿತ್ರವರ್ಣದ ಬೆಡಗು ಹೂ ಬಿಡುವ ಒಂದು ನಿತ್ಯ ಹಸುರು ಪೊದೆ.


    logo