logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

faint-heartedness
ನಾಮವಾಚಕ
  • ಎದೆಗೇಡಿತನ; ಅಂಜುಕುಳಿತನ; ಅಂಜುಬುರುಕತನ; ಪುಕ್ಕತನ; ಪುಕ್ಕಲು; ಹೇಡಿತನ; ಭೀರುತ್ವ.
  • ಅರೆ ಮನಸ್ಸು; ದುರ್ಬಲತೆ.

  • faintish
    ಗುಣವಾಚಕ
  • ತುಸ ಅಸ್ಪಷ್ಟವಾಗಿರುವ; ಕಾಣಿಸುವುದೇ ಕಷ್ಟವಾದ.
  • ಸ್ವಲ್ಪ ಅರೆ ಮನಸ್ಸಿನ.

  • faintly
    ಕ್ರಿಯಾವಿಶೇಷಣ
  • ಅಸ್ಪಷ್ಟವಾಗಿ; ಮಸುಕು ಮಸುಕಾಗಿ; ಮಂಕಾಗಿ; ಮಲಿನವಾಗಿ.
  • ಕ್ಷೀಣವಾಗಿ; ಕೇಳಿಯೂ ಕೇಳದಂತೆ.
  • (ಪ್ರತಿಭಟನೆ ಮೊದಲಾದವುಗಳ ವಿಷಯದಲ್ಲಿ) ದುರ್ಬಲವಾಗಿ; ಬಲಹೀನವಾಗಿ; ಅರೆಮನಸ್ಸಿನಿಂದ.

  • faintness
    ನಾಮವಾಚಕ
  • ದುರ್ಬಲತೆ; ಬಲಹೀನತೆ; ನಿತ್ರಾಣ; ಅತಿಸುಸ್ತು; ಪೇಲವತೆ; ಬಳಲಿಕೆ.
  • ಅಂಜುಕುಳಿತನ; ಅಂಜುಬುರುಕತನ; ಪುಕ್ಕಲ ಸ್ವಭಾವ; ಹೃದಯದೌರ್ಬಲ್ಯ.
  • ಮೂರ್ಛೆ ಹೋಗುವಂತಿರುವುದು.
  • ಅಸ್ಪಷ್ಟತೆ; ಮಸುಕಾಗಿರುವಿಕೆ; ಮಂಕಾಗಿರುವಿಕೆ.
  • ಅರೆಮನಸ್ಸು; ದುರ್ಬಲತೆ.

  • faints
    ನಾಮವಾಚಕ
    (ಬಹುವಚನ) (ಆಸವನಕ್ರಿಯೆಯಲ್ಲಿ ಯಾ ಆಸವ ಇಳಿಸುವಾಗ ಮೊದಲಲ್ಲೂ ಕೊನೆಯಲ್ಲೂ ಹೊರಡುವ ಕಲ್ಮಷಗೂಡಿದ) ಅಶುದ್ಧ ಸಾರಾಯಿ.

    fair
    ನಾಮವಾಚಕ ನುಡಿಗಟ್ಟು
    a day after the fair ಸಂತೆ ಮುಗಿದ ಮೇಲೆ; ಕಾಲ ಈರಿದ ಮೇಲೆ.
  • ಜಾತ್ರೆ; ಪರಿಷೆ; ಸಂತೆ; ಸನ್ನದು, ಕಾನೂನು ಯಾ ರೂಢಿ ಅನುಸರಿಸಿ ಗೊತ್ತಾದ ಸ್ಥಳ ಮತ್ತು ಕಾಲಗಳಲ್ಲಿ ವ್ಯಾಪಾರಕ್ಕಾಗಿ, ಅನೇಕ ವೇಳೆ ಪ್ರದರ್ಶನ, ವಿನೋದಗಳಿಂದ ಕೂಡಿ, ಆಗಾಗ ಸೇರುವ ನೆರವಿ.
  • ಪ್ರದರ್ಶನ; ಮುಖ್ಯವಾಗಿ ವಿಶೇಷ ಉತ್ಪನ್ನಗಳನ್ನು ಏರ್ಪಡಿಸುವ ಪ್ರದರ್ಶನ.
  • = funfair.

  • fair
    ಗುಣವಾಚಕ ನುಡಿಗಟ್ಟು
  • ಚೆಲುವಾದ; ಅಂದವಾದ; ಚೆನ್ನಾದ; ಸೊಗಸಾದ; ಸುಂದರವಾದ; ರಮ್ಯ.
  • ತೃಪ್ತಿಕರ: his work is only fair, certainly not distinguished ಅವನ ಕೆಲಸ ತೃಪ್ತಿಕರವಾಗಿದೆ ಅಷ್ಟೆ, ಖಂಡಿತ ಶ್ರೇಷ್ಠಮಟ್ಟದ್ದಲ್ಲ.
  • ಸಮೃದ್ಧ; ಯಥೇಚ್ಛವಾದ; ಹೇರಳವಾದ; ಪುಷ್ಕಳ; ಸಾಕಷ್ಟು: a fair heritage ಹೇರಳವಾದ ಪಿತ್ರಾರ್ಜಿತ.
  • ಹೊರಗೆ ಚೆನ್ನಾಗಿ ತೋರುವ; ಮೇಲೆ ನ್ಯಾಯವಾಗಿ ಕಾಣುವ; ಮೇಲ್ನೋಟಕ್ಕೆ ಸರಿಯಿರಬಹುದೆಂದು ತೋರುವ, ಒಪ್ಪುವಂತೆ ಕಾಣುವ: fair speeches ನ್ಯಾಯಸಮ್ಮತವಾಗಿ ತೋರುವ ಭಾಷಣಗಳು.
  • ನಸು ಹೊಂಬಣ್ಣದ; ಕಪ್ಪಲ್ಲದ; ಗೌರ: a fair complexion ಗೌರವರ್ಣ.
  • ಚೊಕ್ಕಟವಾದ; ಶುಭ್ರ; ಸ್ವಚ್ಛ; ನಿರ್ಮಲವಾದ: fair water ನಿರ್ಮಲವಾದ ನೀರು.
  • ಚೊಕ್ಕ; ಸ್ಪಷ್ಟ; ತಪ್ಪಿಲ್ಲದ: fair copy ಚೊಕ್ಕ ಪ್ರತಿ; ತಪ್ಪಿಲ್ಲದ ಪ್ರತಿ.
  • ಕಳಂಕವಿಲ್ಲದ; ನಿಷ್ಕಳಂಕ; ನಿರ್ದುಷ್ಟ; ಕುಂದಿಲ್ಲದ: fair fame ನಿಷ್ಕಳಂಕ ಯಶಸ್ಸು.
  • ನ್ಯಾಯವಾದ; ಪಕ್ಷಪಾತವಿಲ್ಲದ; ನ್ಯಾಯಪರ; ನಿಷ್ಪಕ್ಷಪಾತವಾದ; ನ್ಯಾಯಸಮ್ಮತವಾದ; ಕ್ರಮಬದ್ಧವಾದ; ಯುಕ್ತವಾದ.
  • (ವಸ್ತು, ಆರೋಗ್ಯ, ಮೊದಲಾದವುಗಳ ವಿಷಯದಲ್ಲಿ) ತಕ್ಕಮಟ್ಟಿನ; ಸಾಮಾನ್ಯ ಗುಣದ; ಸಾಧಾರಣಮಟ್ಟದ; ಇದ್ದ ಮಟ್ಟಿಗೆ ಚೆನ್ನಾಗಿರುವ; ಮಧ್ಯಮಗುಣದ.
  • (ಹವೆಯ ವಿಷಯದಲ್ಲಿ) ಹಿತವಾದ; ಗಾಳಿಮಳೆಯಿಲ್ಲದ.
  • (ಗಾಳಿಯ ವಿಷಯದಲ್ಲಿ) (ಹಡಗು, ವಿಮಾನ, ಮೊದಲಾದವುಗಳಿಗೆ) ಅನುಕೂಲವಾದ; ಸಾಧಕವಾದ.
  • (ಭವಿಷ್ಯ ಮೊದಲಾದವುಗಳ ವಿಷಯದಲ್ಲಿ) ಭರವಸೆ ಕೊಡುವ; ಆಶಾದಾಯಕ.
  • (ಮಾತು, ಕ್ರಮ, ವಿಧಾನಗಳ ವಿಷಯದಲ್ಲಿ) ನಯವಾದ; ಮೃದುವಾದ; ಘರ್ಷಣೆಗಳಿಲ್ಲದ.
  • ತಡೆಯಿಲ್ಲದ; ಅಡಚಣೆಯಿಲ್ಲದ; ಸಲೀಸಾದ.
  • (ಆಕಾಶದ ವಿಷಯದಲ್ಲಿ) ನಿರ್ಮಲ; ಮೋಡಗಳಿಲ್ಲದ.
  • (ಬ್ರಿಟಿಷ್‍ ಪ್ರಯೋಗ, ಆಸ್ಟ್ರೇಲಿಯ, ನ್ಯೂಸಿಲಂಡ್‍) (ಅಶಿಷ್ಟ) ಪೂರ್ತಿ ಸಂಪೂರ್ಣವಾದ.

  • fair
    ನಾಮವಾಚಕ ಪದಗುಚ್ಛ ನುಡಿಗಟ್ಟು
    the fair ಮಹಿಳೆಯರು; ಹೆಣ್ಣುಮಕ್ಕಳು.
  • (ಪ್ರಾಚೀನ ಪ್ರಯೋಗ) ಸುಂದರವಾದ ಹೆಂಗಸು.
  • ಸುಂದರವಾದ, ಅಂದವಾದ ವಸ್ತು.
  • ಹೆಣ್ಣುಮಗಳು; ಹೆಂಗಸು: a fair ಒಬ್ಬ ಹೆಂಗಸು.
  • ಪ್ರಿಯೆ; ನಲ್ಲೆ.

  • fair
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಹವೆಯ ವಿಷಯದಲ್ಲಿ) ಹಿತವಾಗು; ಅನುಕೂಲವಾಗು.
  • (ದಸ್ತಾವೇಜಿನ) ಶುದ್ಧಪ್ರತಿ ಮಾಡು; ಚೊಕ್ಕಪ್ರತಿ ಮಾಡು; ಚೊಕ್ಕಪ್ರತಿ ತಯಾರು ಮಾಡು.
  • (ನೌಕಾನಿರ್ಮಾಣ ಮೊದಲಾದವುಗಳಲ್ಲಿ ನೌಕೆಯ ಮೇಲ್ಮೈ ಮೊದಲಾದವನ್ನು) ನಯಗೊಳಿಸು; ಮಟ್ಟಸಮಾಡು.

  • fair
    ಕ್ರಿಯಾವಿಶೇಷಣ ಪದಗುಚ್ಛ
  • ಚೆನ್ನಾಗಿ; ಅಂದವಾಗಿ; ಸೊಗಸಾಗಿ.
  • ಪೂರ್ತಿಯಾಗಿ; ಸಂಪೂರ್ಣವಾಗಿ; ಪೂರ್ಣವಾಗಿ: it all happened so suddenly that it fair took my breath away ಅದೆಲ್ಲ ಎಷ್ಟು ಹಠಾತ್ತಾಗಿ ಆಗಿಹೋಯಿತೆಂದರೆ ನನ್ನ ಉಸಿರು ಕಟ್ಟಿಹೋಯಿತು, ಪೂರ್ತಿ ನಿಂತುಹೋಯಿತು.
  • ಸರಿಯಾಗಿ; ನಿಖರವಾಗಿ; ಕರಾರುವಾಕ್ಕಾಗಿ; ಸಂಪೂರ್ಣವಾಗಿ.


  • logo