logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ide
ನಾಮವಾಚಕ
ಆಹಾರವಾಗಿ ಬಳಸುವ ಒಂದು ಬಗೆಯ ಸೀನೀರು ಈನು.

idea
ನಾಮವಾಚಕ ನುಡಿಗಟ್ಟು
  • ಆದಿ ಯಾ ಆರ್ಷ ಪ್ರತೀಕ; ಮೂಲ ಮಾದರಿ; ಸುತ್ತಲ ಪ್ರಪಂಚದಲ್ಲಿ ನಾವು ಕಾಣುವ ಯಾವುದೇ ವರ್ಗದ ನಿರ್ಜೀವ ಯಾ ಸಜೀವ ವಸ್ತುವಿನ ಲಕ್ಷಣಗಳಿಂದ ಭಿನ್ನವಾಗಿದ್ದು ಆ ವರ್ಗದ ಆದರ್ಶ ಲಕ್ಷಣಗಳನ್ನು ಹೊಂದಿದೆಯೆನ್ನಲಾದ, ಆ ವರ್ಗದ ಮೂಲ ಮಾದರಿ ಯಾ ಆರ್ಷೇಯ ಪ್ರತೀಕ.
  • (ಗುರಿಯಾಗಿಟ್ಟುಕೊಳ್ಳಬೇಕಾದುದು, ಸೃಷ್ಟಿಸಬೇಕಾದುದು, ಮೊದಲಾದವುಗಳ) ಕಲ್ಪನೆ; ಭಾವನೆ; ಆಲೋಚನೆ.
  • ಉದ್ದೇಶ; ಅಭಿಪ್ರಾಯ; ಯೋಜನೆ: the idea of becoming an engineer ಎಂಜಿನಿಯರಾಗಬೇಕೆಂಬ ಉದ್ದೇಶ.
  • ಮನೋಭಾವನೆ; ಮನಸ್ಸಿಗೆ ಹೊಳೆದ ಕಲ್ಪನೆ.
  • ಆಲೋಚನಾ ವಿಧಾನ; ಆಲೋಚನೆಯ-ಮಾರ್ಗ, ರೀತಿ, ಧೋರಣೆ.
  • ಕಲ್ಪನೆ; (ಅಸ್ಪಷ್ಟ) ಭಾವನೆ; ಎಣಿಕೆ: the idea of his doing such a thing ಅವನು ಇಂಥ ಕೆಲಸ ಮಾಡುವನೆಂಬ ಎಣಿಕೆ. I had no idea you were there ನೀನು ಅಲ್ಲಿರುವೆ ಎಂಬ ಕಲ್ಪನೆಯೇ ನನಗಿರಲಿಲ್ಲ.
  • (ಪ್ಲೇಟೋವಿನ ತತ್ತ್ವ) ಆದರ್ಶ ರೂಪ; ಯಾವ ವರ್ಗದಲ್ಲಾದರೂ ಇರುವ ಪ್ರತ್ಯೇಕ ವಸ್ತುಗಳು ಯಾವುದರ ಅಪೂರ್ಣ ಪ್ರತಿಗಳಾಗಿರುವುವೋ ಆ ಚಿರಸ್ಥಾಯಿಯಾದ ಆದರ್ಶ ರೂಪ.
  • (ಡೇಕಾರ್ಟ್‍, ಲಾಕ್‍ ಇವರ ಸಿದ್ಧಾಂತಗಳಲ್ಲಿ ಯಾ ಮಾನಸಿಕ ಅರಿವಿನ) ಪ್ರತ್ಯಕ್ಷ ವಿಷಯ.
  • (ಕ್ಯಾಂಟ್‍) ಪರಾಸತ್ತೆ; ಅನುಭವಾತೀತವಾದ ಮತ್ತು ಚಿಂತನದ ಶುದ್ಧ ತರ್ಕಕ್ಕೆ ಮಾತ್ರ ಗೋಚರವಾದ ವಿಷಯ.
  • (ಹೆಗೆಲ್‍) (ವ್ಯಾವಹಾರಿಕ ಸತ್ಯವೆಲ್ಲವೂ ಯಾವುದರ ಅಭಿವ್ಯಕ್ತಿಯೋ ಆ) ಪಾರಮಾರ್ಥಿಕ ಸತ್ಯ.

  • idea'd
    ಗುಣವಾಚಕ
    = ideaed.

    ideaed
    ಗುಣವಾಚಕ
    (ಒಂದು ನಿರ್ದಿಷ್ಟ ರೀತಿಯ, ವಿಶಿಷ್ಟ ಪ್ರಮಾಣದ) ಕಲ್ಪನೆ, ವಿಚಾರ, ಆಲೋಚನೆ, ಯೋಜನೆ, ಮನೋಭಾವನೆ, ಉದ್ದೇಶ, ಅಭಿಪ್ರಾಯ, ಧ್ಯೇಯ – ಇರುವ ಯಾ ಅಂಥವುಗಳನ್ನು ಉಳ್ಳ, ಹೊಂದಿದ: a one ideaed man ಏಕೈಕ ಕಲ್ಪನೆಯ ಮನುಷ್ಯ.

    ideal
    ಗುಣವಾಚಕ
  • ಆದರ್ಶಪ್ರಾಯ(ವಾದ); ಆದರ್ಶ ಸ್ವರೂಪದ; ಪರಿಪೂರ್ಣ; ಪರಮಶ್ರೇಷ್ಠ; ಅತ್ಯುಚ್ಚ ಕಲ್ಪನೆಗೆ ಅನುರೂಪವಾಗಿರುವ: ideal beauty ಆದರ್ಶ ಸೌಂದರ್ಯ.
  • ಉತ್ಕೃಷ್ಟ; ಅತ್ಯುತ್ತಮ: an ideal spot for a home ಮನೆಗೆ ಉತ್ಕೃಷ್ಟವಾದ ಜಾಗ.
  • ಭಾವಪ್ರತೀಕವಾಗಿರುವ; ಕಲ್ಪನೆಯ ಮೂರ್ತರೂಪವಾದ.
  • ಕಲ್ಪನಾ ಮಾತ್ರದ; ಭಾವನಾ ಮಾತ್ರದ; ಕೇವಲ ಕಲ್ಪನೆಯ; ಭಾವನೆಯಲ್ಲಿ, ಕಲ್ಪನೆಯಲ್ಲಿ – ಮಾತ್ರವಿರುವ; ವಾಸ್ತವಿಕವಲ್ಲದ; ಕೇವಲ – ಆದರ್ಶಪ್ರಾಯವಾದ, ಕಲ್ಪನಾಸ್ವರೂಪದ: an ideal marriage ಕೇವಲ ಆದರ್ಶಪ್ರಾಯವಾದ ವಿವಾಹ.
  • (ಪ್ಲೇಟೋವಿನ ಸಿದ್ಧಾಂತದ) ಮೂಲರೂಪಗಳ; ಆದರ್ಶ ರೂಪಗಳ; ಆದರ್ಶರೂಪಗಳಿಗೆ ಸಂಬಂಧಿಸಿದ.
  • ಅನುಕೂಲವಾದ; ಪ್ರಯೋಜನಕರ; ಉತ್ತಮ: it would be ideal if she could accompany us to look after the children ಮಕ್ಕಳನ್ನು ನೋಡಿಕೊಳ್ಳಲು ಅವಳು ನಮ್ಮ ಸಂಗಡ ಬರುವುದಕ್ಕಾದರೆ ಅದು ಬಹಳ ಅನುಕೂಲವಾಗಿರುತ್ತದೆ.

  • ideal
    ನಾಮವಾಚಕ
  • ಪರಿಪೂರ್ಣ ಮಾದರಿ; ನಿರ್ದಿಷ್ಟ ಮಾದರಿ; ನ್ಯೂನತೆಯಿಲ್ಲದ ಮಾದರಿ.
  • ಆದರ್ಶ; ಅನುಕರಣೀಯ ವಸ್ತು, ವ್ಯಕ್ತಿ; ಅನುಕರಣಕ್ಕೆ ಆದರ್ಶವೆಂದು ಇಟ್ಟುಕೊಂಡ ವಿಷಯ, ವ್ಯಕ್ತಿ.
  • (ಸಾಧಿಸಬೇಕಾದ, ಗುರಿಯಾಗಿಟ್ಟುಕೊಳ್ಳುವ) ಧ್ಯೇಯ; ಆದರ್ಶ.

  • ideal gas
    ನಾಮವಾಚಕ
    (ಭೌತವಿಜ್ಞಾನ) ಆದರ್ಶ ಅನಿಲ; ಅಣುಗಳ ನಡುವೆ ಆಕರ್ಷಣೆ ಇಲ್ಲದ, ಆದ್ದರಿಂದ ಬಾಯ್ಲ್‍ ಮತ್ತು ಚಾರ್ಲ್ಸ್‍ – ಇವರ ನಿಯಮಗಳು ಸಂಪೂರ್ಣವಾಗಿ ಅನ್ವಯವಾಗುವ ಅನಿಲ.

    idealess
    ಗುಣವಾಚಕ
    ಕಲ್ಪನಾರಹಿತ; ಆಲೋಚನಾಶೂನ್ಯ; ಯಾವುದೇ ಕಲ್ಪನೆ, ವಿಚಾರ, ಆಲೋಚನೆ, ಭಾವನೆ, ಯೋಜನೆ, ಮನೋಭಾವನೆ, ಉದ್ದೇಶ, ಮೊದಲಾದವುಗಳಿಲ್ಲದ.

    idealise
    ಸಕರ್ಮಕ ಕ್ರಿಯಾಪದ
    = idealize.

    idealism
    ನಾಮವಾಚಕ
  • ಆದರ್ಶೀಕರಣ ಪ್ರವೃತ್ತಿ; ವಸ್ತುಗಳನ್ನು ಆದರ್ಶರೂಪದಲ್ಲಿ ಚಿತ್ರಿಸುವ, ನಿರೂಪಿಸುವ ಮನಸ್ಸಿನ ವೃತ್ತಿ.
  • (ಕಲೆ, ಸಾಹಿತ್ಯದ ವಿಷಯಗಳ) ವಿಭಾವನಾತ್ಮಕ ನಿರೂಪಣೆ; ಕಲ್ಪನಾತ್ಮಕ ಪ್ರತಿಪಾದನೆ.
  • ಆದರ್ಶಗಳ-ಕಲ್ಪನೆ, ರೂಪಣ.
  • ಆದರ್ಶಗಳ-ಅನುಷ್ಠಾನ, ಅನುಸರಣೆ.
  • (ತತ್ತ್ವಶಾಸ್ತ್ರ) ಭಾವನಾವಾದ; ವಿಜ್ಞಾನವಾದ; ಪ್ರತ್ಯಯವಾದ; ಇಂದ್ರಿಯಗೋಚರವಾಗುವ ಬಾಹ್ಯ ವಸ್ತುಗಳು ವಾಸ್ತವವಾಗಿ ಭಾವನಾಮಯವಾದವು ಎಂಬ ಸಿದ್ಧಾಂತ.


  • logo