logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ice-foot
ನಾಮವಾಚಕ
ನೀರ್ಗಲ್ಲ ಪಟ್ಟಿ; ಧ್ರುವ ಪ್ರದೇಶದ ಅಂಚಿನುದ್ದಕ್ಕೂ ಗಡ್ಡೆ ಕಟ್ಟಿರುವ ಹಿಮದ ಪಟ್ಟಿ.

ice-house
ನಾಮವಾಚಕ
ಹಿಮಾಗಾರ; ಮಂಜುಗಡ್ಡೆ ಮನೆ; ಮಂಜುಗಡ್ಡೆಯನ್ನು ಶೇಖರಿಸಿಡಲು ಸ್ವಲ್ಪವೋ ಪೂರ್ತಿಯಾಗಿಯೋ ನೆಲದ ಕೆಳಗೆ ಕಟ್ಟಿದ ಕಟ್ಟಡ.

ice-machine
ನಾಮವಾಚಕ
ಐಸ್‍ಯಂತ್ರ; ಕೃತಕವಾಗಿ ಮಂಜುಗಡ್ಡೆಯನ್ನು ತಯಾರಿಸುವ ಯಂತ್ರ.

ice-pack
ನಾಮವಾಚಕ
  • ಸಮುದ್ರದಲ್ಲಿ ದಪ್ಪ ಮಂಜುಗಡ್ಡೆ ಚೂರುಗಳು ತೇಲುತ್ತಿರುವ ವಿಶಾಲಪ್ರದೇಶ.
  • ಐಸ್‍ಚೀಲ; ಹಿಮಚೀಲ; ದೇಹವನ್ನು ತಣ್ಣಗಾಗಿಸಲು ಬಳಸುವ ಹಿಮಗಡ್ಡೆ ತುಂಬಿದ ಚೀಲ ಮೊದಲಾದವು.
  • (ವೈದ್ಯಶಾಸ್ತ್ರ) ಹಿಮತೊಟ್ಟಿ; ಶೀತಚಿಕಿತ್ಸೆಯಲ್ಲಿ ರೋಗಿಯನ್ನು ಮಲಗಿಸಿಡಲು ಬಳಸುವ ಮಂಜುಗಡ್ಡೆ ತುಂಬಿದ ಸ್ನಾನದ ತೊಟ್ಟಿ ಮೊದಲಾದವು.

  • ice-pick
    ನಾಮವಾಚಕ
  • ಹಿಮಪಿಕಾಸಿ; ಹಿಮವನ್ನು ಕೆತ್ತಲು ಬಳಸುವ ಎಲೆಗುದ್ದಲಿ.
  • ಐಸ್‍ಸೂಜಿ; ಹಿಮಶಲಾಕೆ; ಮಂಜುಗಡ್ಡೆಯನ್ನು ಚೂರುಮಾಡಲು ಬಳಸುವ ಹಿಡಿಕೆಯಿರುವ ದಪ್ಪಸೂಜಿ.

  • ice-plant
    ನಾಮವಾಚಕ
    ಹಿಮಗಿಡ; ಮೆಸೆಂಬ್ರಿಯಾಂತಮಮ್‍ ಕ್ರಿಸ್ಟಲಿನಂ ಕುಲಕ್ಕೆ ಸೇರಿದ, ಎಲೆಗಳ ಮೇಲೆ ಮಂಜುಗಡ್ಡೆ ಹರಳುಗಳಿರುವಂತೆ ಕಾಣುವ ಒಂದು ಗಿಡ.

    ice-run
    ನಾಮವಾಚಕ
  • ನೀರ್ಗಲ್ಲ ಜಾಡು; ಹಿಮದಾರಿ; ಹಿಮಪಥ; ಜಾರುಬಂಡಿಗಳಿಗಾಗಿ ಹಿಮದ ಮೇಲೆ ಮಾಡಿದ ಕೃತಕ ಹಾದಿ.
  • ಹಿಮಭಂಗ; ನೀರ್ಗಲ್ಲೊಡೆತ; ಹಿಮಗಟ್ಟಿದ ನದಿಯಲ್ಲಿ ವಸಂತದ ಯಾ ಬೇಸಿಗೆಯ ಪ್ರಾರಂಭ ಕಾಲದಲ್ಲಿ, ಹಿಮದ ಗಡ್ಡೆಗಳು ಬೇಗ ಒಡೆದು ಕರಗುವುದು.

  • ice-sheet
    ನಾಮವಾಚಕ
    = ice-cap.

    ice-show
    ನಾಮವಾಚಕ
    ಐಸ್‍ಷೋ; ನೀರ್ಗಲ್ಲ ಪ್ರದರ್ಶನ; ನೀರ್ಗಲ್ಲ ಮೇಲೆ ಸ್ಕೇಟರುಗಳು ಜಾರಾಟವಾಡಿ ಒದಗಿಸುವ ಮನರಂಜನೆ.

    ice-skate
    ನಾಮವಾಚಕ
    ಐಸ್‍ಸ್ಕೇಟ್‍; ನೀರ್ಗಲ್ಲ ಮೇಲೆ ಜಾರಲು ಅನುಕೂಲವಾಗುವಂತೆ ಅಡಿಯಲ್ಲಿ ಅಲಗಿರುವ ಜಾರುಮೆಟ್ಟು.


    logo