logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

kenspeckle
ಗುಣವಾಚಕ
(ಸ್ಕಾಟ್ಲೆಂಡ್‍) ಸುಸ್ಪಷ್ಟ; ವಿಸ್ಪಷ್ಟ; ಎದ್ದು ಕಾಣುವ.

kent
ಕ್ರಿಯಾಪದ
ken ಧಾತುವಿನ ಭೂತರೂಪ ಮತ್ತು ಭೂತಕೃದಂತ.

Kentish
ಗುಣವಾಚಕ
(ಇಂಗ್ಲೆಂಡಿನ) ಕೆಂಟ್‍ ಪ್ರದೇಶದ.

Kentish fire
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ದೀರ್ಘೋದ್ಗಾರ:
  • ಬಹುಕಾಲ ನಿಲ್ಲಿಸದೆ ಮಾಡುವ ಜಯಕಾರ, ಹರ್ಷೋದ್ಗಾರ.
  • ಬಹುಕಾಲ ನಿಲ್ಲಿಸದೆ ನಡೆಸುವ ಅಸಮ್ಮತಿ ಪ್ರದರ್ಶನ.

  • Kentish man
    ನಾಮವಾಚಕ
    (ಇಂಗ್ಲೆಂಡಿನ ಮೆಡ್‍ವೇ ನದಿಯ) ಪಶ್ಚಿಮದವನು; ಪಶ್ಚಿಮ ಕೆಂಟಿನವನು.

    Kentish rag
    ನಾಮವಾಚಕ
    ಕೆಂಟ್‍ನ(ಲ್ಲಿ ದೊರೆಯುವ ಗಟ್ಟಿ) ಸುಣ್ಣಕಲ್ಲು.

    kentledge
    ನಾಮವಾಚಕ
    (ನೌಕಾಯಾನ) ಹಡಗಿನ ಕಾಯಂಭರ್ತಿ; ಸ್ಥಿರಭಾರವಾಗಿ ಬಳಸುವ ಪೆಡಸುಗಬ್ಬಿಣ, ಬೀಡುಕಬ್ಬಿಣ, ಎರೆಗಬ್ಬಿಣ, ಮೊದಲಾದವು.

    Kentucky Derby
    ನಾಮವಾಚಕ
    ಕೆಂಟಕಿ ಡಾರ್ಬಿ; ಅಮೆರಿಕ ಸಂಯುಕ್ತ ಸಂಸ್ಥಾನದ ಕೆಂಟಕಿಯ ಲೂಯಿಸ್‍ವಿಲ್‍ನಲ್ಲಿ ನಡೆಯುವ, ಮೂರು ವರ್ಷ ವಯಸ್ಸಿನ ಕುದುರೆಗಳ ವಾರ್ಷಿಕ ಪಂದ್ಯ, ರೇಸು.

    Kenyan
    ಗುಣವಾಚಕ
    (ದಕ್ಷಿಣ ಆಹ್ರಿಕದ) ಕೆನ್ಯದ ಯಾ ಕೀನ್ಯದ.

    Kenyan
    ನಾಮವಾಚಕ
    (ದಕ್ಷಿಣ ಆಹ್ರಿಕದ) ಕೆನ್ಯದ ಯಾ ಕೀನ್ಯದ ನಿವಾಸಿ; ಕೆನ್ಯದವನು; ಕೀನ್ಯದವನು.


    logo