logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

identify
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ತಾದಾತ್ಮ್ಯಗೊಳಿಸು; (ವಸ್ತುವೊಂದನ್ನು) (ಮತ್ತೊಂದರೊಡನೆ) ಅಭಿನ್ನವೆಂದು, ಒಂದೇ ಎಂದು, ಅನನ್ಯವೆಂದು, ಬೇರೆಯಲ್ಲವೆಂದು-ಪರಿಗಣಿಸು, ಪ್ರತಿಪಾದಿಸು.
  • (ವ್ಯಕ್ತಿಗೆ ತನಗೆ ಪಕ್ಷ, ನೀತಿ, ಮೊದಲಾದವುಗಳೊಡನೆ) ಬೇರ್ಪಡಿಸಲಾಗದಂತೆ ಅಥವಾ ಬಹಳ ನಿಕಟವಾಗಿ – ಸಂಬಂಧ ಹೊಂದಿಸು, ಸಂಪರ್ಕ ಕಲ್ಪಿಸು: he refused to identify himself with the new policy ಹೊಸ ಧೋರಣೆಯೊಂದಿಗೆ ಸಂಬಂಧ ಹೊಂದಿರಲು ಅವನು ನಿರಾಕರಿಸಿದ.
  • ಗುರುತಿಸು; ಸ್ವರೂಪ ಪತ್ತೆಹಚ್ಚು: can you identify your watch? ನಿನ್ನ ಗಡಿಯಾರವನ್ನು ಗುರುತಿಸಬಲ್ಲೆಯಾ?
  • ಪರಿಶೀಲಿಸಿ ಯಾ ಪರೀಕ್ಷಿಸಿ – ಗುರುತಿಸು, ಆಯು, ಆಯ್ಕೆ ಮಾಡು: identify the best method of producing steel ಉಕ್ಕನ್ನು ತಯಾರಿಸುವ ಶ್ರೇಷ್ಠ ವಿಧಾನವನ್ನು ಗುರುತಿಸು, ಆಯು.

  • Identikit
    ನಾಮವಾಚಕ
    ರಚಿತ ಚಿತ್ರ; ಚಹರೆ ಚಿತ್ರ; ಸಾಕ್ಷಿಗಳ ಹೇಳಿಕೆಗಳಿಂದ ದೊರೆತ ಚಹರೆಗಳ ಆಧಾರದ ಮೇಲೆ ಸಿದ್ಧಪಡಿಸಿದ ವ್ಯಕ್ತಿಯ (ಮುಖ್ಯವಾಗಿ ಪೊಲೀಸಿನವರಿಗೆ ಬೇಕಾದ ವ್ಯಕ್ತಿಯ) ಚಿತ್ರ.

    identity
    ನಾಮವಾಚಕ
  • ಅನನ್ಯತೆ; ಅಭಿನ್ನತೆ; ಅಭೇದ; ಅದೇ ಆಗಿರುವುದು; ಬೇರೆಯಲ್ಲದಿರುವುದು; ಒಂದೇ ಆಗಿರುವುದು: the identity of the fingerprints on the gun proved that he was the killer ಬಂದೂಕಿನ ಮೇಲಿದ್ದ ಕೈಬೆರಳಿನ ಗುರುತುಗಳು (ಅವನ ಬೆರಳು ಗುರುತುಗಳೂ) ಒಂದೇ ಆಗಿದ್ದುದು ಅವನು ಹಂತಕನೆಂಬುದನ್ನು ರುಜುವಾತು ಮಾಡಿತು.
  • ಸ್ವವ್ಯಕ್ತಿತ್ವ; ಸ್ವಸ್ವರೂಪ: he doubted his own identity ಅವನು ಸ್ವಸ್ವರೂಪದ ಬಗೆಗೇ ಸಂಶಯ ಪಟ್ಟ.
  • (ವ್ಯಕ್ತಿ, ವಸ್ತು, ಮೊದಲಾದವುಗಳ) ಗುರುತು; ಚಹರೆ: identity disc ಗುರುತಿಸುವ ಬಿಲ್ಲೆ.
  • (ಬೀಜಗಣಿತ) ಅನನ್ಯತೆ; ಬೀಜಗಣಿತ ಸಂಕೇತದ ಎಲ್ಲ ಮೌಲ್ಯಗಳಿಗೂ ಸಿಂಧುವಾಗಿರುವ ಸಮೀಕರಣ, ಉದಾಹರಣೆಗೆ $(x+1)^2=x^2+2x+1$.
  • (ಗಣಿತ) ತಾದಾತ್ಮ್ಯ; ಅನನ್ಯತೆ; (ಯಾವುದೇ ಪರಿಕರ್ಮಕ್ಕೆ ಸಂಬಂಧಿಸಿದಂತೆ) ಗಣದ ಇತರ ಧಾತುಗಳೊಡನೆ ವರ್ತಿಸಿ ಅವುಗಳನ್ನು ಬದಲಾಯಿಸದೆ ಹಾಗೆಯೇ ಉಳಿಸುವ ಧಾತು.

  • identity card
    ನಾಮವಾಚಕ
    ಗುರುತಿನ ಕಾರ್ಡು; ಹೆಸರು, ಸಂಖ್ಯೆ, ಮೊದಲಾದವನ್ನುಳ್ಳ ಕಾರ್ಡು, ಚೀಟಿ.

    identity parade
    ನಾಮವಾಚಕ
    = identification parade.

    ideogram
    ನಾಮವಾಚಕ
    ಭಾವಲಿಪಿ; ವಸ್ತುವಿನ ಹೆಸರನ್ನು ಯಾ ಹೆಸರಿನ ಅಕ್ಷರಗಳನ್ನು ಯಾ ಧ್ವನಿಗಳನ್ನು ವ್ಯಕ್ತಪಡಿಸದೆ ನೇರವಾಗಿ ಭಾವವನ್ನು ಯಾ ವಸ್ತುವನ್ನು ಸಂಕೇತಿಸುವ ಲಿಪಿ, ಉದಾಹರಣೆಗೆ ಚೀನೀ ಲಿಪಿ, ಅಂಕಿಗಳು.

    ideograph
    ನಾಮವಾಚಕ
    = ideogram.

    ideographic
    ಗುಣವಾಚಕ
    ಭಾವ ಲಿಪಿಯ; ಭಾವಲಿಪಿಗೆ ಸಂಬಂಧಿಸಿದ.

    ideographical
    ಗುಣವಾಚಕ
    = ideographic.

    ideography
    ನಾಮವಾಚಕ
    ಭಾವಲಿಪಿ ಬರಹ; ಉಚ್ಚಾರಣಾ ಸಂಕೇತಗಳಿಗೆ ಬದಲಾಗಿ ರೇಖನ ಸಂಕೇತಗಳ ಮೂಲಕ ಭಾವನೆಗಳನ್ನು ನಿರೂಪಿಸುವುದು.


    logo