logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

idealist
ನಾಮವಾಚಕ
  • ಆದರ್ಶವಾದಿ; ಉದಾತ್ತವಾದ ಧ್ಯೇಯದಲ್ಲಿ ನಿಷ್ಠೆಯುಳ್ಳವನು.
  • (ತತ್ತ್ವಶಾಸ್ತ್ರ) ವಿಜ್ಞಾನವಾದಿ; ಭಾವನಾವಾದಿ.
  • ಆದರ್ಶ ನಿರೂಪಕ; ವಸ್ತುಗಳು ನಿಜವಾಗಿ ಇರುವಂತೆ ನಿರೂಪಿಸುವ ಬದಲು ಇರಬೇಕಾದಂತೆ ಚಿತ್ರಿಸುವವ.
  • ಕನಸಿಗ; ಕಾಲ್ಪನಿಕ ಪ್ರಪಂಚದಲ್ಲಿ ವಿಹರಿಸುವವನು; ವ್ಯವಹಾರ ಜ್ಞಾನವಿಲ್ಲದವನು.

  • idealistic
    ಗುಣವಾಚಕ
  • ಆದರ್ಶಾತ್ಮಕ:
    1. ಆದರ್ಶ ಲಕ್ಷಣದ, ಸ್ವರೂಪದ-ಗುಣಗಳಿರುವ.
    2. ಆದರ್ಶವಾದಿಯ; ಆದರ್ಶವಾದಿಗೆ ಸಂಬಂಧಿಸಿದ.
  • ಆದರ್ಶನಿಷ್ಠ; ಆದರ್ಶಗಳಲ್ಲಿ ಶ್ರದ್ಧೆಯಿರುವ.
  • ಭಾವನಾತ್ಮಕ.
  • ಕಲ್ಪಿತ ಪ್ರಪಂಚಕ್ಕೆ ಸೇರಿದ; ವ್ಯಾವಹಾರಿಕ ಜಗತ್ತಿಗೆ ದೂರವಾದ.

  • ideality
    ನಾಮವಾಚಕ
  • ಆದರ್ಶತೆ; ಆದರ್ಶವಾಗಿರುವಿಕೆ.
  • ಕಲ್ಪನಾಶಕ್ತಿ; ವಿಭಾವನಾಶಕ್ತಿ.
  • ಆದರ್ಶೀಕರಣತೆ; ಆದರ್ಶೀಕರಿಸುವ ಶಕ್ತಿ, ಸಾಮರ್ಥ್ಯ.
  • (ತತ್ತ್ವಶಾಸ್ತ್ರ) ಭಾವನಾಮಾತ್ರತೆ; ವಾಸ್ತವದಲ್ಲಿ ಇಲ್ಲದೆ ಕೇವಲ ಭಾವನೆಯ ರೂಪದಲ್ಲಿ ಮಾತ್ರ ಇರುವಂಥದು.

  • idealization
    ನಾಮವಾಚಕ
  • ಆದರ್ಶೀಕರಣ.
  • ಆದರ್ಶೀಕರಿಸಿದುದು; ಆದರ್ಶೀಕೃತವಾದುದು; ಆದರ್ಶವೆಂದು ರೂಪಿಸಲಾದ ವಿಷಯ, ವಸ್ತು, ಮೊದಲಾದವು.

  • idealize
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಆದರ್ಶೀಕರಿಸು:
    1. ಆದರ್ಶವಾಗಿ ಮಾಡು.
    2. ಆದರ್ಶವಾಗಿ ಪರಿಭಾವಿಸು, ಪರಿಗಣಿಸು.
  • ಆದರ್ಶ ಪರಿಪೂರ್ಣತೆಗೆ ಯಾ ಶ್ರೇಷ್ಠತೆಗೆ ಏರಿಸು.

  • ideally
    ಕ್ರಿಯಾವಿಶೇಷಣ
  • ಆದರ್ಶಪ್ರಾಯವಾಗಿ; ಆದರ್ಶಕ್ಕನುಗುಣವಾಗಿ; ಆದರ್ಶರೂಪದಲ್ಲಿ; ಪರಿಪೂರ್ಣವಾಗಿ.
  • ಕಲ್ಪನೆಯಲ್ಲಿ; ಭಾವನೆಯಲ್ಲಿ.
  • ತಾತ್ತ್ವಿಕವಾಗಿ; ಸೈದ್ಧಾಂತಿಕವಾಗಿ.

  • ideate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಕಲ್ಪನೆ ಮಾಡು; ಕಲ್ಪಿಸು; ಭಾವಿಸು: a state which Plato ideated ಪ್ಲೇಟೋ ಕಲ್ಪಿಸಿದ ರಾಜ್ಯ. ಕಲ್ಪನೆಗಳನ್ನು ರೂಪಿಸು; ಭಾವನೆಗಳನ್ನು ಕಲ್ಪಿಸು.

    ideation
    ನಾಮವಾಚಕ
    ಭಾವನೆ; ಭಾವಕಲ್ಪನೆ; ಪ್ರತ್ಯಕ್ಷವಲ್ಲದ ವಿಷಯಗಳನ್ನು ಮನಸ್ಸಿನಲ್ಲಿ ಕಲ್ಪಿಸುವುದು, ಮಾನಸಿಕವಾಗಿ ಭಾವಿಸುವುದು.

    ideational
    ಗುಣವಾಚಕ
    ಭಾವಕಲ್ಪನೆಯ; ಭಾವನೆಗಳಿಗೆ ಯಾ ಮಾನಸಿಕ ಕಲ್ಪನೆಗಳಿಗೆ ಸಂಬಂಧಿಸಿದ.

    idee fixe
    ನಾಮವಾಚಕ
    ಗೀಳು; ಗಿಲಿ; ಭ್ರಮೆ; ಭ್ರಾಂತಿ; ಒಂದೇ ವಿಷಯದ ಬಗ್ಗೆ ಮನಸ್ಸನ್ನು ಪೂರ್ತಿಯಾಗಿ ಆವರಿಸಿರುವ ಭಾವ, ಭಾವನೆ.


    logo