logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

kainit
ನಾಮವಾಚಕ
= kainite.

kainite
ನಾಮವಾಚಕ
ಕೈನಿಟ್‍; ಪೊಟ್ಯಾಸಿಯಮ್‍ ಮತ್ತು ಮೆಗ್ನೀಸಿಯಂ ಲವಣಗಳ ತಯಾರಿಕೆಗಾಗಿಯೂ ಫಲವತ್ಕಾರಕವಾಗಿಯೂ ಬಳಸುವ ${\rm MgSO}_4$ ${\rm KCL} {\rm 3H}_2$ O ಸಂಯೋಜನೆಯ ಒಂದು ನೈಸರ್ಗಿಕ ಪದಾರ್ಥ.

kaiser
ನಾಮವಾಚಕ
(ಚರಿತ್ರೆ) ಕೈಸರ್‍; ಚಕ್ರವರ್ತಿ; ಸಮ್ರಾಟ;ಸಾರ್ವಭೌಮ (ಮುಖ್ಯವಾಗಿ ಜರ್ಮನಿಯ ಚಕ್ರವರ್ತಿ, ಆಸ್ಟ್ರಿಯದ ಚಕ್ರವರ್ತಿ ಯಾ ಪವಿತ್ರ ರೋಮನ್‍ ಸಾಮ್ರಾಜ್ಯದ ಚಕ್ರವರ್ತಿ).

kaisership
ನಾಮವಾಚಕ
(ಮುಖ್ಯವಾಗಿ ಜರ್ಮನಿ, ಆಸ್ಟ್ರಿಯಾ ಯಾ ಪವಿತ್ರ ರೋಮನ್‍ ಚಕ್ರಾಧಿಪತ್ಯದ) ಕೈಸರಗಿರಿ; ಚಕ್ರವರ್ತಿಯ, ಸಮ್ರಾಟನ ಪದವಿ; ಸಾರ್ವಭೌಮತ್ವ.

kajawah
ನಾಮವಾಚಕ
ಕಜಾವ; ಒಂಟೆ – ಡೋಲಿ, ತೊಟ್ಟಿಲು; (ಸ್ತ್ರೀಯರಿಗೆ ವಾಹನವಾಗಿ ಬಳಸುವ, ಒಂಟೆಯ ಎರಡು ಬಗಲಿಗೂ ತೂಗಕಟ್ಟಿದ) ಡೋಲಿ, ತೊಟ್ಟಿಲು.

kaka
ನಾಮವಾಚಕ
ಕಾಕಾ; ನ್ಯೂಸಿಲೆಂಡಿನ ಆಲಿವ್‍ ಕಂದುಬಣ್ಣದ ಗಿಣಿ ಜಾತಿ.

kakapo
ನಾಮವಾಚಕ
ಗೂಬೆಗಿಣಿ; ನ್ಯೂಸಿಲೆಂಡಿನ ಗೂಬೆಯಾಕಾರದ ನಿಶಾಚರ ಗಿಣಿ.

kakemono
ನಾಮವಾಚಕ
ತೂಗು(ಚಿತ್ರ)ಪಟ; ಸಾಮಾನ್ಯವಾಗಿ ರೇಷ್ಮೆ ಬಟ್ಟೆಯ ಮೇಲೆ ಬರೆದು, ಬೇಕಾದಾಗ ಬಿಚ್ಚಿ, ಗೋಡೆಯ ಮೇಲೆ ತೂಗಹಾಕಬಹುದಾದ, ಬರಹ ಯಾ ಚಿತ್ರವನ್ನೊಳಗೊಂಡ, ಜಪಾನಿನ ಸುರುಳಿ ಪಟ; ಭಿತ್ತಿಪಟ.

kakistocracy
ನಾಮವಾಚಕ
ದುಷ್ಟಪ್ರಭುತ್ವ; ಆಸುರೀಪ್ರಭುತ್ವ; ರಾಷ್ಟ್ರದ ಅತ್ಯಂತ ದುಷ್ಟರ ಸರ್ಕಾರ.

kala-azar
ನಾಮವಾಚಕ
ಕಾಳಬೇನೆ; ಕಾಳಜ್ವರ; ಭಾರತ ಮೊದಲಾದ ಪೂರ್ವದೇಶಗಳಲ್ಲಿ ಕಂಡುಬರುವ ಮಲೇರಿಯಾ ತರಹದ, ಉಗ್ರವಾದ ಸೋಂಕು ಜ್ವರ.


logo