logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

face-flannel
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) = face-cloth(1).

face-fungus
ನಾಮವಾಚಕ
(ಆಡುಮಾತು) ಗಡ್ಡ; ದಾಡಿ.

face-lift
ನಾಮವಾಚಕ
  • ಮುಖಮರ್ದನ; ಮುಖತಿದ್ದಿಕೆ; ವಯಸ್ಸು ಕಾಣಿಸದಂತೆ ಮಾಡಲು ಸುಕ್ಕುಗಳೆದು ಮುಖವನ್ನು ಬಿಗಿಮಾಡುವ ಪ್ಲಾಸ್ಟಿಕ್‍ ಶಸ್ತ್ರಕ್ರಿಯೆ.
  • (ರೂಪಕವಾಗಿ) ರೂಪವರ್ಧನೆ; ಹೊಸದಾಗಿ ಯಾ ಹೆಚ್ಚು ಸುಂದರವಾಗಿ ಕಾಣುವಂತೆ ವಸ್ತು, ಕಟ್ಟಡ, ಮೊದಲಾದವುಗಳ ಮೇಲ್ಮೈಯನ್ನು ತಿದ್ದುವುದು, ಉತ್ತಮಗೊಳಿಸುವುದು.

  • face-lifting
    ನಾಮವಾಚಕ
    = face-lift(1).

    face-off
    ನಾಮವಾಚಕ
    ಆಟದ ಪ್ರಾರಂಭ; ಆಟ ಶುರುಮಾಡುವಿಕೆ; (ಲಕ್ರಾಸ್‍, ಐಸ್‍ಹಾಕಿ, ಮೊದಲಾದ ಆಟಗಳಲ್ಲಿ ಚೆಂಡು, ರಬ್ಬರ್‍ಚಕ್ರ, ಮೊದಲಾದವನ್ನು) ಉಭಯದಳಗಳ ಆಟಗಾರರಿಬ್ಬರ ಬ್ಯಾಟುಗಳ ನಡುವೆ ಆರಂಭಸೂಚಕವಾಗಿ ಇಡುವಿಕೆ.

    face-powder
    ನಾಮವಾಚಕ
    ಮುಖದ ಪೌಡರು; ಹೇಸ್‍ಪೌಡರು; ಮುಖದ ಹೊಳಪನ್ನು ತಗ್ಗಿಸಲು ಬಳಸುವ ಪೌಡರು.

    face-saving
    ನಾಮವಾಚಕ
    ಮುಖರಕ್ಷಣೆ; ಮಾನರಕ್ಷಣೆ; ಮುಖ ಉಳಿಸಿಕೊಳ್ಳುವಿಕೆ; ತನ್ನ ಪ್ರತಿಷ್ಠೆ ಯಾ ಗೌರವವನ್ನು ಕಾಪಾಡಿಕೊಳ್ಳುವ ಯಾ ಕಾಪಾಡುವ ಯಾವುದೇ ಕ್ರಿಯೆ ಯಾ ಯೋಜನೆ.

    face-worker
    ನಾಮವಾಚಕ
    ಕಲ್ಲಿದ್ದಲ ಗಣಿಯ ಮುಖಭಾಗದಲ್ಲಿ ಕೆಲಸ ಮಾಡುವ ಕೆಲಸಗಾರ.

    faced
    ಗುಣವಾಚಕ
    ಮುಖದ; ಮುಖವಿರುವ; ಮುಂಭಾಗವಿರುವ (ಸಾಮಾನ್ಯವಾಗಿ ವಿಶೇಷಣಗಳ ಜೊತೆಯಲ್ಲಿ ಬಳಕೆ): marble-faced brick building ಅಮೃತಶಿಲೆಯ ಮುಖದ ಇಟ್ಟಿಗೆ ಕಟ್ಟಡ.

    faceless
    ಗುಣವಾಚಕ
  • ಮುಖವಿಲ್ಲದ; ಮುಖರಹಿತ.
  • ವ್ಯಕ್ತಿತ್ವವಿಲ್ಲದ; ವೈಶಿಷ್ಟ್ಯವಿಲ್ಲದ: faceless mob ವೈಶಿಷ್ಟ್ಯವಿಲ್ಲದ ಗುಂಪು.
  • ಗುರುತಿಸಲಾಗದ; ಮರೆಮಾಡಿಕೊಂಡಿರುವ; ಉದ್ದೇಶಪೂರ್ವಕವಾಗಿ ಗುರುತಿಸಲಾಗದಂತೆ ಮಾಡಿಕೊಂಡಿರುವ: faceless kidnapper ಗುರುತಿಸಲಾಗದ ಅಪಹರಣಕಾರ.


  • logo