logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

keep
ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
  • (ಕಾಯಿದೆ, ವಾಗ್ದಾನ, ತನ್ನಲ್ಲಿಟ್ಟ ನಂಬಿಕೆ, ಕೌಲು, ಕರಾರು, ನಿಶ್ಚಿತ ಭೇಟಿ, ಮೊದಲಾದವನ್ನು) ಪಾಲಿಸು; ಅನುಸರಿಸು; ನಡೆಸು; ಗೌರವಿಸು: keep one’s word ಮಾತಿನ ಪ್ರಕಾರ ನಡೆ.
  • (ಹಬ್ಬ, ವ್ರತ, ಮೊದಲಾದವನ್ನು) ಮಾಡು; ನಡೆಸು; ನೆರವೇರಿಸು; ಆಚರಿಸು.
  • (ವ್ಯಕ್ತಿ, ದುರ್ಗ, ಪಟ್ಟಣ, ಹುಟ್‍ಬಾಲಿನ ಗೋಲು, ಮೊದಲಾದವನ್ನು) ಕಾಯು; ಕಾಪಾಡು; ರಕ್ಷಿಸು; God keep you ದೇವರು ನಿನ್ನನ್ನು ರಕ್ಷಿಸಲಿ.
  • ನೋಡಿಕೊ; (ಒಂದರ) ಜವಾಬ್ದಾರಿವಹಿಸು: keep children ಮಕ್ಕಳನ್ನು ನೋಡಿಕೊ.
  • (ವಶದಲ್ಲಿರುವ ವಸ್ತುವನ್ನು) ಇರಿಸಿಕೊ; ಇಟ್ಟುಕೊ: you may keep the change ಚಿಲ್ಲರೆಯನ್ನು (ವಾಪಾಸು ಮಾಡಬೇಕಾಗಿಲ್ಲದೆ) ನೀನೇ ಇಟ್ಟುಕೊ.
  • (ಮನೆ ಮೊದಲಾದವನ್ನು) ಚೆನ್ನಾಗಿ, ಚೊಕ್ಕಟವಾಗಿ, ಸರಿಯಾದ ಸ್ಥಿತಿಯಲ್ಲಿ – ಇಟ್ಟುಕೊ.
  • (ಅಂಗಡಿ ಮೊದಲಾದವನ್ನು) ಸರಿಯಾಗಿ ನಿರ್ವಹಿಸು, ಇಟ್ಟುಕೊ; ನಡೆಸಿಕೊಂಡು ಹೋಗು.
  • (ದಿನಚರಿ, ಲೆಕ್ಕಾಚಾರದ ಪುಸ್ತಕ, ಮೊದಲಾದವನ್ನು ವಿವರಗಳನ್ನೆಲ್ಲ ದಾಖಲು ಮಾಡಿ) ಕ್ರಮವಾಗಿ ಇರಿಸು, ಇಡು, ಇಟ್ಟಿರು.
  • (ಕುಟುಂಬ, ತಾನು, ಮೊದಲಾದವನ್ನು) ಸಲಹು; ಹೊರೆ; ನೋಡಿಕೊ; ಪೋಷಿಸು; ಜೀವನೋಪಾಯ ಒದಗಿಸಿ ಇಟ್ಟುಕೊ, ಇಟ್ಟುಕೊಂಡಿರು.
  • (ಹಸುಗಳು, ಜೇನುಹುಳು, ಮೊದಲಾದವನ್ನು) ಸಾಕು; ಸಾಕಿ ಇಟ್ಟುಕೊ: keep bees ಜೇನು ಸಾಕು.
  • (ಒಬ್ಬಾಕೆಯನ್ನು ಉಪಭೋಗಕ್ಕಾಗಿ. ಉಪಪತ್ನಿಯನ್ನಾಗಿ, ರಖಾವ್‍ ಆಗಿ) ಇಟ್ಟುಕೊಂಡಿರು; ಮಡಗಿಕೊಂಡಿರು.
  • (ಸರಕನ್ನು, ಮಾಲನ್ನು) ಮಾರಾಟಕ್ಕೆ ಸದಾ – ಹೊಂದಿರು. ಇಟ್ಟಿರು: do you keep buttons ನೀವು ಗುಂಡಿಗಳನ್ನು (ಮಾರಾಟಕ್ಕೆ) ಇಟ್ಟಿದ್ದೀರಾ?
  • ಉಳಿಸಿಟ್ಟುಕೊಂಡಿರು; ಕಾಪಾಡಿಟ್ಟುಕೊಂಡಿರು; ಅಸ್ತಿತ್ವದಲ್ಲಿಟ್ಟುಕೊಂಡಿರು.
  • (ವ್ಯಕ್ತಿಯನ್ನು ಸೆರೆಯಲ್ಲಿ, ಬಂಧನದಲ್ಲಿ) ಇಟ್ಟಿರು; ಹಿಡಿದಿಟ್ಟಿರು.
  • ತಕ್ಕ ಯಾ ಸೂಚಿತ ಸ್ಥಿತಿಯಲ್ಲಿ ಇಟ್ಟುಕೊಂಡಿರು: keep them happy ಅವರನ್ನು ಸಂತೋಷವಾಗಿಟ್ಟುಕೊಂಡಿರು.
  • (ವ್ಯಕ್ತಿಯನ್ನು, ತನ್ನನ್ನೇ, ಯಾವುದೇ ಕೆಲಸವನ್ನು ಮಾಡದಂತೆ) ತಡೆ; ನಿರೋಧಿಸು; ತಡೆಹಿಡಿ: will keep you from going too fast ಅತಿಯಾದ ವೇಗದಲ್ಲಿ ಹೋಗದಂತೆ ನಿನ್ನನ್ನು ತಡೆಯುತ್ತಾನೆ.
  • (ವ್ಯಕ್ತಿಯನ್ನು ಸೆರೆಮನೆಯಲ್ಲಿ ಮೊದಲಾದ ಕಡೆ) ಹಿಡಿದಿಡು; ತಡೆದು ನಿಲ್ಲಿಸು: what kept you so long? ನಿನ್ನನ್ನು ಇಷ್ಟು ಹೊತ್ತು ಯಾವುದು ತಡೆದಿತ್ತು, ಹಿಡಿದಿಟ್ಟಿತ್ತು?
  • (ಯಾವುದೇ ವಸ್ತುವನ್ನು, ಮುಂದಿನ ಉಪಯೋಗಕ್ಕಾಗಿ) ಉಳಿಸಿಟ್ಟಿರು; ಬಳಸದೆ ಇಟ್ಟಿರು; ಕಾದಿರಿಸು; ಕಾದಿಡು: keep it for tomorrow ನಾಳೆಗೆ ಉಳಿಸಿಟ್ಟಿರು.
  • ಮುಚ್ಚಿಟ್ಟಿರು; ಬಚ್ಚಿಟ್ಟಿರು; ಗೋಪ್ಯವಾಗಿ, ಗುಟ್ಟಾಗಿ, ರಹಸ್ಯವಾಗಿ – ಇಟ್ಟಿರು: keep one’s $^1$counsel. ತನ್ನ ಇಂಗಿತವನ್ನು ಗೋಪ್ಯವಾಗಿಡು; ಅಭಿಪ್ರಾಯವನ್ನು ಬಿಟ್ಟು ಕೊಡದಿರು; ಬಾಯಿ ಬಿಡದಿರು; ಮೌನವಾಗಿರು.
  • (ದಾರಿ, ಮಾಡುತ್ತಿರುವ ಕೆಲಸ, ಮೊದಲಾದವನ್ನು) ಅನುಸರಿಸುತ್ತಾ ಹೋಗು; ಬಿಡದೆ ಮಾಡುತ್ತಾ ಹೋಗು; ಹಿಡಿದಿರು; ಬಿಡದಿರು: he keeps his own course ಅವನು ತನ್ನ ದಾರಿಯನ್ನೇ ಹಿಡಿಯುತ್ತಾನೆ.
  • (ಹಾಸಿಗೆ, ಕೊಠಡಿ, ಮನೆ, ಮೊದಲಾದವನ್ನು) ಬಿಟ್ಟು ಬರದಿರು; (ಹಾಸಿಗೆ ಮೊದಲಾದವುಗಳಲ್ಲೇ) ಇರು.
  • (ಪ್ರತಿಭಟನೆಯನ್ನು ಲೆಕ್ಕಿಸದೆ, ಕುದುರೆಯ ಮೇಲೆ, ಕ್ಷೇತ್ರ, ರಂಗಸ್ಥಳ, ನಿಂತ ನೆಲೆ, ಇತ್ಯಾದಿಯಲ್ಲಿ) ಕದಲದಿರು; ಭದ್ರವಾಗಿರು; ತನ್ನ ಸ್ಥಾನ ಬಿಡದಿರು, ಬದಲಾಯಿಸದಿರು.
  • (ಒಂದು ನಿಯತವಾದ ಸ್ಥಳದಲ್ಲಿ, ಜಾಗದಲ್ಲಿ) ಇಡು; ಇರಿಸು: knives are kept in this drawer ಈ ಸೆಳೆಖಾನೆಯಲ್ಲಿ ಚಾಕುಗಳನ್ನು ಇಟ್ಟಿದೆ.

  • keep
    ನಾಮವಾಚಕ ನುಡಿಗಟ್ಟು
    for keeps (ಆಡುಮಾತು) ಸ್ಥಿರವಾಗಿ; ಶಾಶ್ವತವಾಗಿ; ಖಾಯಂ ಆಗಿ; ಸದಾಕಾಲಕ್ಕೂ.
  • (ಚರಿತ್ರೆ) ಕೋಟೆ; ದುರ್ಗ; ಕೋಟೆಯೊಳಗಣ ಗೋಪುರ, ಸೌಧ, ಮೊದಲಾದ ಸುಭದ್ರ ನೆಲೆ.
  • ಜೀವನೋಪಾಯ; ಬದುಕಲು ಬೇಕಾದ ಆಹಾರ, ಹುಲ್ಲು, ಮೊದಲಾದ ವಸ್ತು; ಅನ್ನ: you don’t earn your keep ನಿನ್ನ ಅನ್ನವನ್ನು ನೀನು ಸಂಪಾದಿಸುತ್ತಿಲ್ಲ.
  • ವಶ; ಒಡೆತನ; ನಿಯಂತ್ರಣ; ಹತೋಟಿ: is in your keep ನಿನ್ನ ಹತೋಟಿಯಲ್ಲಿದೆ.

  • keep-fit
    ಗುಣವಾಚಕ
    (ವ್ಯಾಯಾಮ ಮೊದಲಾದವುಗಳ ವಿಷಯದಲ್ಲಿ) ಜನರನ್ನು ಸುಸ್ಥಿತಿಯಲ್ಲಿ ಮತ್ತು ಆರೋಗ್ಯಕರವಾಗಿ ಇಡುವಂತೆ ರೂಪಿಸಿದ.

    keep-fit
    ನಾಮವಾಚಕ
    ದೇಹದ ಸುಸ್ಥಿತಿ ಮತ್ತು ಆರೋಗ್ಯವನ್ನು ಕಾಪಾಡುವ ದೈನಂದಿನ ವ್ಯಾಯಾಮಗಳು.

    keepable
    ಗುಣವಾಚಕ
  • ಇಟ್ಟುಕೊಳ್ಳಬಹುದಾದ.
  • ರಕ್ಷಿಸಬಹುದಾದ.

  • keeper
    ನಾಮವಾಚಕ
  • ಪಾಲಕ; ಪೋಷಕ; ರಕ್ಷಕ: am I my brother’s keep? ನಾನೇನು ನನ್ನ ಸೋದರನ ಪಾಲಕನೇ?
  • (ವ್ರತ, ಕಾಯಿದೆ, ನಿಯಮ, ಪದ್ಧತಿ, ಸಂಪ್ರದಾಯ, ಹಬ್ಬ, ಮೊದಲಾದವನ್ನು) ಪಾಲಿಸುವವನು; ಪಾಲಕ; ಆಚರಿಸುವವನು.
  • (ಸೆರೆಮನೆ, ಸೆರೆಯಾಳು, ಸಂಸ್ಥೆ, ಕಟ್ಟಡ, ಭೂಮಿ, ಕಾಡು, ಮೊದಲಾದವುಗಳ) ಪಾಲಕ; ಕಾವಲುಗಾರ; ರಕ್ಷಕ; ಉಸ್ತುವಾರಿ ವಹಿಸುವವನು; ನೋಡಿಕೊಳ್ಳುವವನು.
  • = gamekeeper.
  • (ಭೋಜನಶಾಲೆ, ಉಗ್ರಾಣ, ಅಂಗಡಿ, ಮೊದಲಾದವನ್ನು) ಇಟ್ಟಿರುವವನು; ನಡೆಸುವವನು; ಮಾಲೀಕ ಯಾ ವ್ಯವಸ್ಥಾಪಕ.
  • ಜೇನು ಸಾಕಣೆಕಾರ; ಜೇನುಹುಳುಗಳನ್ನು ಸಾಕುವವನು.
  • = wicket-keeper.
  • = goalkeeper.
  • (ಗ್ರಂಥಾಲಯ, ವಾಚನಾಲಯ, ವಸ್ತು ಸಂಗ್ರಹಾಲಯ, ಚಿತ್ರಶಾಲೆ, ಮೊದಲಾದವುಗಳ) ಪಾಲಕ; ವ್ಯವಸ್ಥಾಪಕ; ನಿರ್ವಾಹಕ.
  • ಒತ್ತುಂಗುರ; ತಡೆಯುಂಗುರ; ಕಾಪುಂಗುರ; ಒಂದು ಉಂಗುರವನ್ನು ಭದ್ರಪಡಿಸಲು ತೊಡುವ ಯಾ ತೊಡಿಸುವ ಮತ್ತೊಂದು ಉಂಗುರ, ಮುಖ್ಯವಾಗಿ ಮದುವೆ ಉಂಗುರ.
  • (ಪ್ರಾಚೀನ ಪ್ರಯೋಗ) ಹುಚ್ಚನನ್ನು ನೋಡಿಕೊಳ್ಳುವವನು.
  • (ಕಿವಿ ಚುಚ್ಚಿದ ರಂಧ್ರವು ಮುಚ್ಚಿಕೊಳ್ಳದಂತೆ ಇಡುವ) ಕಿವಿಯುಂಗುರ.
  • ಕೆಟ್ಟುಹೋಗದ, ಕೊಳೆತು ಹೋಗದ ಹಣ್ಣು ಮೊದಲಾದವು.
  • (ಭೌತವಿಜ್ಞಾನ) ಆಯಸ್ಕಾಂತ ರಕ್ಷಕ; ಶಾಶ್ವತ ಆಯಸ್ಕಾಂತದ ಮೇಲೆ ಇಟ್ಟಿರುವ ಮೆದುಕಬ್ಬಿಣದ ಯಾ ಉಕ್ಕಿನ ತುಂಡು.

  • keeping
    ನಾಮವಾಚಕ ನುಡಿಗಟ್ಟು
  • ವಶ; ಪೋಷಣೆ; ರಕ್ಷಣೆ; ಉಸ್ತುವಾರಿ; ಸುಫರ್ದು: left the baby in her keeping ಕೂಸನ್ನು ಆಕೆಯ ವಶದಲ್ಲಿ ಬಿಟ್ಟೆ.
  • (ವ್ರತ, ಹಬ್ಬ, ಕಾಯಿದೆ, ಮೊದಲಾದವುಗಳ) ಆಚರಣೆ; ಪಾಲನೆ; ಅನುಷ್ಠಾನ.
  • ಇಡುವಿಕೆ; ಕಾಪಿಡುವಿಕೆ; ಕೂಡಿಡುವಿಕೆ; ಕಟ್ಟಿಡುವಿಕೆ; ಮುಂದಿನ ಬಳಕೆಗಾಗಿ ಯಾವುದನ್ನೇ ರಕ್ಷಿಸಿ, ಉಳಿಸಿ, ಇಡುವುದು.
  • ಜೀವನೋಪಾಯ; ಜೀವನಾಧಾರ: provided good keeping for the destitutes ನಿರ್ಗತಿಕರಿಗಾಗಿ ಜೀವನೋಪಾಯವನ್ನು ಒದಗಿಸಿಕೊಟ್ಟೆ, ಕಲ್ಪಿಸಿಕೊಟ್ಟೆ.
  • ಅಚ್ಚುಕಟ್ಟಾದ, ಒಪ್ಪವಾದ, ಭದ್ರವಾದ, ಜೋಪಾನವಾದ, ಚೊಕ್ಕಟವಾದ – ಸ್ಥಿತಿ: the house is in good keeping ಮನೆಯು ಒಪ್ಪವಾದ ಸ್ಥಿತಿಯಲ್ಲಿದೆ.
  • (ಹಿಂದೆ, ಮುಖ್ಯವಾಗಿ ಚಿತ್ರಕಲೆಯ ವಿಷಯದಲ್ಲಿ) ಹೊಂದಿಕೆ; ಸಾಮರಸ್ಯ; ಅನುರೂಪತೆ; ಯಾವುದಕ್ಕೇ ಅನುಗುಣವಾಗಿರುವುದು.

  • keepsake
    ನಾಮವಾಚಕ
    ನೆನಪಿನ ವಸ್ತು; ಅಭಿಜ್ಞಾನ; ಒಲವಿನ ಕುರುಹು; ಕೊಟ್ಟವರ ಕುರುಹಾಗಿ, ನೆನಪಿಗಾಗಿ ಇಟ್ಟುಕೊಳ್ಳುವ ವಸ್ತು.

    keeshond
    ನಾಮವಾಚಕ
  • ಚೀನಾದ ಚೌ ಜಾತಿಯ, ದೊಡ್ಡ ಪೊಮರೇನಿಯನ್‍ ನಾಯಿಯನ್ನು ಹೋಲುವ, ದಟ್ಟವಾದ ಗುಂಗುರು ಮೈಗೂದಲುಳ್ಳ ಒಂದು ನಾಯಿ. Figure: keeshond
  • ಅಂತಹ ನಾಯಿ ಜಾತಿ.

  • kef
    ನಾಮವಾಚಕ
  • (ಭಂಗಿ ಮೊದಲಾದವುಗಳಿಂದ ಉಂಟಾದ) ಮತ್ತು; ಮಂಪರ.
  • ಆಲಸ್ಯಸುಖ; ಆಲಸ್ಯಾನಂದ; ಸೋಮಾರಿತನದ ಸುಖ, ಸುಖಾನುಭವ.
  • (ಮತ್ತು ತಂದುಕೊಳ್ಳಲು ಸೇವಿಸುವ ಭಂಗಿ ಮೊದಲಾದ) ಮಾದಕ ವಸ್ತು.


  • logo