logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ideological
ಗುಣವಾಚಕ
ಸೈದ್ಧಾಂತಿಕ; ತಾತ್ತ್ವಿಕ.

ideologist
ನಾಮವಾಚಕ
ಸಿದ್ಧಾಂತಿ; ಯಾವುದೇ ಪಕ್ಷ ಮೊದಲಾದವುಗಳ ತತ್ತ್ವ, ನೀತಿ, ಮೊದಲಾದವನ್ನು ನಿರೂಪಿಸುವವನು.

ideologue
ನಾಮವಾಚಕ
  • ಆದರ್ಶವಾದಿ; ಸಿದ್ಧಾಂತವಾದಿ.
  • ಭಾವನಾನಿವಾಸಿ; ಭಾವನಾಲೋಕದಲ್ಲಿ, ಕಲ್ಪನಾಪ್ರಪಂಚದಲ್ಲಿ ಇರುವವನು.
  • ಸಿದ್ಧಾಂತಬದ್ಧ; ಸಿದ್ಧಾಂತಾನುಯಾಯಿ; ಒಂದು ವಿಚಾರವಾದಕ್ಕೆ, ಸಿದ್ಧಾಂತಕ್ಕೆ-ಕಟ್ಟುಬಿದ್ದವ, ಅಂಟಿಕೊಂಡವ.

  • ideology
    ನಾಮವಾಚಕ
  • (ಪ್ರಾಚೀನ ಪ್ರಯೋಗ) ಭಾವನಾಶಾಸ್ತ್ರ; ಭಾವನೆಗಳ, ವಿಚಾರಗಳ ಉತ್ಪತ್ತಿ, ಲಕ್ಷಣ, ಸ್ವಭಾವಗಳನ್ನು ಕುರಿತ ಶಾಸ್ತ್ರ.
  • ಭಾವನಾತ್ಮಕ ಊಹೆ, ಚಿಂತನೆ, ಕಲ್ಪನೆ.
  • (ಒಬ್ಬ ವ್ಯಕ್ತಿಯ ಯಾ ವರ್ಗದ) ಚಿಂತನ ಮಾರ್ಗ; ಆಲೋಚನಾಸರಣಿ; ಯೋಚನಾವಿಧಾನ.
  • ಸಿದ್ಧಾಂತ; ತತ್ತ್ವ; ವಾದ; ಯಾವುದೇ ಆರ್ಥಿಕ ಯಾ ರಾಜಕೀಯ ವಾದದ ಯಾ ವ್ಯವಸ್ಥೆಯ ಮೂಲಭೂತ ಭಾವನೆಗಳು: Fascist ideology ಹ್ಯಾಸಿಸ್ಟ್‍ ಸಿದ್ಧಾಂತ. Marxist ideology ಮಾರ್ಕ್ಸ್‍ವಾದ.

  • ides
    ನಾಮವಾಚಕ
    (ಬಹುವಚನ) ಹದಿಮೂರನೆಯ ಯಾ ಹದಿನೈದನೆಯ ತಾರೀಖು; ಮಾರ್ಚಿ, ಮೇ, ಜುಲೈ ಮತ್ತು ಅಕ್ಟೋಬರ್‍ ತಿಂಗಳುಗಳ $15$ನೆಯ ತಾರೀಖು, ಉಳಿದ ತಿಂಗಳುಗಳ $13$ನೆಯ ತಾರೀಖು.

    idiocy
    ನಾಮವಾಚಕ
  • ಹೆಡ್ಡತನ; ಶುದ್ಧ ತಿಳಿಗೇಡಿತನ; ಪೆದ್ದತನ; ಗಾಂಪತನ; ಮುಟ್ಠಾಳತನ.
  • ಅತಿ ಮಂದಬುದ್ಧಿ; ತೀರ ಬುದ್ಧಿಶೂನ್ಯತೆ; ಅತಿಯಾದ ಮಾನಸಿಕ ದೌರ್ಬಲ್ಯ.

  • idiolect
    ನಾಮವಾಚಕ
    ವ್ಯಕ್ತಿಭಾಷೆ; ಒಬ್ಬ ವ್ಯಕ್ತಿಯು ಬಳಸುವ ಭಾಷೆ.

    idiom
    ನಾಮವಾಚಕ
  • (ಒಂದು ಜನದ, ದೇಶದ) ಭಾಷೆ; ನುಡಿ.
  • ಭಾಷಾವೈಶಿಷ್ಟ್ಯ; ಭಾಷೆಯ ಯಾ ನುಡಿಯ ವೈಲಕ್ಷಣ್ಯ.
  • ನುಡಿಗಟ್ಟು; ಭಾಷಾಸಂಪ್ರದಾಯ; ಭಾಷಾಮರ್ಯಾದೆ; ಭಾಷೆಯ ಜಾಯಮಾನ; ಒಂದು ಭಾಷೆಯ ಯಾ ವ್ಯಕ್ತಿಯ ವಿಶಿಷ್ಟ ಲಕ್ಷಣವಾಗಿರುವ ಭಾಷಾಪ್ರಯೋಗದ ರೀತಿ, ಲಕ್ಷಣ, ಪದ್ಧತಿ.
  • ನುಡಿಗಟ್ಟು; ಯಾವ ಪದಪುಂಜವೊಂದರ ಅರ್ಥವು ಅದರಲ್ಲಿ ಸೇರಿರುವ ಪ್ರತ್ಯೇಕ ಪದಗಳ ಅರ್ಥಗಳ ಸಂಯೋಗದಿಂದ ಜನಿಸಿರದೆ, ಅವುಗಳಿಗಿಂತ ಭಿನ್ನವಾದ ಒಟ್ಟರ್ಥವೊಂದನ್ನು ನೀಡುತ್ತ, ಭಾಷೆಯ ರೂಢಿಪ್ರಯೋಗಕ್ಕೆ ಸಮ್ಮತವಾಗಿರುತ್ತದೆಯೋ ಅಂಥ ಪದಪುಂಜ.

  • idiomatic
    ಗುಣವಾಚಕ
  • ಭಾಷಾನುಗುಣವಾದ; ಭಾಷಾನುರೂಪವಾದ; ಆಯಾ ಭಾಷೆಗೆ, ಭಾಷಾಸಂಪ್ರದಾಯಕ್ಕೆ, ಭಾಷಾ ಪ್ರಯೋಗಕ್ಕೆ-ಅನುಗುಣವಾದ.
  • (ಒಂದು ಭಾಷೆಯ) ನುಡಿಗಟ್ಟಿಗೆ ಸಂಬಂಧಿಸಿದ ಯಾ ಅನುಗುಣವಾದ.

  • idiomatically
    ಕ್ರಿಯಾವಿಶೇಷಣ
  • ಭಾಷಾ ಸಂಪ್ರದಾಯದಂತೆ.
  • ನುಡಿಗಟ್ಟಿಗೆ ಅನುಗುಣವಾಗಿ.


  • logo